ಆಹಾರ ಮತ್ತು ಪೌಷ್ಟಿಕಾಂಶ ತಜ್ಞ ಅಜಿತ್ ಕೋಡಿಂಬಾಳ ಅವರಿಗೆ “ಬೆಸ್ಟ್ ಟೀಚರ್ ಅವಾರ್ಡ್”

0

ಕಡಬ: ಆಹಾರ ಮತ್ತು ಪೌಷ್ಟಿಕಾಂಶ ತಜ್ಞ ಅಜಿತ್ ಕೋಡಿಂಬಾಳ ಅವರಿಗೆ ಇನ್ಸ್ಟೂಟ್ಯೂಷನ್ ಆಪ್ ಸ್ಕಾಲರ್ಸ್ ಬೆಂಗಳೂರು ಇದರಿಂದ “ಬೆಸ್ಟ್ ಟೀಚರ್ ಅವಾರ್ಡ್-2022” ನೀಡಿ ಗೌರವಿಸಿದೆ.

 

ಇವರು ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಆಸ್ಪತ್ರೆ ಮತ್ತು ಕಾಲೇಜಿನಲ್ಲಿ ಆಹಾರ ಮತ್ತು ಪೌಷ್ಟಿಕಾಂಶ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರು ಹಾಗೂ ಆಹಾರ ತಜ್ಞರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇವರ ಸಾಧನೆಯನ್ನು ಗುರುತಿಸಿ ಈ ಸಂಸ್ಥೆಯು ಅವರಿಗೆ ಬೆಸ್ಟ್ ಟೀಚರ್ ಅವಾರ್ಡ್‌ನ್ನು ನೀಡಿ ಗೌರವಿಸಿದೆ. ಇವರು ಆಹಾರಕ್ಕೆ ಸಂಬಂಧಪಟ್ಟ ಲೇಖನಗಳನ್ನು ಹಾಗೂ ಅವರ ಅನೇಕ ಜನರಿಗೆ ಆಹಾರದ ಕುರಿತು ಮಾಹಿತಿಯನ್ನು ವಿವಿಧ ಮಾಧ್ಯಮದಲ್ಲಿ ಪ್ರಕಟಿಸುತ್ತಿದ್ದಾರೆ. ಪ್ರಸ್ತುತ ಇವರು ಮಂಗಳೂರಿನ ಎನಪೋಯ ಸಂಸ್ಥೆಯಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ.

ಇವರು ಕೋಡಿಂಬಾಳ ಗ್ರಾಮದ ನಿವಾಸಿ ಕುಸುಮಾಧರ ಗೌಡಪದ್ಮಾವತಿ ದಂಪತಿಯ ಪುತ್ರರಾಗಿದ್ದಾರೆ. ಇವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆ ಕಡಬ, ಕೆ.ಎಸ್. ಗೌಡ ಪದವಿಪೂರ್ವ ಕಾಲೇಜು ನಿಂತಿಕಲ್ಲು, ಆಳ್ವಾಸ್ ಕಾಲೇಜ್ ಮೂಡಬಿದಿರೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಪ್ರಸ್ತುತ ಪ್ರಸ್ತುತ ಇವರು ಆರ್.ವಿ ಎಸ್ ಕಾಲೇಜು ಕೊಯಂಬತ್ತೂರಿನಲ್ಲಿ ಪಿಎಚ್‌ಡಿ ಪದವಿಯನ್ನು ಮಾಡುತ್ತಿದ್ದಾರೆ. 

LEAVE A REPLY

Please enter your comment!
Please enter your name here