ಉಪ್ಪಿನಂಗಡಿ ಪರಿಸರದಲ್ಲಿ ಭಾರೀ ಗಾಳಿ ಮಳೆ ಎಲ್ಲೆಡೆ ಮರಗಳು ಉರುಳಿ ಬಿದ್ದು ವಿದ್ಯುತ್ ಕಂಬಕ್ಕೆ ಹಾನಿ

0

ಉಪ್ಪಿನಂಗಡಿ: ಜುಲೈ 14ರಂದು ಮಧ್ಯಾಹ್ನ ಉಪ್ಪಿನಂಗಡಿ ಸುತ್ತಮುತ್ತಲು ಪ್ರದೇಶದಲ್ಲಿ ಬೀಸಿದ ಭಾರೀ ಗಾಳಿ ಮಳೆಯಿಂದಾಗಿ ಭಾರೀ ಪ್ರಮಾಣದಲ್ಲಿ ಹಾನಿ ಉಂಟಾಗಿರುವ ಬಗ್ಗೆ ವರದಿಯಾಗಿದೆ.

ಪೆರ್ನೆಯ ಬಳಿ ಮರವೊಂದು ಹೆದ್ದಾರಿಗೆ ಅಡ್ಡವಾಗಿ ಉರುಳಿ ಬಿದ್ದಿದ್ದು, ಇದರಿಂದಾಗಿ ವಿದ್ಯುತ್ ಕಂಬಗಳು ಹಾನಿಗೀಡಾಗಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವುಂಟಾಗಿತ್ತು. ಅದಾಗ್ಯೂ ಸುಮಾರು 1 ತಾಸು ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತಡೆ ಉಂಟಾಗಿತ್ತು. ಉಪ್ಪಿನಂಗಡಿಯ ಮಠ, ಪೆರಿಯಡ್ಕ, ಸುಬ್ರಹ್ಮಣ್ಯ ಕ್ರಾಸ್ ಮೊದಲಾದ ಕಡೆಯಲ್ಲಿ ಮರಗಳು ಉರುಳಿ ಬಿದ್ದಿದೆ. ಕೆಲವೊಂದು ಮನೆಯಲ್ಲಿ ಛಾವಣಿಗೆ ಹಾಕಲಾದ ಶೀಟುಗಳು ಹಾರಿ ಹೋಗಿ ಹಾನಿಯುಂಟಾಗಿದೆ.

ಉಪ್ಪಿನಂಗಡಿ ಪೇಟೆಯಲ್ಲಿ ಹಲವು ಕಟ್ಟಡಗಳ ಮೇಲ್ಛಾವಣಿ ಬಿರುಗಾಳಿಯ ಹೊಡೆತಕ್ಕೆ ಸಿಲುಕಿ ಹಾನಿಗೀಡಾದರೆ, ಪೇಟೆಯ ಪೀಠೋಪಕರಣ, ಮಳಿಗೆಯ ಗಾಜುಗಳು ಗಾಳಿಯ ರಭಸಕ್ಕೆ ತತ್ತರಿಸಿ ಒಡೆದು ಹೋಗಿದೆ.

LEAVE A REPLY

Please enter your comment!
Please enter your name here