ಪುತ್ತೂರು-ಕಾವು ಲಯನ್ಸ್ ಕ್ಲಬ್ ಪದಗ್ರಹಣ ಸಮಾರಂಭ

0

  • ಕ್ಲಬ್ ಬಗ್ಗೆ ಇರುವ ತಪ್ಪು ಭಾವನೆಯ ಬಗ್ಗೆ ಜನರಿಗೆ ತಿಳಿ ಹೇಳಬೇಕಿದೆ: ಮೆಲ್ವಿನ್ ಡಿಸೋಜಾ
  • ಅಧ್ಯಕ್ಷ ಪಾವನರಾಮ, ಕಾರ್ಯದರ್ಶಿ ಜಗನ್ನಾಥ ರೈ ಗುತ್ತು, ಕೋಶಾಧಿಕಾರಿ ಕೃಷ್ಣರಾಜ್

 

ಪುತ್ತೂರು: ಲಯನ್ಸ್ ಕ್ಲಬ್ ಅಂದರೆ ಅದು ಶ್ರೀಮಂತರ ಕ್ಲಬ್, ಪಟ್ಟಣ ನಿವಾಸಿಗಳು ಮಾತ್ರ ಅದರಲ್ಲಿ ಸದಸ್ಯರಾಗುತ್ತಾರೆ , ಗ್ರಾಮೀಣ ಜನರಿಗೆ ಕ್ಲಬ್ ಸದಸ್ಯರಾಗಲು ಅವಕಾಶವಿಲ್ಲ ಎಂಬ ಭಾವನೆ ಜನರಲ್ಲಿದ್ದು ಅದರ ಬಗ್ಗೆ ಜನರಿಗೆ ತಿಳಿಹೇಳಬೇಕಿದೆ ಎಂದು ಲಯನ್ಸ್ ಕ್ಲಬ್ ಜಿಲ್ಲಾ ಗವರ್ನರ್ ಮೆಲ್ವಿನ್ ಡಿಸೋಜಾ ಹೇಳಿದರು.

ಅವರು ಕಾವು ಜನಮಂಗಳ ಸಭಾ ಭವನದಲ್ಲಿ ಪುತ್ತೂರು-ಕಾವು ಲಯನ್ಸ್ ಕ್ಲಬ್‌ನ ಪದಗ್ರಹಣ ಸಮಾರಂಭವನ್ನು ನಡೆಸಿ ಮಾತನಾಡಿದರು.

ಸಂಸ್ಥೆ ಬೆಳೆಯಬೇಕಾದರೆ ಸಂಸ್ಥೆಗೆ ಸದಸ್ಯರು ಅತೀ ಅಗತ್ಯವಾಗಿದೆ.ಸೇವಾ ಕಾರ್ಯ ಮಾಡದ ಸಾರ್ವಜನಿಕ ಸಂಸ್ಥೆಗಳಿಗೆ ಅರ್ಥವಿಲ್ಲ ಎಂದು ಹೇಳಿದ ಅವರು ಲಯನ್ಸ್ ಕ್ಲಬ್ ಸಂಸ್ಥೆಯ ನೀತಿ ನಿಯಮಗಳನ್ನು ಪಾಲಿಸುವ ಯಾರಿಗೂ ಅದರ ಸದಸ್ಯತನ ಪಡೆಯಬಹುದಾಗಿದೆ. ವಿಶ್ವದಲ್ಲಿ ಒಟ್ಟು 300 ಮಿಲಿಯನ್ ಜನರ ಸೇವೆಯನ್ನು ಲಯನ್ಸ್ ಕ್ಲಬ್ ಮಾಡುತ್ತಿದೆ ಎಂದರು.

