ಪದವಿ ಶಿಕ್ಷಣದಲ್ಲಿ ಕ್ರಾಂತಿ ಮೂಡಿಸುತ್ತಿರುವ ಪುತ್ತೂರಿನ ಅಂಬಿಕಾ ಮಹಾವಿದ್ಯಾಲಯ

0

ಉದ್ಯೋಗಪರ ಕಾಂಬಿನೇಶನ್, ತರಬೇತಿಗಳನ್ನೊಳಗೊಂಡ ವಿಶಿಷ್ಟ ಕಾಲೇಜು

ಪುತ್ತೂರು : ಪಿಯು ಶಿಕ್ಷಣ ಪೂರೈಸಿದ ನಂತರ ಯಾವ ಕಾಲೇಜಿಗೆ ಸೇರಿಕೊಳ್ಳಬೇಕು? ಯಾವ ಕೋರ್ಸ್ ಅನ್ನು ಆಯ್ದುಕೊಳ್ಳಬೇಕು? ವಿಷಯ ಸಂಯೋಜನೆಗಳು (ಕಾಂಬಿನೇಶನ್) ಯಾವುದಿರಬೇಕು? ಯಾವ ವಿಷಯಗಳನ್ನು ಓದಿದರೆ ಮುಂದೆ ಉತ್ತಮ ಭವಿಷ್ಯ ಸಾಕಾರಗೊಳ್ಳಬಹುದು? ಇತ್ಯಾದಿ ವಿಷಯಗಳ ಬಗೆಗೆ ಇದೀಗ ತಾನೇ ಪಿ.ಯು ಶಿಕ್ಷಣ ಮುಗಿಸಿದ ವಿದ್ಯಾರ್ಥಿಗಳಲ್ಲಿ ಪ್ರಶ್ನೆಗಳೇಳುವುದು ಸಹಜ. ಅನೇಕ ಹೆತ್ತವರಲ್ಲೂ ಇಂತಹ ಗೊಂದಲಗಳಿರುವುದು ಸಾಮಾನ್ಯ. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವಾಗಿ ಕಾಣಿಸಿಕೊಳ್ಳುವ ಶಿಕ್ಷಣ ಸಂಸ್ಥೆಯೆಂದರೆ ಪುತ್ತೂರಿನ ಅಂಬಿಕಾ ಪದವಿ ಕಾಲೇಜು.


ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಗುಣಮಟ್ಟದ ಮತ್ತು ಸಂಸ್ಕಾರಯುತ ಶಿಕ್ಷಣ ಕೊಡುವಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ. ಪುತ್ತೂರಿನ ಆಸುಪಾಸಿನ ವಾಣಿಜ್ಯ ವಿದ್ಯಾರ್ಥಿಗಳಲ್ಲಿನ ಆಸಕ್ತಿಯನ್ನು ಗಮನಿಸಿ ಸಿಎ ಹಾಗೂ ಬ್ಯಾಂಕಿಂಗ್ ಕ್ಷೇತ್ರಕ್ಕೆ ಅಡಿಯಿಡಬೇಕಾದರೆ ಎದುರಿಸಬೇಕಾದ ಐಬಿಪಿಎಸ್ ಪರೀಕ್ಷಾ ತರಬೇತಿ ಸಹಿತವಾಗಿರುವ ಇಂಟಗ್ರೇಟೆಡ್ ಬಿಕಾಂ ಅನ್ನು ಅಂಬಿಕಾ ಕಾಲೇಜು ಆರಂಭಿಸಿದೆ. ಹಾಗಾಗಿ ಇಂತಹ ತರಬೇತಿಗಳಿಗಾಗಿ ದೂರದ ಊರುಗಳಿಗೆ ತೆರಳಬೇಕಾದ ಅವಶ್ಯಕತೆ ಪುತ್ತೂರಿನ ವಿದ್ಯಾರ್ಥಿಗಳಿಗೆ ಇಲ್ಲ ಎಂಬುದು ಗಮನಾರ್ಹ ವಿಚಾರ. . ಸ್ವತಃ ಸಿ.ಎ ತೇರ್ಗಡೆಯಾದವರೇ ಈ ಸಂಸ್ಥೆಯಲ್ಲಿ ತರಗತಿ ನಡೆಸುತ್ತಿರುವುದು ವಿದ್ಯಾರ್ಥಿಗಳ ಮತ್ತು ಹೆತ್ತವರ ಮೆಚ್ಚುಗೆಗೆ ಕಾರಣವಾಗಿದೆ. ಹಾಗೆಯೇ ಬ್ಯಾಂಕಿAಗ್ ಕ್ಷೇತ್ರದಲ್ಲಿ ಅತ್ಯಧಿಕ ಉದ್ಯೋಗಾವಕಾಶ ಇರುವುದರಿಂದ ಪದವಿ ಹಂತದಲ್ಲೇ ಬಿಕಾಂ ಜತೆಗೆ ಐಬಿಪಿಎಸ್ ಪರೀಕ್ಷಾ ತರಬೇತಿ ಅಂಬಿಕಾ ಶಿಕ್ಷಣ ಸಂಸ್ಥೆಯಲ್ಲಿ ದೊರೆಯಲಿದೆ. ಹಾಗಾಗಿಯೇ ಇಂದು ಅಂಬಿಕಾ ಪದವಿ ಕಾಲೇಜು ವಾಣಿಜ್ಯ ವಿದ್ಯಾರ್ಥಿಗಳ ನೆಚ್ಚಿನ ತಾಣವೆನಿಸಿದೆ. ಇದರೊಂದಿಗೆ ಜನರಲ್ ಬಿ.ಕಾಂ ಕೂಡ ಇಲ್ಲಿ ಲಭ್ಯವಿದೆ.

