ಬೈತಡ್ಕ ದರ್ಗಾ ಶರೀಫ್ ಜುಮ್ಮಾ ಮಸೀದಿ ಬಳಿ ಅನುಮಾನಾಸ್ಪದ ವ್ಯಕ್ತಿ : ತನಿಖೆ ನಡೆಸಲು ದೂರು

0

ಕಾಣಿಯೂರು: ಕಳೆದ ಎರಡು ದಿನಗಳ ಹಿಂದೆ ಬೈತಡ್ಕ ಪರಿಸರದಲ್ಲಿ ಅನುಮಾನಾಸ್ಪದ ವ್ಯಕ್ತಿಯೊಬ್ಬ ಕಾಣಿಸಿಕೊಂಡಿದ್ದು ಸಾರ್ವಜನಿಕರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿತ್ತು. ಈ ಬಗ್ಗೆ ಜುಮ್ಮಾ ಮಸೀದಿ ದರ್ಗಾ ಶರೀಫ್ ಬೈತಡ್ಕ ಆಡಳಿತ ಸಮಿತಿ ವತಿಯಿಂದ ಆ ವ್ಯಕ್ತಿಯನ್ನು ವಿಚಾರಣೆ ನಡೆಸುವಂತೆ ಬೆಳ್ಳಾರೆ ಆರಕ್ಷಕ ಠಾಣಾಧಿಕಾರಿಗಳಿಗೆ ದೂರು ನೀಡಲಾಗಿದೆ.

ಈ ಸಂದರ್ಭದಲ್ಲಿ ಬೈತಡ್ಕ ಜಮಾಅತ್ ಅಧ್ಯಕ್ಷರಾದ ಅಬೂಬಕ್ಕರ್ ಹಾಜಿ, ಉಪಾಧ್ಯಕ್ಷರಾದ ಇಕ್ಬಾಲ್ ಬೈತಡ್ಕ, ಪ್ರಧಾನ ಕಾರ್ಯದರ್ಶಿ ಸಿದ್ದಿಕ್ ಅಲೆಕ್ಕಾಡಿ, ಜೊತೆ ಕಾರ್ಯದರ್ಶಿ ಅಬ್ದುಲ್ಲ ಕೆಲಂಬಿರಿ, ಕೋಶಾಧಿಕಾರಿ ಸಾಬು ಹಾಜಿ, ಸಮಿತಿ ಸದಸ್ಯರಾದ ಮೊಹಮ್ಮದ್ ಅಲೆಕ್ಕಾಡಿ, ಅಬ್ದುರ್ರಹ್ಮಾನ್ ಸಮಹಾದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here