ಸವಣೂರು ಸಿ ಎ ಬ್ಯಾಂಕಿನಲ್ಲಿ ನವೋದಯ ಸದಸ್ಯರಿಗೆ ಸಮವಸ್ತ್ರ ವಿತರಣೆ ಮತ್ತು ಆದಾರ್ ಕಾರ್ಡಿಗೆ ಮೊಬೈಲ್ ನಂಬ್ರ ಜೋಡಣಾ ಅಭಿಯಾನ

0

 

ಪುತ್ತೂರು:   ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನವೋದಯ ಚಾರಿಟೇಬಲ್ ಟ್ರಸ್ಟ್ (ರಿ) ಮಂಗಳೂರು ಇದರ ವತಿಯಿಂದ ನವೋದಯ ಸ್ವ ಸಹಾಯ ಸದಸ್ಯರಿಗೆ ಉಚಿತವಾಗಿ ನೀಡಲಾದ ಸಮವಸ್ತ್ರ ವಿತರಣಾ ಕಾರ್ಯಕ್ರಮ ಮತ್ತು ಅಂಚೆ ಇಲಾಖೆಯ ಸಹಯೋಗದೊಂದಿಗೆ ಆದಾರ್ ಕಾರ್ಡಿಗೆ ಮೊಬೈಲ್ ನಂಬ್ರ ಜೋಡಣಾ ಅಭಿಯಾನ ನಡೆಯಿತು.


ಸಂಘದ ಅದ್ಯಕ್ಷರಾದ ಶ್ರೀ ಗಣೇಶ್ ನಿಡ್ವಣ್ಣಾಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಮಹಿಳೆಯರ ಸ್ವಾಭಿಮಾನಿ ಬದುಕಿಗೆ ಪಣತೊಟ್ಟು ನವೋದಯ ಚಾರಿಟೇಬಲ್ ಟ್ರಸ್ಟ್ ನ ಮುಖಾಂತರ ವಿವಿಧ ಕಾರ್ಯಕ್ರಮಗಳೊಂದಿಗೆ, ಸಾಲ ಸೌಲಭ್ಯ ಒದಗಿಸಿ, ಉಚಿತ ಸಮವಸ್ತ್ರ ನೀಡಿದ ಟ್ರಸ್ಟಿನ ಅಧ್ಯಕ್ಷರಾದ ಡಾ.ಎಂ.ಎನ್ ರಾಜೇಂದ್ರ ಕುಮಾರ್ ರವರಿಗೆ ಅಭಿನಂದನೆ ಸಲ್ಲಿಸಿದರು. ಇವತ್ತು ಬ್ಯಾಂಕಿಂಗ್ ವ್ಯವಹಾರಕ್ಕೆ ಆದಾರ್ ಕಾರ್ಡಿಗೆ ಮೊಬೈಲ್ ನಂಬ್ರ ಲಿಂಕ್ ಮಾಡುವುದು ಅನಿವಾರ್‍ಯವಾಗಿದೆ ಎಂದರು.

