ಭಾರತೀಯ ಜನತಾ ಪಾರ್ಟಿಯಿಂದ ಜನಪ್ರತಿನಿಧಿಗಳಿಗೆ ಅಭ್ಯಾಸ ವರ್ಗ

0

ಅರಿಯಡ್ಕ : ಭಾರತೀಯ ಜನತಾ ಪಾರ್ಟಿ ಪುತ್ತೂರು ಗ್ರಾಮಾಂತರ ಮಂಡಲ, ನೇತೃತ್ವದಲ್ಲಿ ನೆಟ್ಟಣಿಗೆಮುಡ್ನೂರು ಮಹಾಶಕ್ತಿಕೇಂದ್ರ ಪ್ರಶಿಕ್ಷಣವರ್ಗ ನನ್ಯ ಕಾವು ಜನಮಂಗಳ ಕಲ್ಯಾಣ ಮಂಟಪದಲ್ಲಿ ನಡೆಯಿತು. ಬಿ.ಜೆ.ಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈಯವರು ಉದ್ಘಾಟಿಸಿ ಮಾತಾಡಿ ಜನಪ್ರತಿನಿಧಿಗಳು ಸೇವಾ ಮನೋಭಾವನೆಯಿಂದ ಕೆಲಸ ಮಾಡಿದಾಗ ಜನ ಮೆಚ್ಚುವ ಪ್ರತಿನಿಧಿಯಾಗಲು ಸಾಧ್ಯ. ಸಾಮಾನ್ಯ ಕಾರ‍್ಯಕರ್ತನಿಂದ ಇಂದು ಪಾರ್ಟಿ ಸದೃಢವಾಗಿದೆ ಎಂದು ಶುಭ ಹಾರೈಸಿದರು.

ವೇದಿಕೆಯಲ್ಲಿ ನೆಟ್ಟಣಿಗೆ ಮುಡ್ನೂರು ಮಹಾಶಕ್ತಿಕೇಂದ್ರದ ಪ್ರ.ಕಾರ‍್ಯದರ್ಶಿ ತೀರ್ಥಾನಂದ ದುಗ್ಗಳ ಉಪಸ್ಥಿತರಿದ್ದರು. ಗ್ರಾಮಾಂತರ ಮಂಡಲದ ಮಾಜಿ ಆಧ್ಯಕ್ಷರಾದ ನನ್ಯ ಅಚ್ಚುತ್ತ ಮೂಡಿತ್ತಾಯ ಸಭಾದ್ಯಕ್ಷತೆ ವಹಿದ್ದರು. ಪ್ರ.ಶಿಕ್ಷಣ ಪ್ರಕೋಷ್ಠದ ಸಂಚಾಲಕ ರಾಧಾಕೃಷ್ಣ ಬೋರ್ಕರ್ ಸ್ವಾಗತಿಸಿ, ನೆ. ಮುಡ್ನೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಿಜಯಕುಮಾರ್ ರೈ ಕೊರಂಗ ವಂದಿಸಿದರು. ಅರ್ಪಿತಾ ಚಾಕೋಟೆ ಪ್ರಾರ್ಥಿಸಿದರು. ಅಭ್ಯಾಸ ವರ್ಗದ ಪ್ರಥಮ ಅವಧಿಯಲ್ಲಿ ಬಿ.ಜೆ.ಪಿ. ಜಿಲ್ಲಾಕಾರ‍್ಯಕಾರಿಣಿ ಸದಸ್ಯ ಚಂದ್ರಶೇಖರ ರಾವ್ ಬಪ್ಪಳಿಗೆಯವರು ಬಿ.ಜೆ.ಪಿ ಇತಿಹಾಸ ಮತ್ತು ವಿಕಾಸ ದ್ವಿತೀಯ ಅವಧಿಯಲ್ಲಿ ಜಿಲ್ಲಾ ಪ್ರಧಾನ ಕಾರ‍್ಯದರ್ಶಿ ರಾಮದಾಸ್ ಬಂಟ್ವಾಳರವರು ಸಂಘಟನೆ ಮತ್ತು ಜನಪ್ರತಿನಿಧಿ ಹಾಗೂ ಸರಕಾರದ ಯೋಜನೆಗಳ ಬಗ್ಗೆ ವಿಚಾರ ಮಂಡಿಸಿದರು. ಈ ಸಂದರ್ಭದಲ್ಲಿ ಗ್ರಾಮಾಂತರ ಮಂಡಲದ ಕಾರ‍್ಯದರ್ಶಿಗಳಾದ ಯತೀಂದ್ರ ಕೊಚ್ಚಿ ಮತ್ತು ಲೋಹಿತ್ ಅಮ್ಚಿನಡ್ಕ ಉಪಸ್ಥಿತರಿದ್ದರು.

