ಪುತ್ತೂರು: ಪುತ್ತೂರು -ಕಾವು ಲಯನ್ಸ್ ಕ್ಲಬ್ ಅಧೀನದಲ್ಲಿ ಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ಫೌಂಡೇಷನ್ ಸಹಬಾಗಿತ್ವದಲ್ಲಿ ನೂತನವಾಗಿ ನಿರ್ಮಾಣಗೊಂಡ ಲಯನ್ಸ್ ಮೆಡಿಕಲ್ ಲ್ಯಾಬೋರೇಟರಿ ಇದರ ಲೋಕಾರ್ಪಣಾ ಕಾರ್ಯಕ್ರಮ ಜು.13 ರಂದು ಕಾವು ಚಿಕ್ಕಪೇಟೆಯಲ್ಲಿರುವ ಅಕ್ಷಯ ಕಾಂಪ್ಲೆಕ್ಸ್ನಲ್ಲಿ ನಡೆಯಲಿದೆ.
ಸುಮಾರು ೮ ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಲ್ಯಾಬೋರೇಟರಿ ಗ್ರಾಮೀಣ ಭಾಗವಾದ ಕಾವಿನಲ್ಲಿ ಅತಿ ದೊಡ್ಡ ಲ್ಯಾಬೋರೇಟರಿ ಪ್ರಾರಂಭಗೊಳ್ಳುತ್ತಿರುವುದು ಸಾರ್ವಜನಿಕ ವಲಯದಲ್ಲಿ ಸಂತಸಕ್ಕೆ ಕಾರಣವಾಗಿದೆ.
ಸಭಾ ಕಾರ್ಯಕ್ರಮವು ಜನಮಂಗಳ ಸಬಾ ಭವನದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯಲಿದ್ದು ಕಾರ್ಯಕ್ರಮವನ್ನು ಲಯನ್ ಮಲ್ಟಿಪಲ್ ಕೌನ್ಸಿಲ್ ಚಯರ್ಮೆನ್ ವಸಂತಶೆಟ್ಟಿ ಪಿಎಂಜೆಎಫ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಸ್ ಅಂಜೀತ್ ಶೆಟ್ಟಿ, ಲಯನ್ ಡಾ. ಮೆಲ್ವಿನ್ ಡಿಸೋಜಾ , ಎಂಜೆಎಫ್, ಲಯನ್ ಭಾರತೀ ಬಿ ಎಂ ಪಿಎಂಜೆಫ್, ಪ್ರಾಂತೀಯ ಅಧ್ಯಕ್ಷರಾದ ಕಾವು ಹೇಮನಾಥ ಶೆಟ್ಟಿ, ಝೋನ್ ಚೆಯರ್ಮೆನ್ ಶಿವಪ್ರಸಾದ್ ಶೆಟ್ಟಿ, ಕೊಡಗು ಜಿಲ್ಲಾ ಮಾಜಿ ರೀಜನಲ್ ಚಯರ್ಪರ್ಸನ್ ಕೆ ಎಂ ಜಗದೀಶ್, ಅಡ್ಯನಡ್ಕ ಗ್ರಾಪಂ ಅಧ್ಯಕ್ಷೆ ಸೌಮ್ಯಾ, ಕಾವು ಪಂಚಲಿಂಗೇಶ್ವರ ದೇವಸ್ಥಾನದ ಮೆನೆಜಿಂಗ್ ಟ್ರಸ್ಟಿ ಚಂದ್ರಶೇಖರರಾವ್, ಮಾಡನ್ನೂರು ಜುಮಾ ಮಸೀದಿ ಮಾಜಿ ಅಧ್ಯಕ್ಷ ಕೆ ಕೆ ಇಬ್ರಾಹಿಂ ಹಾಜಿ ಮೊದಲದವರು ಭಾಗವಹಿಸಲಿದ್ದಾರೆ ಎಂದು ಪುತ್ತೂರು ಕಾವು ಲಯನ್ಸ್ ಕ್ಲಬ್ ಅಧ್ಯಕ್ಷ ಪಾವನರಾಮ, ಕಾರ್ಯದರ್ಶಿ ದೇವಣ್ಣ ರೈ, ಕೋಶಾಧಿಕಾರಿ ಅಮ್ಮು ರೈ ತಿಳಿಸಿದ್ದಾರೆ.
ಪುತ್ತೂರು-ಕಾವು ಲಯನ್ಸ್ ಕ್ಲಬ್ ಪದಗ್ರಹಣ ಸಮಾರಂಭ
ಇದೇ ಸಂದರ್ಬದಲ್ಲಿ ಪುತ್ತೂರು-ಕಾವು ಲಯನ್ಸ್ ಕ್ಲಬ್ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜನಮಂಗಳ ಸಭಾ ಭವನದಲ್ಲಿ ನಡೆಯಲಿದೆ.
ನೂತನ ಅಧ್ಯಕ್ಷರಾಗಿ ಎರಡನೇ ಬಾರಿಗೆ ಆಯ್ಕೆಯಾದ ಪಾವನರಾಮ, ಕಾರ್ಯದರ್ಶಿ ಜಗನ್ನಾಥ್ ರೈ ಗುತ್ತು, ಕೋಶಾಧಿಕಾರಿಯಾಗಿ ಕೃಷ್ಣರಾಜ್ ಅಧಿಕಾರ ಸ್ವೀಕರಿಸಲಿದ್ದಾರೆ. ನೂತನ ಪದಾಧಿಕಾರಿಗಳಿಗೆ ಜಿಲ್ಲಾ ಉಪ ಗವರ್ನರ್ ಡಾ. ವೆಲ್ವಿನ್ ಡಿಸೋಜಾ ಪ್ರತಿಜ್ಞಾ ವಿಧಿ ಬೋದಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಲಯನ್ ಇಂಟರ್ನ್ಯಾಷನಲ್ ಪ್ರೋಗ್ರಾಮ್ ಜಿಲ್ಲಾ ಸಂಯೋಜಕ ಎಚ್ ಎಂ ತಾರನಾಥ ಭಾಗವಹಿಸಲಿದ್ದಾರೆ ಎಂದು ಕ್ಲಬ್ ಪ್ರಕಟನೆ ತಿಳಿಸಿದೆ.