ಗೋಳಿತ್ತೊಟ್ಟು: ಭಾರೀ ಗಾಳಿ ಮಳೆಗೆ ವ್ಯಾಪಕ ಕೃಷಿ ಹಾನಿ

0

ನೆಲ್ಯಾಡಿ: ಜು.14ರಂದು ಮಧ್ಯಾಹ್ನದ ವೇಳೆಗೆ ಬೀಸಿದ ಭಾರೀ ಗಾಳಿ ಹಾಗೂ ಮಳೆಗೆ ಗೋಳಿತ್ತೊಟ್ಟು ಪರಿಸರದಲ್ಲೂ ವ್ಯಾಪಕ ಹಾನಿ ಸಂಭವಿಸಿದೆ. ಹಲವೆಡೆ ವಿದ್ಯುತ್ ಕಂಬಗಳ ಮೇಲೆ ಮರಬಿದ್ದು ವಿದ್ಯುತ್ ತಂತಿ, ಕಂಬ ಮುರಿದು ಬಿದ್ದಿವೆ.


ಗೋಳಿತ್ತೊಟ್ಟು ಗ್ರಾಮದ ಡೆಂಬಲೆ, ಪಾತ್ರಮಾಡಿ, ಬೊಟ್ಟಿಮಜಲು, ಮುರಿಯೇಳು ಹಾಗೂ ಆಲಂತಾಯದಲ್ಲಿ ಮರ ವಿದ್ಯುತ್ ಕಂಬದ ಮೇಲೆ ಬಿದ್ದು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ ಎಂದು ವರದಿಯಾಗಿದೆ. ಮೆಸ್ಕಾಂ ಪವರ್ ಮ್ಯಾನ್‌ಗಳು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಂಡಿದ್ದಾರೆ. ಗ್ರಾಮದ ಹಲವು ಕಡೆಗಳಲ್ಲಿ ಅಡಿಕೆ ಮರ, ರಬ್ಬರ್ ಮರಗಳು ಮುರಿದಿವೆ ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here