ಸುದ್ದಿ ಬಂಟ್ವಾಳ ಚಾನೆಲ್ ಪ್ರತಿನಿಧಿಗಳ ಸಭೆ

0

ಬಂಟ್ವಾಳ: ಸುದ್ದಿ ಪತ್ರಿಕೆ, ವೆಬ್ ಸೈಟ್ ಮತ್ತು ಚಾನೆಲ್ ಡಾ.ಯು.ಪಿ.ಶಿವಾನಂದರವರ ಅಧ್ಯಕ್ಷತೆ ಮತ್ತು ಸಂಪಾದಕತ್ವದಲ್ಲಿ ವಿಶ್ವಾಸಾರ್ಹವಾಗಿ ಕೆಲಸ ನಿರ್ವಹಿಸುತ್ತಿದೆ. ಈಗ ಅದರ ವ್ಯಾಪ್ತಿ ಬಂಟ್ವಾಳ ಮತ್ತು ಮಂಗಳೂರಿಗೆ ವಿಸ್ತಾರವಾಗುತ್ತಿದೆ. ಈಗಾಗಲೇ ಸುದ್ದಿ ಮಂಗಳೂರು ಚಾನೆಲ್ ಕಾರ್ಯಾರಂಭಿಸಿದ್ದು, ಸುದ್ದಿ ಬಂಟ್ವಾಳ ಚಾನೆಲ್‌ನ ಪ್ರತಿನಿಧಿಗಳ ಸಭೆಯನ್ನು ಬಿ.ಸಿ.ರೋಡ್‌ನ ಹೋಟೆಲ್ ರಂಗೋಲಿ ಸಭಾಭವನದಲ್ಲಿ ನಡೆಸಲಾಯಿತು.

ಈ ವೇಳೆ ಮಾತನಾಡಿದ ಸುದ್ದಿ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಡಾ.ಯು.ಪಿ. ಶಿವಾನಂದರವರು, ಸಮಾಜಮುಖಿ ಕಾಳಜಿ ಹೊಂದಿರುವರು, ಪ್ರಾಮಾಣಿಕರು, ಮಾಹಿತಿ ನೀಡುವವರೇ ನಮ್ಮ ಪ್ರತಿನಿಧಿಗಳೆಂದರು. ಕೆಲಸ ಮಾಡುವ ಮನಸ್ಸಿದ್ದರೆ, ಕಾಳಜಿಯೂ ಇದ್ದರೆ ಪತ್ರಕರ್ತನಾಗಬಹುದು. ನಾವು ಪ್ರತಿನಿಧಿಗಳ ಮೇಲೆ ವಿಶ್ವಾಸವಿಡುತ್ತೇವೆ, ಯಾಕೆಂದರೆ ಜನರು ಅವರ ಮೇಲೆ ವಿಶ್ವಾಸವಿಟ್ಟಿರುತ್ತಾರೆ ಎಂದರು. ನಾವು ಸಮಾಜದ ಪರ. ಯಾವ ಪಕ್ಷದ ಪರವೂ ಅಲ್ಲ, ಪ್ರತಿನಿಽಗಳು ಹಾಗೆಯೇ ಇರಬೇಕೆಂದು ಕರೆ ನೀಡಿದರು. ಸುದ್ದಿ ಚಾನೆಲ್, ಪತ್ರಿಕೆ, ವೆಬ್‌ಸೈಟ್ ಹೇಗೆ ಕೆಲಸಮಾಡಬೇಕು ಎಂದು ತಿಳಿಸಿಕೊಟ್ಟರು.

ಬಂಟ್ವಾಳ ಪ್ರತಿನಿಧಿಗಳಾದ ಚಂದ್ರಹಾಸ್ ಮುರ್ತಾಡಿ, ಕಡೇಶಿವಾಲಯ, ಕೆದಿಲ, ಪೆರ್ನೆಯ ಪ್ರತಿನಿಽ ಅಕ್ಷಯ್, ಸಜಿಪ ಮುನ್ನೂರಿನ ಮಹಮ್ಮದ್ ಹ್ಯಾರೀಸ್, ಮಾಣಿಯ ಅಶ್ವಥ್ ಬರಿಮಾರು, ಬಿ.ಸಿ.ರೋಡಿನ ಸತೀಶ್ ಕುಮಾರ್, ಅಲ್ಲಿಪಾದೆಯ ಸಂಪತ್ ಕುಮಾರ್, ಸಿದ್ದಕಟ್ಟೆಯ ಅಲ್ತಾ- ಅಹಮದ್, ಚಿನ್ನ ಕಲ್ಲಡ್ಕ, ಬಿಸಿರೋಡಿನ ರಾಜೇಂದ್ರ ಮೊದಲಾದವರು ಭಾಗವಹಿಸಿದ್ದರು.

ಈ ವೇಳೆ ಸುದ್ದಿ ಪುತ್ತೂರಿನ ಸಿಇಒ ಸೃಜನ್ ಊರುಬೈಲು, ಸುದ್ದಿ ಬೆಳ್ತಂಗಡಿಯ ಪಾಲುದಾರರಾದ ಸಿಂಚನಾ ಊರುಬೈಲು, ಕಾರ್ಯಕ್ರಮದ ರೂವಾರಿ ರಾಜ ಬಂಟ್ವಾಳ, ಸುದ್ದಿ ಸುಳ್ಯದ ಮುಖ್ಯ ವರದಿಗಾರ ಹರೀಶ್ ಬಂಟ್ವಾಳ್, ಸುದ್ದಿಯ ಮಂಗಳೂರು ವರದಿಗಾರ ಭಾಸ್ಕರ್ ರೈ ಕಟ್ಟ, ಸುಳ್ಯ ಸುದ್ದಿ ವ್ಯವಸ್ಥಾಪಕ ಯಶ್ವಿತ್ ಕಾಳಮ್ಮನೆ, ಬೆಳ್ತಂಗಡಿ ಸುದ್ದಿ ವ್ಯವಸ್ಥಾಪಕ ಮಂಜುನಾಥ್ ರೈ, ಸುದ್ದಿ ಜಿಲ್ಲಾ ಪ್ರತಿನಿಧಿಗಳ ಮುಖ್ಯಸ್ಥ ರಾಜೇಶ್ ಎಂ.ಎಸ್., ಬೆಳ್ತಂಗಡಿ ಪ್ರತಿನಿಧಿಗಳ ಮುಖ್ಯಸ್ಥ ಕೆ.ಎನ್. ಗೌಡ, ಪುತ್ತೂರು ಸುದ್ದಿ ಚಾನೆಲ್‌ನ ಪ್ರಧಾನ ನಿರೂಪಕ ಗೌತಮ್ ಶೆಟ್ಟಿ ಇರಾ, ಸುದ್ದಿ ಚಾನೆಲ್ ಮುಖ್ಯಸ್ಥ ದಾಮೋದರ್ ದೊಂಡೋಲೆ, ಸುದ್ದಿ ಬೆಂಗಳೂರು ಪ್ರತಿನಿಧಿ ಗಣೇಶ್ ಕಲ್ಲರ್ಪೆ, ಬೆಳ್ತಂಗಡಿ ಸುದ್ದಿಯ ಅಭಿಷೇಕ್ ಸುಳ್ಯ, ಪುತ್ತೂರು ಚಾನೆಲ್‌ನ ಕ್ಯಾಮರಾಮ್ಯಾನ್ ಸಚಿನ್ ಶೆಟ್ಟಿ, ಕುಶಾಲಪ್ಪ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here