ಕಾರ್ಯಕ್ರಮದ ಸಭಾದ್ಯಕ್ಷತೆ ವಹಿಸಿದ ಸವಣೂರು ಗ್ರಾಮ ಪಂಚಾಯತಿನ ಅಧ್ಯಕ್ಷರಾದ  ರಾಜೀವಿ ವಿ ಶೆಟ್ಟಿ ಮಾತನಾಡಿ ನಾನು ಕೂಡ ನವೋದಯ ಸದಸ್ಯಳಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ತುಂಬಾ ಸಂತೋಷದ ವಿಷಯವಾಗಿದೆ ಎಂದರು. ಅಂಚೆ ಇಲಾಖೆಯ ಅಧಿಕಾರಿ  ಶಿಹಾನ್ ಮಾತನಾಡಿ ಸುಮಾರು ೧೨೦ ಮಿಕ್ಕಿ ಜನರು ಆದಾರ್ ಕಾರ್ಡಿಗೆ ಮೊಬೈಲ್ ನಂಬ್ರ ಜೋಡಿಸುವುದರ ಮುಖಾಂತರ ಸವಣೂರಿನಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು ಇದಕ್ಕೆ ಅವಕಾಶ ಮಾಡಿಕೊಟ್ಟಸವಣೂರು ಸಿ ಎ ಬ್ಯಾಂಕಿನ ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಎಸ್.ಸಿ.ಡಿ.ಸಿ.ಸಿ ಬ್ಯಾಂಕಿನ ಸುಪರ್ ವೈಸರ್ ಮಾತನಾಡಿದ ಶ್ರೀ ವಸಂತ್ ಎಸ್ ಮಾತನಾಡಿ ಸವಣೂರು ಸಿ.ಎ ಬ್ಯಾಂಕು ವಿವಿದ ಕಾರ್ಯಕ್ರಮದ ಮೂಲಕ ಗ್ರಾಮೀಣ ಪ್ರದೇಶದ ಜನರಿಗೆ ಉತ್ತಮ ಸೇವೆಯನ್ನು ನೀಡುತ್ತಿದೆ ಎಂದರು. ವೇದಿಕೆಯಲ್ಲಿ ಗ್ರಾಮ ಪಂಚಾಯತಿನ ಅಭಿವೃಧ್ಧಿ ಅಧಿಕಾರಿ ಶ್ರೀ ಮನ್ಮಥ ಉಪಸ್ಥಿತರಿದ್ದು ಶುಭ ಹಾರೈಸಿದರು.

ಪ್ರೇರಕಿ ಶ್ರೀಮತಿ ಪ್ರೇಮ ಪ್ರಾರ್ಥಿಸಿ, ಸಂಘದ ಉಪಾಧ್ಯಕ್ಷರಾದ  ತಾರನಾಥ ಕಾಯರ್ಗ ಸ್ವಾಗತಿಸಿ , ಮುಖ್ಯಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಕಾರ್ಯಕ್ರಮ ನಿರ್ವಹಿಸಿ, ನಿರ್ದೇಶಕರಾದ ನೋಟರಿ ನ್ಯಾಯವಾದಿ ಮಹಾಬಲ ಶೆಟ್ಟಿ ವಂದಿಸಿದರು. ಸಂಘದ ನಿರ್ದೇಶಕರುಗಳಾದ  ಉದಯ ರೈ ಮಾದೋಡಿ,  ಕರುಣಾಕರ ಪೂಜಾರಿ ಪಟ್ಟೆ, ತಿಮ್ಮಪ್ಪ ಗೌಡ ಮುಂಡಾಳ,  ಸೋಮನಾಥ ಕನ್ಯಾಮಂಗಲ, ಶ್ರೀ ತನಿಯಪ್ಪ ನಾಯ್ಕ ಕಾರ್ಲಾಡಿ,  ಚೇತನ್ ಕುಮಾರ್ ಕೋಡಿಬೈಲು,  ನಿರ್ಮಲ ಕೇಶವ ಗೌಡ, ಶ್ರೀಮತಿ ವೇದಾವತಿ ಕೆಡೆಂಜಿ, ಉಪಕಾರ್ಯ  ನಿರ್ವಹಣಾಧಿಖಾರಿ ಶ್ರೀಮತಿ ಜಲಜಾ ಎಚ್ ರೈ , ಶಾಖಾ ವ್ಯವಸ್ಥಾಪಕರಾದ ಪಕೀರ ಎ ರವರು ನವೋದಯ ಸದಸ್ಯರಿಗೆ ಸಮವಸ್ತ್ರ ವಿತರಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿನ ಉಪಾದ್ಯಕ್ಷ  ಶೀನಪ್ಪ ಶೆಟ್ಟಿ ನೆಕ್ರಾಜೆ, ಪಂಚಾಯತ್ ಸದಸ್ಯರು , ಮಾಸ್ ಲಿ ಇದರ ವ್ಯವಸ್ಥಾಪಕರಾದ  ಯತೀಶ್, ಮತ್ತು ಸಂಘದ ಸಿಬ್ಬಂಧಿಗಳು ಹಾಜರಿದ್ದರು.
.

LEAVE A REPLY

Please enter your comment!
Please enter your name here