ಸವಣೂರು : ಸಸಿ ಮತ್ತು ತರಕಾರಿ ಬೀಜ ವಿತರಣೆ ಹಾಗೂ ಕೃಷಿ ಅರಣ್ಯ ರೈತ ಸಹಾಯಧನದ ಬಗ್ಗೆ ಮಾಹಿತಿ ಕಾರ್ಯಗಾರ

0

  • ಸಾವಯವದಿಂದ ವಿಷ ಮುಕ್ತ ಆಹಾರ ಉತ್ಪಾದನೆ ಸಾಧ್ಯ

ಸವಣೂರು : ಮಾತೃಭೂಮಿ ಸಾವಯವ ಕೃಷಿ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ (ರಿ.) ಕಡಬ ,ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ,ಅರಣ್ಯ ಇಲಾಖೆ ಪುತ್ತೂರು ,ರಾಜ್ಯ ಪ್ರಶಸ್ತಿ ಪುರಸ್ಕೃತ ಸವಣೂರು ಯುವಕ ಮಂಡಲ ಇದರ ವತಿಯಿಂದ ಸವಣೂರು ಯುವಕ ಮಂಡಲದ ಯುವ ಸಭಾಭವನದಲ್ಲಿ ಸಸಿ ಮತ್ತು ತರಕಾರಿ ಬೀಜ ವಿತರಣೆ ಹಾಗೂ ಕೃಷಿ ಅರಣ್ಯ ರೈತ ಸಹಾಯಧನದ ಬಗ್ಗೆ ಮಾಹಿತಿ ಕಾರ್ಯಗಾರ ಜು.14ರಂದು ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಾರ್ಯಪ್ಪ ಮಾತನಾಡಿ, ಕೃಷಿ ಅರಣ್ಯೀಕರಣ ಕಾರ್ಯಕ್ರಮಗಳಲ್ಲಿ ರೈತರು, ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳನ್ನು ಸಕ್ರಿಯವಾಗಿ ಪಾಲ್ಗೊಳ್ಳಲು ಪ್ರೇರೇಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ‘ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ’ ಯನ್ನು ಆರಂಭಿಸಿದೆ. ಸಾರ್ವಜನಿಕ ಸಹಬಾಗಿತ್ವದ ಈ ಯೋಜನೆಯಲ್ಲಿ ರೈತರು, ಸಾರ್ವಜನಿಕರು ರಿಯಾಯಿತಿ ದರದಲ್ಲಿ ಹತ್ತಿರದ ಸಸ್ಯಕ್ಷೇತ್ರಗಳಿಂದ ಸಸಿಗಳನ್ನು ಪಡೆದು ಅವುಗಳನ್ನು ತಮ್ಮ ಜಮೀನಿನಲ್ಲಿ ನೆಟ್ಟು ಬೆಳೆಸಬಹುದು. ಸಸಿಗಳನ್ನು ನೆಟ್ಟು ಪೋಷಿಸಲು ಸರ್ಕಾರವೇ ಸಹಾಯಧನ ನೀಡುತ್ತದೆ. ಈ ಯೋಜನೆಯಡಿ, ಶ್ರೀಗಂಧ, ತೇಗ, ಹೆಬ್ಬೇವು, ಮಹಾಗನಿ ಮೊದಲಾದ ಗಿಡಗಳನ್ನು ಪಡೆದು ಬೆಳೆಸಬಹುದು.

