ಜು.15: ರೋಟರಿಯಿಂದ ಉಚಿತ ನೇತ್ರ ಚಿಕಿತ್ಸಾ ಸೇವಾ ಶಿಬಿರ

0

ಪುತ್ತೂರು: ರೋಟರಿ ಕ್ಲಬ್ ಪುತ್ತೂರು, ಆನಂದಾಶ್ರಮ ಸೇವಾ ಟ್ರಸ್ಟ್, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಮಂಗಳೂರು, ಸರಕಾರಿ ಆಸ್ಪತ್ರೆ ಪುತ್ತೂರು ಇವರ ಸಹಭಾಗಿತ್ವದಲ್ಲಿ ಜು.15ರಂದು ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ವಠಾರದಲ್ಲಿರುವ ಸುಕ್ರತೀಂದ್ರ ಕಲಾ ಮಂದಿರದಲ್ಲಿ ಉಚಿತ ನೇತ್ರ ಚಿಕಿತ್ಸಾ ಸೇವಾ ಶಿಬಿರ ನಡೆಯಲಿದೆ.

ಬೆಳಗ್ಗೆ ಗಂಟೆ 9.30ರಿಂದ ಮಧ್ಯಾಹ್ನ ಗಂಟೆ 12.30ರ ತನಕ ನಡೆಯಲಿರುವ ಶಿಬಿರದಲ್ಲಿ ಉಚಿತವಾಗಿ ಕಣ್ಣಿನ ಪರೀಕ್ಷೆ, ಚಿಕಿತ್ಸೆ ಮತ್ತು ಸಲಹೆ, ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ, ಕನ್ನಡಕ ವಿತರಣೆ ನಡೆಯಲಿದೆ. ಕೆ.ಎಂ.ಸಿ.ಆಸ್ಪತ್ರೆಯ ನೇತ್ರ ತಜ್ಞರು ಶಿಬಿರದಲ್ಲಿ ತಜ್ಞ ವೈದ್ಯರಾಗಿ ಆಗಮಿಸಲಿದ್ದಾರೆ. ತಪಾಸಣೆಯ ಬಳಿಕ ಅಗತ್ಯತೆ ಇರುವವರಿಗೆ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ಉಚಿತ ಶಸ್ತ್ರಚಿಕಿತ್ಸೆ ವ್ಯವಸ್ಥೆ ಇದೆ. ಶಸ್ತ್ರಚಿಕಿತ್ಸೆ ಅಗತ್ಯವುಳ್ಳವರು ಎರಡು ದಿನಕ್ಕೆ ಬೇಕಾದ ಬಟ್ಟೆ, ಊಟದ ತಟ್ಟೆ, ಲೋಟ, ಆಧಾರ್ ಕಾರ್ಡ್ ಪ್ರತಿಯೊಂದಿಗೆ ಓರ್ವ ಸಹಾಯಕರೊಂದಿಗೆ ಬರಬೇಕು. ಆನಂದಾಶ್ರಮ ಸೇವಾ ಟ್ರಸ್ಟ್ ವತಿಯಿಂದ ದೃಷ್ಟಿ ದೋಷ ಇರುವವರಿಗೆ ಉಚಿತವಾಗಿ ಕನ್ನಡಕ ವಿತರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಆನಂದಾಶ್ರಮ ಸೇವಾ ಟ್ರಸ್ಟ್ನ ಪಿ.ಸದಾಶಿವ ಪೈ(ಮೊ:9980076707), ರೋಟರಿ ಕ್ಲಬ್ ಅಧ್ಯಕ್ಷ ಉಮಾನಾಥ ಪಿ.ಬಿ(ಮೊ:9845143838), ಸಮುದಾಯ ಸೇವಾ ನಿರ್ದೇಶಕ ಝೇವಿಯರ್ ಡಿ’ಸೋಜ(9448253463), ಸರಕಾರಿ ಆಸ್ಪತ್ರೆಯ ಶಶಿಕುಮಾರ್(ಮೊ: 6360314640) ಅವರನ್ನು ಸಂಪರ್ಕಿಸಬಹುದು ಎಂದು ರೋಟರಿ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here