ಕಟ್ಟಡ ಕಾರ್ಮಿಕ, ಅಸಂಘಟಿತ ವರ್ಗದ ಕಾರ್ಮಿಕರಿಗೆ ಪುತ್ತೂರಿನ ಹಿರಿಯ ಕಾರ್ಮಿಕ ನಿರೀಕ್ಷಕರ ಕಛೇರಿಯಲ್ಲಿ ನೋಂದಣಿ ಶಿಬಿರ ಆರಂಭ

0

ಪುತ್ತೂರು : 18ರಿಂದ 40 ವರ್ಷದವರೆಗಿನ ಕಟ್ಟಡ ಕಾರ್ಮಿಕರು ಹಾಗೂ ಇತರ ಎಲ್ಲಾ ಅಸಂಘಟಿತ ವರ್ಗದ ಕಾರ್ಮಿಕರಿಗೆ ಪಿಎಂಎಸ್‌ವೈಎಮ್ ಯೋಜನೆಯಡಿ ಪುತ್ತೂರಿನ ಹಿರಿಯ ಕಾರ್ಮಿಕ ನಿರೀಕ್ಷಕರ ಕಛೇರಿಯಲ್ಲಿ ಜು.12ರಿಂದ ನೋಂದಣಿ ಶಿಬಿರ ಏರ್ಪಡಿಸಲಾಗಿದೆ. ಭಾರತ ಸರಕಾರವು ಚಂದಾದಾರರು ಪಾವತಿಸುವ ವಂತಿಕೆಗೆ ಸಮಾನಾಂತರ ವಂತಿಕೆಯನ್ನು ಚಂದಾದಾರರ ಖಾತೆಗೆ ಜಮೆ ಮಾಡುತ್ತದೆ. ಈ ಯೋಜನೆಯಡಿ 60 ವರ್ಷದ ನಂತರ ತಿಂಗಳಿಗೆ ಮಾಸಿಕ ಕನಿಷ್ಟ ರೂ.3000 ಪಿಂಚಣಿ ರೂಪದಲ್ಲಿ ಚಂದಾದಾರರ ಖಾತೆಗೆ ಜಮೆ ಆಗುತ್ತದೆ. ತುರ್ತು ಸಂದರ್ಭದಲ್ಲಿ ಕಟ್ಟಿದ ಹಣವನ್ನು ಸರಕಾರದ ಪಾಲಿನ ವಂತಿಗೆ ಹಾಗೂ ಬಡ್ಡಿ ಸಮೇತ ಹಿಂಪಡೆಯಬಹುದಾಗಿದೆ. ಪಿಎಫ್ ಇಲ್ಲದ ಎಲ್ಲಾ ಕಾರ್ಮಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಬರುವಾಗ ಆಧಾರ್‌ಕಾರ್ಡ್, ನಾಮನಿರ್ದೇಶಿತರ ಆಧಾರ್‌ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಪುಸ್ತಕ ಹಾಗೂ ಮೊಬೈಲ್ ಹ್ಯಾಂಡ್‌ಸೆಟ್ ತರಬೇಕು ಎಂದು ಹಿರಿಯ ಕಾರ್ಮಿಕ ನಿರೀಕ್ಷಕರ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here