ರೋಟರಿ ಸಹ ಕ್ಲಬ್‌ಗಳಿಂದ ಬಿರುಮಲೆ ಸಾಲುಮರದ ತಿಮ್ಮಕ್ಕ ಟ್ರೀ ಪಾರ್ಕ್‌ನಲ್ಲಿ ವನಮಹೋತ್ಸವ

0

ಪುತ್ತೂರು: ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ ಎಂಬುದನ್ನು ಅರಿತುಕೊಂಡು, ಸಂಘ ಸಂಸ್ಥೆಗಳೂ ಪರಿಸರಪರ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಆಚರಿಸಿದಾಗ ಮಾತ್ರ ವನಮಹೋತ್ಸವಕ್ಕೆ ಸಾರ್ಥಕತೆ ಬರುತ್ತದೆ ಎಂದು ಪುತ್ತೂರು ವಲಯ ಅರಣ್ಯ ಸಂರಕ್ಷಣಾಧಿಕಾರಿ ರೊ.ಕಾರ್ಯಪ್ಪ ವಿ.ಪಿ. ಹೇಳಿದ್ದಾರೆ.

ರೋಟರಿ ಕ್ಲಬ್ ಪುತ್ತೂರು ಪೂರ್ವ, ಪುತ್ತೂರು ಯುವ, ಪುತ್ತೂರು ಸ್ವರ್ಣ, ಪುತ್ತೂರು ಸೆಂಟ್ರಲ್ ಹಾಗೂ ಪುತ್ತೂರು ಎಲೈಟ್‌ನ ಆಶ್ರಯದಲ್ಲಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಬಿರುಮಲೆಯ ಸಾಲುಮರದ ತಿಮ್ಮಕ್ಕ ಟ್ರೀ ಪಾರ್ಕ್ ನಲ್ಲಿ ಜು.11ರಂದು ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ವನಮಹೋತ್ಸವದ ಹೆಸರಿನಲ್ಲಿ ನೆಟ್ಟ ಗಿಡಗಳನ್ನು ಪೋಷಿಸುವ ನಿಟ್ಟಿನಲ್ಲಿಯೂ ಸಂಘ ಸಂಸ್ಥೆಗಳು ಹೆಚ್ಚಿನ ಮುತುವರ್ಜಿ ವಹಿಸುವಂತೆ ಕರೆ ನೀಡಿದ ಅವರು, ಪ್ರಾಕೃತಿಕ ಸಂಪತ್ತು ಉಳಿಸಿ ಬೆಳೆಸುವ ಕಾರ್ಯ ಅರಣ್ಯ ಇಲಾಖೆ ನಡೆಸುತ್ತಿದ್ದು, ರೋಟರಿ ಸಂಸ್ಥೆಯೂ ಇದರ ಜೊತೆ ಕೈಜೋಡಿಸುವಂತೆ ಮನವಿ ಮಾಡಿದರು.

ರೋಟರಿ ಪುತ್ತೂರು ಪೂರ್ವದ ಅಧ್ಯಕ್ಷ ಶರತ್ ಕುಮಾರ್ ರೈ ಯವರು ಮಾತನಾಡಿ, ರೋಟರಿಯ ಡಿಸ್ಟ್ರಿಕ್ಟ್‌ನ ವನಸಿರಿ ಪ್ರಾಜೆಕ್ಟ್‌ನ ಆಶಯದಂತೆ ಇಂದಿನ ವನಮಹೋತ್ಸವ ನಡೆಸಲಾಗಿದ್ದು, ವನಸಿರಿ ಇದ್ದಾಗ ಮಾತ್ರ ಜಲಸಿರಿ, ಆರೋಗ್ಯ ಸಿರಿ ಹಾಗೂ ವಿದ್ಯಾಸಿರಿಗೆ ಶಕ್ತಿ ಬರುತ್ತದೆ ಎಂದರು. ರೋಟರಿಜಿಲ್ಲಾ ಯೋಜನೆಗಳ ಸಂಯೋಜಕ ರೊ.ಅಬ್ಬಾಸ್ ಮುರ ಮಾತನಾಡಿ, ರೋಟರಿ ಡಿಸ್ಟ್ರಿಕ್ಟ್ ನ ಎಲ್ಲಾ ಯೋಜನೆಗಳ ಸಾಕಾರ ಕ್ಕೆ ಸರ್ವರ ಸಹಕಾರ ಕೋರಿದರು. ವಲಯ ಅರಣ್ಯಾಧಿಕಾರಿ ಕಿರಣ್ ಬಿ.ಎಂ. ಅವರು ವನಮಹೋತ್ಸವದ ಪ್ರಾಮುಖ್ಯತೆ ಕುರಿತಾಗಿ ಅರಿವು ಮೂಡಿಸಿದರು. ಸಾಮಾಜಿಕ ವಲಯ ಅರಣ್ಯಾಧಿಕಾರಿ ವಿದ್ಯಾರಾಣಿ ಪಿ.ಕೆ. ಯವರು ಮಾತನಾಡಿದರು. ರೋಟರಿ ಪುತ್ತೂರು ಸ್ವರ್ಣ ದ ಅಧ್ಯಕ್ಷ ವೆಂಕಟರಮಣ ಕಳುವಾಜೆ, ರೋಟರಿ ಪುತ್ತೂರು ಸೆಂಟ್ರಲ್ ಅಧ್ಯಕ್ಷ ಮಹಮ್ಮದ್ ರಫೀಕ್ ಶುಭಹಾರೈಸಿದರು.

ವಲಯ ಸೇನಾನಿ ಸೆನೊರಿಟಾ ಆನಂದ್, ರೋಟರಿ ಡಿಸ್ಟ್ರಿಕ್ಟ್ ಯೂತ್ ಪ್ರೊಟೆಕ್ಷನ್ ವೈಸ್ ಚೇರ್ ಮೆನ್ ಸಚ್ಚಿದಾನಂದ, ಡಿಸ್ಟ್ರಿಕ್ಟ್ ಆರ್ ಪಿ ಎಲ್ ಚೇರ್ ಮೆನ್ ಆಸ್ಕರ್ ಆನಂದ್, ಕಾರ್ಯದರ್ಶಿಗಳಾದ ಶಶಿಕಿರಣ್ ರೈ, ಅಶ್ವಿನಿ ಕೃಷ್ಣ, ಜೊತೆ ಕಾರ್ಯದರ್ಶಿ ಜಯಪ್ರಕಾಶ್ ಹೆಚ್.ಎಲ್, ಸಿಲ್ವಿಯಾ ಡಿ’ಸೋಜ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೋಟರಿ ಪುತ್ತೂರು ಎಲೈಟ್ ಅಧ್ಯಕ್ಷ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಸ್ವಾಗತಿಸಿದರು, ಕೋಶಾಧಿಕಾರಿ ಮೌನೇಶ ವಿಶ್ವಕರ್ಮ ಕಾರ್ಯಕ್ರಮ ನಿರ್ವಹಿಸಿದರು. ರೋಟರಿ ಯುವದ ಅಧ್ಯಕ್ಷೆ ರಾಜೇಶ್ವರಿ ಆಚಾರ್ಯ ವಂದಿಸಿದರು.

LEAVE A REPLY

Please enter your comment!
Please enter your name here