ಪುತ್ತೂರು ಕಾವು ಲಯನ್ಸ್ ಕ್ಲಬ್ ಶರವೇಗದಲ್ಲಿ ಅಭಿವೃದ್ದಿಯನ್ನು ಕಂಡಿದೆ. ಸ್ಥಾಪಕಾಧ್ಯಕ್ಷ ಹೇಮನಾಥ ಶೆಟ್ಟಿಯವರ ದಿಟ್ಟ ನಾಯಕತ್ವದಲ್ಲಿ ಸಂಸ್ಥೆಯು ನಾಲ್ಕೇ ವರ್ಷದಲ್ಲಿ ಟಾಪ್ ಟೆನ್ ಕ್ಲಬ್‌ಗಳ ಪೈಕಿ ಮೊದಲ ಸ್ಥಾನವನ್ನು ಪಡೆದುಕೊಂಡಿರುವುದು ಅತ್ಯಂತ ಹೆಮ್ಮೆಯ ವಿಚಾರವಾಗಿದೆ ಎಂದು ಹೇಳಿದರು. ಲಯನ್ಸ್ ಅಂತರಾಷ್ಟ್ರೀಯ ಪ್ರೋಗ್ರಾಮ್ ಕೋ ಆರ್ಡಿನೇಟರ್ ಎಚ್ ಎಂ ತಾರನಾಥ್ ರವರು ಮಾತನಾಡಿ ನಾವು ಸಮಾಜದಲ್ಲಿ ಒಂದಷ್ಟು ಕಾಲ ಬದುಕಿರುವಾಗ ನಾವು ಸಮಾಜಕ್ಕೆ ಏನು ಕೊಟ್ಟಿದ್ದೇವೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಲಯನ್ಸ್ ಕ್ಲಬ್ ಸೇವಾ ಸಂಸ್ಥೆಯಾಗಿದ್ದು ಇದೀಗ ಪುತ್ತೂರು-ಕಾವು ಲಯನ್ಸ್ ಕ್ಲಬ್ ಮೂಲಕ ಗ್ರಾಮೀಣ ಭಾಗದಲ್ಲೂ ತನ್ನ ಛಾಪನ್ನು ಮೂಡಿಸುತ್ತಿದೆ. ಹಳ್ಳಿಯ ಕೃಷಿಕರು ನಮ್ಮ ಸದಸ್ಯರಾಗುತ್ತಿರುವುದು ಹೆಮ್ಮೆಯ ವಿಚಾರ ಎಂದರು. ಗ್ರಾಮೀಣ ಜನರನ್ನು ಸಂಸ್ಥೆಗೆ ಸೇರಿಸಿದ ಖ್ಯಾತಿ ಕಾವು ಹೇಮನಾಥ ಶೆಟ್ಟಿಗೆ ಸಲ್ಲುತ್ತದೆ ಎಂದು ಹೇಳಿದರು. ಕಾವು ಕ್ಲಬ್‌ನ ಅಧ್ಯಕ್ಷರಾದ ಪಾವನ ರಾಮ ಅವರ ಮುತುವರ್ಜಿಯಿಂದ ಕಾವಿನಲ್ಲಿ ಲಯನ್ಸ್ ಮೆಡಿಕಲ್ ಲ್ಯಾಬೋರೇಟರಿ ಮತ್ತು ಚಿಕಿತ್ಸಾ ಸೌಲಭ್ಯ ಪ್ರಾರಂಭವಾಗಿರುವುದು ಕ್ಲಬ್‌ನ ಹಿರಿಮೆಯನ್ನು ಹೆಚ್ಚಿಸಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಮಾಜಿ ಗವರ್ನರ್ ಡಾ. ಗೀತ್‌ಪ್ರಕಾಶ್, ಲಯನ್ಸ್ ಪ್ರಮುಖರಾದ ಸುದರ್ಶನ್ ಪಡಿಯಾಳ್,ಪ್ರಾಂತೀಯ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ವಲಯಾಧ್ಯಕ್ಷ ರಮೇಶ್ ರೈ ಸಾಂತ್ಯ, ಜಗದೀಶ್ ಸೋಮವಾರ ಪೇಟೆ ಮತ್ತಿತರರು ಉಪಸ್ಥಿತರಿದ್ದರು.

ಅಧ್ಯಕ್ಷರಾದ ಪಾವನರಾಮ ಅತಿಥಿಗಳನ್ನು ಸ್ವಾಗತಿಸಿದರು. ಅನಿತಾ ಹೇಮನಾಥ ಶೆಟ್ಟಿ ನೂತನ ಅತಿಥಿಗಳ ಪರಿಚಯ ವಾಚಿಸಿದರು. ಕಾರ್ಯದರ್ಶಿ ದೇವಣ್ಣ ರೈ ವಂದಿಸಿದರು. ಮನ್ಮಥ ರೈ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಮೆಲ್ವಿನ್ ಡಿಸೋಜಾ, ಡಾ. ಗೀತ್‌ಪ್ರಕಾಶ್ ರವರನ್ನು ಶಾಲುಹೊದಿಸಿ , ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಪುತ್ತೂರು -ಕಾವು ಲಯನ್ಸ್ ಕ್ಲಬ್ ನೂತನ ಪದಾಧಿಕಾರಿಗಳು

ಅಧ್ಯಕ್ಷ ಪಾವನರಾಮ, ಕಾರ್ಯದರ್ಶಿ ಜಗನ್ನಾಥ ರೈ ಗುತ್ತು, ಕೋಶಾಧಿಕಾರಿ ಕೃಷ್ಣರಾಜ್

ಪುತ್ತೂರು-ಕಾವು ಲಯನ್ಸ್ ಕ್ಲಬ್‌ಗೆ ನೂತನ ಅಧ್ಯಕ್ಷರನ್ನಾಗಿ ಪಾವನರಾಮ ಅವರನ್ನೇ ಎರಡನೇ ಅವಧಿಗೆ ಮುಂದುವರೆಸಲಾಯಿತು. ಕಾರ್ಯದರ್ಶಿಯಾಗಿ ಜಗನ್ನಾಥ ರೈ ಗುತ್ತು ಹಾಗೂ ಕೋಶಾಧಿಕಾರಿಯಾಗಿ ಕೃಷ್ಣರಾಜ್ ಅವರನ್ನು ನೇಮಿಸಲಾಯಿತು.

LEAVE A REPLY

Please enter your comment!
Please enter your name here