ಬಿಎ ವಿಭಾಗದಲ್ಲಿ ಅತ್ಯಧಿಕ ಉದ್ಯೋಗಾವಕಾಶಗಳುಳ್ಳ ಪತ್ರಿಕೋದ್ಯಮ, ಐಚ್ಚಿಕ ಇಂಗ್ಲಿಷ್, ಮನಃಶಾಸ್ತçದಂತಹ ವಿಷಯಗಳನ್ನು ಹೊಂದಿರುವುದು ಈ ವಿದ್ಯಾ ಸಂಸ್ಥೆಯ ವಿಶೇಷತೆ. ಇದಲ್ಲದೆ ತತ್ತ÷್ವಶಾಸ್ತç, ಐಚ್ಚಿಕ ಕನ್ನಡ ವಿಷಯಗಳೂ ಇಲ್ಲಿ ಲಭ್ಯ. ಜತೆಗೆ ಮಂಗಳೂರು ವಿಶ್ವವಿದ್ಯಾನಿಲಯದಡಿ ಸಂಸ್ಕೃತ ಐಚ್ಚಿಕ ವಿಷಯ ಬೋಧಿಸುವ ಬೆರಳೆಣಿಕೆಯ ಕಾಲೇಜುಗಳಲ್ಲಿ ಪುತ್ತೂರಿನ ಅಂಬಿಕಾ ಮಹಾವಿದ್ಯಾಲಯವೂ ಒಂದು ಎಂಬುದು ಉಲ್ಲೇಖಾರ್ಹ.

ತತ್ವಶಾಸ್ತ್ರ ಬೋಧಿಸುತ್ತಿರುವ ದೇಶದ ಏಕೈಕ ಕಾಲೇಜು: ವಿಜ್ಞಾನದೊಂದಿಗೆ ತತ್ವಶಾಸ್ತ್ರ ಬೋಧಿಸುತ್ತಿರುವ ದೇಶದ ಏಕೈಕ ಕಾಲೇಜು ಎಂಬ ಹೆಮ್ಮೆ ಪುತ್ತೂರಿನ ಈ ವಿದ್ಯಾಸಂಸ್ಥೆಯದ್ದು. ಬಿಎಸ್ಸಿ ಪದವಿಯಲ್ಲಿ ಭೌತಶಾಸ್ತç, ಗಣಿತಶಾಸ್ತ್ರ ಅಥವ ಮನಃಶಾಸ್ತçದೊಂದಿಗೆ ತತ್ವಶಾಸ್ತ್ರವನ್ನೂ ಒಂದು ಐಚ್ಚಿಕ ವಿಷಯವಾಗಿ ವಿದ್ಯಾರ್ಥಿಗಳಿಗೆ ಇಲ್ಲಿ ನೀಡಲಾಗುತ್ತಿದೆ. ಹೀಗೆ ತತ್ತ್ವ ಶಾಸ್ತ್ರವನ್ನು ವಿಜ್ಞಾನ ವಿಭಾಗದಲ್ಲಿ ಒದಗಿಸಿಕೊಡುತ್ತಿರುವ ದೇಶದ ಏಕೈಕ ಸಂಸ್ಥೆಯೆಂಬ ಹೆಗ್ಗಳಿಕೆಗೆ ಅಂಬಿಕಾ ಪದವಿ ಮಹಾವಿದ್ಯಾಲಯ ಪಾತ್ರವಾಗಿದೆ. ಭಾರತೀಯ ತತ್ತ್ವ ಜ್ಞಾನವನ್ನು ಎಳೆಯ ಮನಸ್ಸುಗಳಲ್ಲಿ ತುಂಬಿ ಬೌದ್ಧಿಕ ಶ್ರೀಮಂತ ಸಮಾಜವನ್ನು ರೂಪಿಸುವ ಕನಸಿನೊಂದಿಗೆ ಅಂಬಿಕಾ ಮಹಾವಿದ್ಯಾಲಯ ಕಾರ್ಯನಿರ್ವಹಿಸುತ್ತಿದೆ.