ಬದುಕುಳಿದ ಸಸಿಗೆ ಮೊದಲನೇ ವರ್ಷದ ಅಂತ್ಯದಲ್ಲಿ ₹35 ಹಾಗೂ ಎರಡನೇ ಮತ್ತು ಮೂರನೇ ವರ್ಷದ ಅಂತ್ಯದಲ್ಲಿ ಕ್ರಮವಾಗಿ ₹40 ಹಾಗೂ ₹50 ಹೀಗೆ ಪ್ರತಿ ಸಸಿಗೆ ಒಟ್ಟು 125 ರೂ. ಪ್ರೋತ್ಸಾಹ ಧನ ಪಾವತಿಸಲಾಗುತ್ತದೆ. ಈ ರೀತಿ ಪಾವತಿಸುತ್ತಿರುವ ಪ್ರೋತ್ಸಾಹ ಧನದಿಂದ ರೈತರು ಸಸಿಗಳನ್ನು ಪಡೆಯಲು ಹಾಗೂ ನೆಡಲು ಖರ್ಚು ಮಾಡುವ ಹಣವನ್ನು ಪಡೆಯಬಹುದಾಗಿದೆ. ಇದಲ್ಲದೇ ಹೆಚ್ಚಿನ ಸಂಖ್ಯೆಯಲ್ಲಿ ಸಸಿಗಳನ್ನು ನೆಟ್ಟು ಬೆಳಸಿದ್ದಲ್ಲಿ ಗಣನೀಯವಾಗಿ ಪ್ರೋತ್ಸಾಹ ಧನ ಪಡೆಯಬಹುದಾಗಿದೆ. ಪ್ರೋತ್ಸಾಹ ಧನದ ಜತೆಗೆ ರೈತರು ಮರಗಳಿಂದ ಸಿಗುವಂತಹ ಹಣ್ಣುಗಳು, ಬೀಜ, ಮೇವು, ಉರುವಲು, ಕೋಲು, ಮರಮಟ್ಟು, ಇತ್ಯಾದಿ ಪ್ರಯೋಜನಗಳನ್ನು ಪಡೆಯಲು ಅರ್ಹರಿರುತ್ತಾರೆ ಎಂದರು.

ಸುಳ್ಯ ಕ್ಷೇತ್ರದ ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಕೇಶ್‌ ರೈ ಕೆಡೆಂಜಿ ಮಾತನಾಡಿ,ಸೈನಿಕ ಹಾಗೂ ರೈತ ದೇಶದ ಶಕ್ತಿ.ಈ ನಿಟ್ಟಿನಲ್ಲಿ ರೈತನ ಕೈ ಬಲಪಡಿಸಬೇಕಾದರೆ ಎಲ್ಲರೂ ಸಂಘಟಿತರಾಗಬೇಕು,ಸಾವಯವದಿಂದ ವಿಷ ಮುಕ್ತ ಕೃಷಿ ಮಾಡುವ ಮೂಲಕ ವಿಷಮುಕ್ತ ಆಹಾರ ಉತ್ಪಾದನೆ ಸಾಧ್ಯ ಇದರಿಂದ ಆರೋಗ್ಯ ವೃದ್ದಿಯಾಗುತ್ತದೆ.ಸಾಮಾಜಿಕ ಹಾಗೂ ರೈತ ಕಲ್ಯಾಣಕ್ಕೆ ಪೂರಕವಾದ ಸಂಘ ಸಂಸ್ಥೆಗಳನ್ನು ಬೆಳೆಸುವ ಕಾರ್ಯವಾಗಬೇಕು.ನಾವೆಲ್ಲರೂ ಹೊಸ ಹೊಸ ವಿಚಾರಗಳ ಕುರಿತು ಅಧ್ಯಯನ ಶೀಲರಾಗಬೇಕು.ಸ್ವಾರ್ಥ ಬಿಟ್ಟು ಮಾನವೀಯ ನೆಲೆಯಲ್ಲಿ ಕೆಲಸ ಮಾಡಬೇಕು ಎಂದರು.

ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್‌ ಮೆದು ಮಾತನಾಡಿ,ಅಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಬೇಕು.ಈ ನಿಟ್ಟಿನಲ್ಲಿ ಕಡಬ ತಾಲೂಕಿನಲ್ಲಿ ಅಸ್ತಿತ್ವಕ್ಕೆ ಬಂದಿರುವ ಮಾತೃಭೂಮಿ ಸಾವಯವ  ಕೃಷಿ ಅಭಿವೃದ್ದಿ ಸಂಸ್ಥೆಗೆ ಎಲ್ಲರೂ ಕೈ ಜೋಡಿಸಬೇಕು ಎಂದರು.

ಮಾತೃಭೂಮಿ ಸಾವಯವ ಕೃಷಿ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಕಡಬ ತಾಲೂಕು ಅಧ್ಯಕ್ಷ ಉಮೇಶ್‌ ಸಾಯಿರಾಮ್‌ ಮಾತನಾಡಿ, ಕಡಬದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಮಾತೃಭೂಮಿ ಸಾವಯವ ಕೃಷಿ ಪರಿವಾರದ ಮೂಲಕ ಸರಕಾರದಿಂದ ಸಾವಯವ ಕೃಷಿ ವಿಚಾರಕ್ಕೆ ಹಾಗೂ ಇತರ ಯೋಜನೆಗಳನ್ನು ರೈತರಿಗೆ ಮುಟ್ಟಿಸುವ ಕಾರ್ಯವನ್ನು ಮಾಡಲಾಗುವುದು ಎಂದರು.

