ಕುಂಬ್ರದಲ್ಲಿ ಮಟನ್ ಸ್ಟಾಲ್ ನಡೆಸುತ್ತಿದ್ದ ಹಿರೇಬಂಡಾಡಿ ನಿವಾಸಿ ನಾಪತ್ತೆ-ದೂರು

0

ಪುತ್ತೂರು: ಕುಂಬ್ರದಲ್ಲಿ ಮಟನ್ ಸ್ಟಾಲ್ ನಡೆಸುತ್ತಿದ್ದ ಹಿರೇಬಂಡಾಡಿ ಗ್ರಾಮದ ಬೋಳಮೆ ನಿವಾಸಿ ಮಹಮ್ಮದ್ ಶರೀಫ್(40ವ)ರವರು ನಾಪತ್ತೆಯಗಿರುವ ಕುರಿತು ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಮ್ಮದ್ ಶರೀಫ್ ರವರು ಕುಂಬ್ರದಲ್ಲಿ ಕೊಡಿಪ್ಪಾಡಿ ನಿವಾಸಿ ಅಬ್ದುಲ್ ರಹಿಮಾನ್ ಎಂಬವರ ಮಾಲಕತ್ವದ ಮಟನ್ ಸ್ಟಾಲ್ ನಡೆಸುತ್ತಿದ್ದರು. ಜು.3ರಂದು ಅವರು ರಾತ್ರಿ ಪತ್ನಿ ತಂಶಿಯಾ ಅವರನ್ನು ಮೊಬೈಲ್ ಮೂಲಕ ಸಂಪರ್ಕ ಮಾಡಿದ್ದರು. ಅವರ ಪತ್ನಿ ಮತ್ತೆ ಕರೆ ಮಾಡುವಾಗ ಮಹಮ್ಮದ್ ಶರೀಫ್‌ ರವರು ಸಂಪರ್ಕಕ್ಕೆ ಸಿಗಲಿಲ್ಲ. ಈ ಕುರಿತು ಅವರು ಕೊಡಿಪ್ಪಾಡಿಯಲ್ಲಿರುವ ಸಂಬಂಧಿಕರಲ್ಲೂ ವಿಚಾರಿಸಿದಾಗ ಗಂಡನ ಪತ್ತೆಯಾಗಿರಲಿಲ್ಲ. ಕೊನೆಗೆ ಬಕ್ರೀದ್ ಹಬ್ಬದ ಸಂದರ್ಭವಾದರೂ ಗಂಡ ಬರಬಹುದು ಎಂದು ಕಾದು ಅಂದೂ ಬಾರದಿದ್ದಾಗ ಪತ್ನಿ ತಂಶಿಯಾ ಅವರು ಸಂಪ್ಯ ಪೊಲೀಸರಿಗೆ ದೂರು ನೀಡಿದ್ದಾರೆ.

LEAVE A REPLY

Please enter your comment!
Please enter your name here