ಉಚಿತ ಶಿಕ್ಷಣ: ಭಾರತೀಯ ತತ್ವಶಾಸ್ತ್ರದಲ್ಲಿ ಜ್ಞಾನರಾಶಿಯೇ ಅಡಗಿದ್ದು ಅದನ್ನು ಎಳೆಯ ಮನಸ್ಸುಗಳಿಗೆ ಉಣಬಡಿಸುವ ಕಾರ್ಯವನ್ನು ಮಾಡಬೇಕಾದ್ದು ಶಿಕ್ಷಣ ಸಂಸ್ಥೆಗಳ ಜವಾಬ್ಧಾರಿ ಎಂಬ ಆಲೋಚನೆಯಡಿ ತತ್ವಶಾಸ್ತçವನ್ನು ಈ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಭಾರತೀಯ ತತ್ವಗಳಲ್ಲಡಗಿರುವ ಜ್ಞಾನದೆಡೆಗೆ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ತತ್ವಶಾಸ್ತç ವಿಷಯ ಸಂಯೋಜನೆ ಹೊಂದಿರುವ ಬಿಎ ಅಥವ ಬಿಎಸ್ಸಿ ಅಧ್ಯಯನ ನಡೆಸುವ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡಲಾಗುತ್ತಿದೆ.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ : ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವುದು ಈ ಸಂಸ್ಥೆಯ ಮತ್ತೊಂದು ವೈಶಿಷ್ಟ್ಯ. ಇಂದು ಪದವಿ ಪೂರೈಸುವ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಮಾತ್ರ ಸರ್ಕಾರಿ ಉದ್ಯೋಗಗಳ ಬಾಗಿಲು ತೆರೆದುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಅಂಬಿಕಾ ಕಾಲೇಜಿನಲ್ಲಿ ಪದವಿ ಓದುವ ವಿದ್ಯಾರ್ಥಿಗಳಿಗೆ ಮೊದಲ ವರ್ಷದಿಂದ ತೊಡಗಿ ಅಂತಿಮ ವರ್ಷದವರೆಗೂ ಎಸ್‌ಡಿಎ, ಎಫ್‌ಡಿಎ, ಪಿಡಿಒದಂತಹ ಪರೀಕ್ಷೆಗಳಿಗೆ ನಿರಂತರ ತರಬೇತಿ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಸರ್ಕಾರಿ ಉದ್ಯೋಗಕ್ಕೆ ಕಳುಹಿಸುವ ಇರಾದೆ ಈ ಶಿಕ್ಷಣ ಸಂಸ್ಥೆಯದ್ದು.