ಸಮರೋಪ: ಪ್ರ.ಶಿಕ್ಷಣ ವರ್ಗದ ಸಮರೋಪ ಸಮಾರಂಭ ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ಸಾಜರಾಧಾಕೃಷ್ಣ ಅಳ್ವರವರ ಅಧ್ಯಕ್ಷತೆಯಲ್ಲಿ ನಡೆಯಿತು. ಜಿಲ್ಲಾ ಪ್ರ.ಶಿಕ್ಷಣ ಪ್ರಕೋಷ್ಟದ ಸಂಚಾಲಕರಾದ ಕೃಷ್ಣಶೆಟ್ಟಿ ಕಡಬ ಸಮರೋಪ ಭಾಷಣ ಮಾಡಿದರು.

ವೇದಿಕೆಯಲ್ಲಿ ಜಿಲ್ಲಾ ಬಿ.ಜೆ.ಪಿ ಪ್ರಧಾನಕಾರ‍್ಯದರ್ಶಿ ಮತ್ತು ಮಂಡಲ ಪ್ರಭಾರಿ ರಾಮದಾಸ್ ಬಂಟ್ವಾಳ ಮತ್ತು ಪ್ರಶಿಕ್ಷಣ ಪ್ರಕೋಷ್ಠದ ಸಂಚಾಲಕ ರಾಧಾಕೃಷ್ಣ ಬೋರ್ಕರ್ ಉಪಸ್ಥಿತರಿದ್ದರು. ಶಕ್ತಿ ಕೇಂದ್ರದ ಪ್ರಮುಖರಾದ ದೀಪಕ್ ಮುಂಡ್ಯ, ಪ್ರದೀಪ್ ರೈ ಕರ್ನೂರು, ಸಚಿನ್ ರೈ ಪಾಪೆಮಜಲು, ಸಂತೋಷ್ ಆಳ್ವ ಬಡಗನ್ನೂರು, ನಾರಾಯಣ ಪೂಜಾರಿ ಕುರಿಕ್ಕಾರ, ಸತೀಶ್ ಪಾಂಬಾರು ಮತ್ತು ಪ್ರಕಾಶ್ ಆಳ್ವ ಇಳಂತಾಜೆ, ಮಹಿಳಾ ಮೋರ್ಛಾದ ಪ್ರ.ಕಾರ‍್ಯದರ್ಶಿ ನಾಗವೇಣಿ, ಎಸ್.ಟಿ.ಮೋರ್ಛಾದ ಪ್ರ.ಕಾರ‍್ಯದರ್ಶಿ ನಾರಾಯಣ ನಾಯ್ಕ ಚಾಕೋಟೆ, ಯುವ ಮೋರ್ಛಾದ ಪ್ರ,ಕಾರ‍್ಯದರ್ಶಿ ರತನ್ ರೈ,ಎಸ್.ಸಿ. ಮೋರ್ಛಾದ ಅಧ್ಯಕ್ಷ ಬಾಬು ಕೆಯ್ಯೂರು, ಶ್ರೀಕಾಂತ್‌ಕಾವು, ನವೀನ್‌ನನ್ಯ ಪಟ್ಟಾಜೆ, ಅಜಿತ್ ಮಿನೋಜಿಕಲ್ಲು, ದಿವ್ಯಾಪ್ರಸಾದ್ ಎ,ಎಂ, ಅರ್ಪಿತಾ ಚಾಕೋಟೆ, ಯೋಗೀಶ್ ಹೊಸಮನೆ ವಿವಿಧ ಕಾರ‍್ಯಕ್ರಮ ನಿರೂಪಿಸಿದರು.

ಮಾಡ್ನೂರು ಶಕ್ತಿಕೇಂದ್ರದ ಅಧ್ಷಕ್ಷ ಲೋಕೆಶ್ ಚಾಕೋಟೆ ಮತ್ತು ಅರಿಯಡ್ಕ ಗ್ರಾ.ಪಂ ಸದಸ್ಯೆ ಭಾರತಿವಸಂತ್ ವೈಯುಕ್ತಿಕ ಗೀತೆ ಹಾಡಿದರು. ಅರಿಯಡ್ಕ ಗ್ರಾ.ಪಂಅಧ್ಯಕ್ಷೆ ಸೌಮ್ಯಬಾಲಸುಬ್ರಹ್ಮಣ್ಯ ಮತ್ತು ನೆಟ್ಟಣಿಗೆ ಮುಡ್ನೂರು ಬೂತ್ ಸಮಿತಿ ಆಧ್ಯಕ್ಷ ಬಾಲಕೃಷ್ಣ ಗೌಡ ಅಭ್ಯಾಸ ವರ್ಗದ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ಗ್ರಾಮಾಂತರ ಮಂಡಲದ ಪ್ರ.ಕಾರ‍್ಯದರ್ಶಿ ನೀತಿಶ್ ಶಾಂತಿವನ ಸ್ವಾಗತಿಸಿ, ಜಿಲ್ಲಾ ಎಸ್.ಟಿ ಮೋರ್ಛಾದ ಪ್ರ,ಕಾರ‍್ಯದರ್ಶಿ ಹರೀಶ್ ಬಿಜತ್ರೆ ವಂದಿಸಿದರು ಪ್ರಶಿಕ್ಷಣ ಪ್ರಕೋಷ್ಠದ ಸಹಸಂಚಾಲಕ ತಿಲಕ್ ರೈ ಕುತ್ಯಾಡಿ ಕಾರ‍್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here