ಕೋಡಿಂಬಾಳ: ಗಾಳಿಬೀಡು-ಪಾಜೋವು ರಸ್ತೆ ದುರಸ್ತಿ-ನಾಗರಿಕರ ಮನವಿಗೆ ಸ್ಪಂದಿಸಿದ ಕಡಬ ಪಟ್ಟಣ ಪಂಚಾಯತ್

0

ಕಡಬ: ಕೊಡಿಂಬಾಳ ಗ್ರಾಮದ ಗಾಳಿಬೀಡು – ಪಾಜೊವು _ ಕನಕವನ ರಸ್ತೆಯ ಪೆಲತ್ತೊಡಿ ಎಂಬಲ್ಲಿ ಕಡಬ ಪಟ್ಟಣ ಪಂಚಾಯತ್ ವತಿಯಿಂದ ಚರಂಡಿ ದುರಸ್ತಿ ಕಾರ್ಯ ನಡೆಯಿತು.


ಸಮರ್ಪಕ ಚರಂಡಿಯಿಲ್ಲದೆ ರಸ್ತೆ ಮಳೆ ನೀರು ರಸ್ತೆಯಲ್ಲಿ ಹರಿದು ಹೊಗುತ್ತಿರುವುದರಿಂದ ಕೆಸರಿಮಯವಾಗಿ ಸಂಚಾರ ಕಡಿತಗೊಳ್ಳುವ ಭೀತಿ ಎದುರಾಗಿತ್ತು. ಈ ಬಗ್ಗೆ ಸ್ಥಳೀಯರು ಕಡಬ ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ಪಕೀರ ಮೂಲ್ಯ ಅವರಿಗೆ ಮಂಗಳವಾರ ದೂರು ನೀಡಿದ್ದರು. ತಕ್ಷಣ ಸಿಬ್ಬಂದಿ ಹರೀಶ್ ಬೆದ್ರಾಜೆ ಅವರೊಂದಿಗೆ ಸ್ಥಳಕ್ಕಾಗಮಿಸಿ ಪರಿಶೀಲಿಸಿ ಕ್ರಮಕೈಗೊಳ್ಳುವ ಭರವಸೆ ಸ್ಥಳಿಯರಿಗೆ ನೀಡಿದ್ದರು. ಅಂತೆಯೆ ಬುಧವಾರ ಬೆಳಿಗ್ಗೆಯಿಂದ ರಸ್ತೆಯ ಸುಮಾರು 100 ಮೀಟರ್ ಗೂ ಹೆಚ್ಚು ದೂರ ಎರಡು ಬದಿಗಳಲ್ಲಿ ಚರಂಡಿ ದುರಸ್ತಿ ಮಾಡಲಾಯಿತು. ಸ್ಥಳೀಯರಾದ ರಾಜೇಶ ಪೆಲತ್ತೊಡಿ, ದಯಾನಂದ ಪೆಲತ್ತೊಡಿ ಸ್ಥಳದಲ್ಲಿದ್ದರು.

 

LEAVE A REPLY

Please enter your comment!
Please enter your name here