ವಿಶೇಷ ಆಕರ್ಷಣೆಯಾಗಿ ಅನುಪಮ ಟಿವಿ: ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮುನ್ನಡೆಸುತ್ತಿರುವ ಅನುಪಮ ಟಿವಿ ಎಂಬ ಯೂಟ್ಯೂಬ್ ವಾಹಿನಿ ಇದೀಗ ಎಲ್ಲರ ಆಕರ್ಷಣೆಗೆ ಕಾರಣವಾಗಿದೆ. ವಿದ್ಯಾರ್ಥಿಗಳಿಗೆ ಟಿವಿ ಪತ್ರಿಕೋದ್ಯಮದ ಅರಿವನ್ನು ಮೂಡಿಸುವ ನೆಲೆಯಲ್ಲಿ ಈ ವಾಹಿನಿಯನ್ನು ಆರಂಭಿಸಲಾಗಿದೆ. ಆಂಕರಿಂಗ್, ಕ್ಯಾಮರಾ ನಿರ್ವಹಣೆ, ವೀಡಿಯೋ ಎಡಿಟಿಂಗ್, ಸ್ಕ್ರಿಪ್ಟ್ ರೈಟಿಂಗ್, ವಾಯ್ಸ್ ಓವರ್ ಮೊದಲಾದ ವಿಷಯಗಳನ್ನು ಈ ಟಿವಿ ವಾಹಿನಿ ವಿದ್ಯಾರ್ಥಿಗಳಿಗೆ ಕಲಿಸಿಕೊಡುತ್ತಿದೆ. ಈಗಾಗಲೇ ವಿಭಾಗದ ವಿದ್ಯಾರ್ಥಿಗಳು ಈ ವಾಹಿನಿಯ ಮೂಲಕ ಮನೆಮಾತಾಗುತ್ತಿದ್ದಾರೆ.

ಸುದರ್ಶನ ಮಾಸಪತ್ರಿಕೆ: ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ಪತ್ರಿಕೋದ್ಯಮ ವಿಭಾಗ ಹೊರತರುತ್ತಿರುವ ಸುದರ್ಶನ ಎಂಬ ಹೆಸರಿನ ಮಾಸಪತ್ರಿಕೆ ವಿದ್ಯಾರ್ಥಿಗಳಿಗೆ ಬರವಣಿಗೆಯ ಕಲೆಯನ್ನು ಕಲಿಸಿಕೊಡುತ್ತಿದೆ. ಪತ್ರಿಕೊದ್ಯಮದಲ್ಲಿ ಉದ್ಯೋಗ ಕಂಡುಕೊಳ್ಳುವುದಕ್ಕೆ ಭಾಷೆಯ ಮೇಲಿನ ಹಿಡಿತದ ಅಗತ್ಯ ಇರುವುದರಿಂದ ಸ್ವತಃ ವಿಭಾಗದಿಂದಲೇ 32 ಪುಟಗಳ ಸುಂದರವಾದ ಮಾಸಪತ್ರಿಕೆಯನ್ನು ಹೊರತರಲಾಗುತ್ತಿದೆ. ಸುಮಾರು ಒಂದು ಸಾವಿರ ಪ್ರತಿಗಳ ಪ್ರಸಾರವನ್ನು ಈ ಮಾಸಪತ್ರಿಕೆ ಹೊಂದಿದೆ ಎಂಬುದು ಗಮನಾರ್ಹ.

ಆಮ್ನಾಯಾಃ ಭಾರತೀಯ ದಿನದರ್ಶಿಕೆ: ಭಾರತಕ್ಕೆ ಬೇಕು ಭಾರತೀಯ ದಿನದರ್ಶಿಕೆ ಎಂಬ ಕಲ್ಪನೆಯಡಿ, ಆತ್ಮನಿರ್ಭರ ಭಾರತಕ್ಕೆ ಅಳಿಲುಸೇವೆಯನ್ನು ಸಲ್ಲಿಸುವ ನೆಲೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು ಭಾರತೀಯ ದಿನದರ್ಶಿಕೆಯನ್ನು ಕಳೆದ ಎರಡು ವರ್ಷಗಳಿಂದ ಮುದ್ರಿಸಿ ಹಂಚುತ್ತಿವೆ. ಭಾರತೀಯ ದಿನಾಂಕ ಪದ್ಧತಿಯನ್ನಾಧರಿಸಿದ ಈ ಕ್ಯಾಲೆಂಡರನ್ನು ಅಂಬಿಕಾ ಪದವಿಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ವಿನಾಯಕ ಭಟ್ಟ ಗಾಳಿಮನೆ ಅವರು ರೂಪಿಸಿಕೊಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಭಾರತೀಯ ದಿನಾಂಕ ಪದ್ಧತಿಯ ಅರಿವನ್ನು ಒಡಮೂಡಿಸಲಾಗುತ್ತಿದೆ. ಹಾಗಾಗಿ ಅಂಬಿಕಾ ಸಂಸ್ಥೆಯ ವಿದ್ಯಾರ್ಥಿಗಳಿಗೆ ಭಾರತೀಯ ದಿನಾಂಕವನ್ನು ಗುರುತಿಸುವ, ವಿಶೇಷತೆಗಳನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಮೂಡಿಬರುತ್ತಿದೆ.

