ಕೊಡಜೆಯ ನಿದಾ ಆರ್ಕೆಡ್ ನಲ್ಲಿ ಕೆ.ಎಸ್. ಫ್ಯಾಮಿಲಿ ರೆಸ್ಟೋರೆಂಟ್ ಶುಭಾರಂಭ

0ವಿಟ್ಲ: ಮಾಣಿ – ಮೈಸೂರು ಹೆದ್ದಾರಿಯ ಕೊಡಾಜೆ ಬಳಿಯ ದೇವಿನಗರದಲ್ಲಿರುವ ನಿದಾ ಆರ್ಕೆಡ್ ನಲ್ಲಿ ಸಸ್ಯಹಾರಿ ಮತ್ತು ಮಾಂಸಹಾರಿ ಖಾದ್ಯಗಳ ಕೆ.ಎಸ್. ಫ್ಯಾಮಿಲಿ ರೆಸ್ಟೋರೆಂಟ್ ಜು.೧೧ರಂದು ಶುಭಾರಂಭಗೊಂಡಿತು. ಉಡುಪಿ ಚಿಕ್ಕಮಂಗಳೂರು ಸಂಯುಕ್ತ ಜಮಾತ್ ಖಾಝಿ ಶೈಖುನಾ ಅಬ್ದುಲ್ ಹಮೀದ್ ಮುಸ್ಲಿಯಾರ್ ದುವಾ ನೆರವೇರಿಸಿದರು.

ಇರ್ಷಾದ್ ದಾರಿಮಿ ಅಲ್ ಝಹರಿ ಮಿತ್ತಬೈಲ್ ರವರು ಮೌಲೀದ್ ಪಾರಾಯಣಕ್ಕೆ ನೇತೃತ್ವ ನೀಡಿದರು.

ಮಾಜಿ ಸಚಿವ ರಮಾನಾಥ ರೈ, ಪಾಣಿಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಾಲಕೃಷ್ಣ ಆಳ್ವ ಕೊಡಾಜೆ, ಸದಸ್ಯರಾದ ಮೆಲ್ವಿನ್ ಕಿಶೋರ್ ಮಾರ್ಟೀಸ್, ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಚ್ಚಿದಾನಂದ, ಸದಸ್ಯರಾದ ಅಬ್ದುಲ್ ಲತೀಫ್, ಶ್ರೀಧರ್ ರೈ, ಸ್ಥಳೀಯರಾದ ನಿರಂಜನ್ ರೈ, ಅಬ್ಬಾಸ್ ಕೆ.ಎಸ್. ಕಬಕ, ಹರ್ಷಾದ್ ಕೆ.ಎಸ್.ಕಬಕ, ಹನೀಸ್ ಕೆ.ಎಸ್.ಕಬಕ, ಉಬೈದ್ ವಿಟ್ಲ ಬಜಾರ್ ಕಬಕ, ಶಮೀರ್ ಎಸ್.ಮಾರ್ಕ್ ವಿಟ್ಲ, ನವಾಝ್ ಎಸ್.ಮಾರ್ಕ್ ವಿಟ್ಲ, ಉದೈಫ್ ವಿಟ್ಲ ಮೊದಲಾದವರು ಆಗಮಿಸಿ ಸಂಸ್ಥೆಗೆ ಶುಭಹಾರೈಸಿದರು. ಸಂಸ್ಥೆಯ ಪಾಲುದಾರರಾದ ಆಸೀಫ್ ಕೆ.ಎಸ್. ಸ್ವಾಗತಿಸಿ ಇನ್ನೋರ್ವ ಪಾಲುದಾರರಾದ ಹಸೈನಾರ್ ಮಂಗಿಲಪದವು ವಂದಿಸಿದರು.

ಗ್ರಾಹಕರ ಸಹಕಾರ ಅಗತ್ಯ

ಮಾಣಿ ಮೈಸೂರು ಹೆದ್ದಾರಿಯ ಕೊಡಾಜೆ ಬಳಿಯ ನಿದಾ ಕಾಂಪ್ಲೆಕ್ಸ್ ನಲ್ಲಿ ಕೆ.ಎಸ್. ಫ್ಯಾಮಿಲಿ ರೆಸ್ಟೋರೆಂಟ್ ಎಂಬ ನಮ್ಮ ಸಂಸ್ಥೆ ಶುಭಾರಂಭಗೊಂಡಿದೆ. ಈ ಭಾಗದ ಜನರಿಗೆ ಇಷ್ಟವಾಗುವ ಚೈನೀಸ್ ಹಾಗೂ ಇಂಡಿಯನ್ ಖಾದ್ಯಗಳು ಇಲ್ಲಿ ಲಭ್ಯವಿದೆ. ಸಂಸ್ಥೆಯ ಮುಂಭಾಗದಲ್ಲಿ ವಿಶಾಲವಾದ ಪಾರ್ಕಿಂಗ್ ಸೌಲಭ್ಯವಿದ್ದು, ಸಣ್ಣ ಸಣ್ಣ ಕಾರ್ಯಕ್ರಮಗಳನ್ನು ಮಾಡಲು ಅನುಕೂಲಕರವಾದ ಪಾರ್ಟಿ ಹಾಲ್ ನಮ್ಮಲ್ಲಿದೆ. ಮದುವೆ ಸಹಿತ ಇನ್ನಿತರ ಶುಭಸಮಾರಂಭಗಳಿಗೆ ಬೇಕಾದ ಕ್ಯಾಟರಿಂಗ್ ವ್ಯವಸ್ಥೆಯೂ ಇದ್ದು, ಬರ್ತ್ ಡೆ ಕೇಕ್ ಕೂಡ ನಮ್ಮಲ್ಲಿದ್ದು ಗ್ರಾಹಕರ ಸಹಕರಿಸಬೇಕಾಗಿ ವಿನಂತಿಆಸೀಫ್ ಕೆ.ಎಸ್. ಸಂಸ್ಥೆಯ ಪಾಲುದಾರರು

LEAVE A REPLY

Please enter your comment!
Please enter your name here