ಸವಣೂರು ಗ್ರಾ.ಪಂ.ಅಧ್ಯಕ್ಷೆ ರಾಜೀವಿ ವಿ.ಶೆಟ್ಟಿ ಕೆಡೆಂಜಿ ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ಭಾರತಿ ಗ್ರಾಮ ವಿಕಾಸ ಪ್ರತಿಷ್ಟಾನದ ಸ್ಥಾಪಕಾಧ್ಯಕ್ಷ ಬಿ.ಕೆ.ರಮೇಶ್‌ ಉಪಸ್ಥಿತರಿದ್ದರು.
ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ಮಮತಾ ರೈ ದೇವಸ್ಯ,ನಿರ್ದೇಶಕಾರದ ಸುಪ್ರಿತ್‌ ರೈ ಖಂಡಿಗ,ಪ್ರಕಾಶ್‌ ಕುದ್ಮನಮಜಲು,ಕಾಣಿಯೂರು ಗ್ರಾ.ಪಂ.ಉಪಾಧ್ಯಕ್ಷ ಗಣೇಶ್ ಉದನಡ್ಕ,ಸವಣೂರು ಗ್ರಾ.ಪಂ.ಸದಸ್ಯರಾದ ಗಿರಿಶಂಕರ ಸುಲಾಯ, ಚಂದ್ರಾವತಿ ಸುಣ್ಣಾಜೆ, ತಾರಾನಾಥ ಬೊಳಿಯಾಲ,ಸತೀಶ್ ಅಂಗಡಿಮೂಲೆ,ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಚೇತನ್ ಕೋಡಿಬೈಲು,ನಾರಾಯಣ ಗೌಡ ಪೂವ,ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಧನಂಜಯ ಕೇನಾಜೆ, ಮಾತೃಭೂಮಿ ಸಾವಯವ ಕೃಷಿ ಗ್ರಾಮೀಣಾಭಿವೃದ್ದಿ ಪ್ರತಿಷ್ಠಾನದ ವಿಸ್ತಾರಕ್ ಪುಷ್ಪಾವತಿ,ನಿವೃತ ಶಿಕ್ಷಕ ರಾಮ ಭಟ್ ಕುಕ್ಕುಜೆ, ಪ್ರಕಾಶ್ ಕುದ್ಮನಮಜಲು,ಬಾಳಪ್ಪ ಪೂಜಾರಿ ಬಂಬಿಲದೋಳ,ಲಕ್ಷ್ಮೀಶ ಗಾಂಭೀರ,ಮಹಮ್ಮದ್‌ ಕಣಿಮಜಲು ಮೊದಲಾದವರಿದ್ದರು.

ಮಾತೃಭೂಮಿ ಸಾವಯವ ಕೃಷಿ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ನಿರ್ದೇಶಕಿ ಇಂದಿರಾ ಬಿ.ಕೆ ಅವರು ಪ್ರಸ್ತಾವನೆಗೈದರು.
ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ತಾರಾನಾಥ ಕಾಯರ್ಗ ಸ್ವಾಗತಿಸಿ,ಮುಖ್ಯ ಕಾರ್ಯನಿರ್ಹಣಾಧಿಕಾರಿ ಚಂದ್ರಶೇಖರ್‌ ಪಿ. ನಿರೂಪಿಸಿದರು. ಸವಣೂರು ಗ್ರಾ.ಪಂ.ಉಪಾಧ್ಯಕ್ಷ ಶೀನಪ್ಪ ಶೆಟ್ಟಿ ನೆಕ್ರಾಜೆ ಪರಿಸರ ಗೀತೆ ಹಾಡಿದರು.ಸವಣೂರು ಯುವಕ ಮಂಡಲದ ಅಧ್ಯಕ್ಷ ಪ್ರಕಾಶ್‌ ಮಾಲೆತ್ತಾರು ವಂದಿಸಿದರು.

LEAVE A REPLY

Please enter your comment!
Please enter your name here