ಪುತ್ತೂರು ನಗರದಿಂದ ಕಾಲ್ನಡಿಗೆಯ ದೂರದಲ್ಲಿರುವ ಬಪ್ಪಳಿಗೆಯ ಪ್ರಶಾಂತ ವಾತಾವರಣದಲ್ಲಿ ಈ ಶಿಕ್ಷಣ ಸಂಸ್ಥೆ ತಲೆ ಎತ್ತಿ ನಿಂತಿದ್ದು, ಈ ಸಂಸ್ಥೆಯ ಗುಣಮಟ್ಟ, ಇಲ್ಲಿರುವ ಅನುಭವೀ ಶಿಕ್ಷಕ ವೃಂದ, ವಿದ್ಯಾರ್ಥಿಗಳಿಗಿರುವ ವಿವಿಧ ಸವಲತ್ತುಗಳು, ಗುಣಮಟ್ಟದ ಆಹಾರದ ಜತೆಗೆ ಉತ್ಕೃಷ್ಟ ಹಾಸ್ಟೆಲ್ ವ್ಯವಸ್ಥೆ, ಅತ್ಯುತ್ತಮ ಗ್ರಂಥಾಲಯವೇ ಮೊದಲಾದ ಅನೇಕ ಸಂಗತಿಗಳು ಸಂಸ್ಥೆಯ ವಿಶೇಷತೆಗಳೆನಿಸಿವೆ. ಹಾಗಾಗಿಯೇ ಅನೇಕ ವಿದ್ಯಾರ್ಥಿಗಳು ಅದಾಗಲೇ ಈ ಸಂಸ್ಥೆಗೆ ದಾಖಲಾತಿ ಬಯಸಿ ಕಾಲೇಜನ್ನು ಸಂಪರ್ಕಿಸುತ್ತಿದ್ದಾರೆ. ಕಾಲೇಜಿನಲ್ಲಿ ನಿಗದಿತವಾದ ಕೆಲವು ಅವಕಾಶಗಳಷ್ಟೇ ಇದ್ದು, ಆಸಕ್ತ ವಿದ್ಯಾರ್ಥಿಗಳು ತಕ್ಷಣ ಸಂಸ್ಥೆಯನ್ನು ಸಂಪರ್ಕಿಸಬಹುದು. ಸಂಪರ್ಕ ಸಂಖ್ಯೆ : 9448835488 / 7975354014

ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ರಾಜ್ಯದ ಹೆಮ್ಮೆಯ ಶಿಕ್ಷಣ ಸಂಸ್ಥೆಗಳು

1. ಅಂಬಿಕಾ ವಿದ್ಯಾಲಯ (ಸಿಬಿಎಸ್‌ಇ)
2. ಅಂಬಿಕಾ ಪದವಿಪೂರ್ವ ವಿದ್ಯಾಲಯ, ನೆಲ್ಲಿಕಟ್ಟೆ
3. ಅಂಬಿಕಾ ವಸತಿಯುತ ಪದವಿಪೂರ್ವ ವಿದ್ಯಾಲಯ, ಬಪ್ಪಳಿಗೆ
4. ಅಂಬಿಕಾ ಪದವಿ ಮಹಾವಿದ್ಯಾಲಯ, ಬಪ್ಪಳಿಗೆ

ರಾಕೇಶ ಕುಮಾರ್ ಕಮ್ಮಜೆ
ಮುಖ್ಯಸ್ಥರು, ಪತ್ರಿಕೋದ್ಯಮ ವಿಭಾಗ
ಅಂಬಿಕಾ ಮಹಾವಿದ್ಯಾಲಯ, ಪುತ್ತೂರು

LEAVE A REPLY

Please enter your comment!
Please enter your name here