ಮೂಡಂಬೈಲು: ವಿಟ್ಲ ವಲಯ ಮಟ್ಟದ ಚೆಸ್ ಪಂದ್ಯಾಟ

0

ಪುತ್ತೂರು: ವಿಟ್ಲ ವಲಯ ಮಟ್ಟದ ಚೆಸ್ ಪಂದ್ಯಾಟವು ಜು.11 ರಂದು ಪುಣಚ ಮೂಡಂಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ವಿಟ್ಲ ವಲಯ ವ್ಯಾಪ್ತಿಯ 20 ಶಾಲೆಗಳಿಂದ ಒಟ್ಟು 152 ವಿದ್ಯಾರ್ಥಿಗಳು ಚೆಸ್ ಪಂದ್ಯದಲ್ಲಿ ಭಾಗವಹಿಸಿದ್ದರು. ಆರು ವಿಭಾಗಗಳಲ್ಲಿ ಚೆಸ್ ಪಂದ್ಯಾಟ ನಡೆಯಿತು.

ಪಂದ್ಯಾಟದಲ್ಲಿ ಬಾಲಕರ ವಿಭಾಗದಲ್ಲಿ ಶ್ರೀಕೃಷ್ಣ – ಸತ್ಯಸಾಯಿ ಅಳಿಕೆ, ಕೀರ್ತಿರಾಜ್ – ಸ. ಹಿ.ಪ್ರಾ ಶಾಲೆ ವಿಟ್ಲ, ಭವಿಷ್ – ಸರಸ್ವತಿ ವಿದ್ಯಾಲಯ ಕನ್ಯಾನ, ದಯಾಶಂಕರ – ಸ.ಹಿ.ಪ್ರಾ.ಶಾಲೆ ನೀರ್ಕಜೆ, ಸಮರ್ಥ – ಸತ್ಯಸಾಯಿ ಅಳಿಕೆ, ಬಾಲಕಿಯರ ವಿಭಾಗದಲ್ಲಿ ಅನನ್ಯ – ಸ.ಹಿ.ಪ್ರಾ ಶಾಲೆ ಮೂಡಂಬೈಲು, ತನ್ವಿ – ಸ.ಹಿ.ಪ್ರಾ ಶಾಲೆ ಮೂಡಂಬೈಲು, ವಂದನಾ – ಸರಸ್ವತಿ ವಿದ್ಯಾಲಯ ಕನ್ಯಾನ, ಪ್ರತೀಕ್ಷಾ – ಸ.ಹಿ.ಪ್ರಾ ಶಾಲೆ ಮೂಡಂಬೈಲು, ದುರ್ಗಾಶ್ರೀ – ಸರಸ್ವತಿ ವಿದ್ಯಾಲಯ ಕನ್ಯಾನ, 17 ವರ್ಷದ ವಿಭಾಗದಲ್ಲಿ ಬಾಲಕರಲ್ಲಿ ನಿಹಾರ್ – ಸತ್ಯಸಾಯಿ ಅಳಿಕೆ, ಅನುಷ್ – ಸತ್ಯಸಾಯಿ ಅಳಿಕೆ, ಮಂದಾರ್ ಭಟ್ – ಸತ್ಯಸಾಯಿ ಅಳಿಕೆ, ಅಭಿರಾಮ್ – ಗುರುದೇವ ಪ್ರೌಢಶಾಲೆ ಒಡಿಯೂರು, ತೇಜಸ್ – ಸತ್ಯಸಾಯಿ ಅಳಿಕೆ, ಬಾಲಕಿಯರ ವಿಭಾಗದಲ್ಲಿ ವಿದ್ಯಾಲಕ್ಷ್ಮಿ – ಗುರುದೇವ ಪ್ರೌಢಶಾಲೆ ಒಡಿಯೂರು, ಮನ್ವಿತ – ಗುಣಶ್ರೀ ಪ್ರೌಢಶಾಲೆ ಕುಳ, ಮೋಕ್ಷಿತಾ – ಸರಕಾರಿ ಪ್ರೌಢಶಾಲೆ ಕೇಪು, ಪಲ್ಲವಿ – ಸರಸ್ವತಿ ವಿದ್ಯಾಲಯ ಕನ್ಯಾನ, ದೀಪ್ತಿ- ಸರಕಾರಿ ಪ್ರೌಢಶಾಲೆ ಕೇಪು, 8ನೇ ತರಗತಿ ಬಾಲಕರ ವಿಭಾಗದಲ್ಲಿ ಮನ್ವಿತ್ – ಸತ್ಯಸಾಯಿ ಅಳಿಕೆ, ಸೃಜನ್ ಕೃಷ್ಣ – ಸರಸ್ವತಿ ವಿದ್ಯಾಲಯ ಕನ್ಯಾನ, ಬಾಲಕಿಯರ ವಿಭಾಗದಲ್ಲಿ ಶ್ರೀಯಾ – ಸರಸ್ವತಿ ವಿದ್ಯಾಲಯ ಕನ್ಯಾನ ಹಾಗೂ ಸಮೀಕ್ಷಾ – ಸ.ಹಿ.ಪ್ರಾ. ಶಾಲೆ ಪಡಿಬಾಗಿಲುರವರುಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here