ನರಿಮೊಗರು ಶಾಲೆಯಲ್ಲಿ ಸವಣೂರು ವಲಯ ಮಟ್ಟದ ಪ್ರಾಥಮಿಕ ವಿಭಾಗದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ

0

ವೀರಮಂಗಲ ಶಾಲೆಗೆ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಸಮಗ್ರ ಬಹುಮಾನ

ಪುತ್ತೂರು: ಮುಕ್ವೆ ಸ.ಹಿ.ಪ್ರಾ.ಶಾಲೆ ಇದರ ಆಯೋಜನೆಯಲ್ಲಿ ನರಿಮೊಗರು ಶಾಲೆಯಲ್ಲಿ ನಡೆದ ವಲಯಮಟ್ಟದ ಶಟಲ್ ಬ್ಯಾಡ್ ಮಿಂಟನ್ ಕ್ರೀಡಾಕೂಟವನ್ನು ಪುತ್ತೂರು ತಾಲೂಕು ಅಕ್ಷರದಾಸೋಹ ಸಹಾಯಕ ನಿರ್ದೇಶಕ ವಿಷ್ಣುಪ್ರಸಾದ್ ಅವರು ಉದ್ಘಾಟಿಸಿ ಶುಭಹಾರೈಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ನರಿಮೊಗರು ಪಂಚಾಯತ್ ಉಪಾಧ್ಯಕ್ಷ ಸುಧಾಕರ್ ಕುಲಾಲ್ ವಹಿಸಿದರು. ಸಿ ಆರ್ ಪಿ  ಪರಮೇಶ್ವರಿ, ಮುಕ್ವೆ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಅಬ್ದುಲ್ ಸಮೀರ್, ನರಿಮೊಗರು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಕೃಷ್ಣರಾಜ್ ಜೈನ್ ನರಿಮೊಗರು, ಶಾಲಾ ಮುಖ್ಯಗುರು ಜುಸ್ಪಿನಾ ಉಪಸ್ಥಿತರಿದ್ದರು. ಮುಕ್ವೆ ಶಾಲಾ ಮುಖ್ಯಗುರು ಕಾರ್ಮೆಲಸ್ ಅಂದ್ರಾದೆ ಸ್ವಾಗತಿಸಿದರು. ಮುಕ್ವೆ ಶಾಲೆಯ ವೇದಾವತಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಮುಕ್ವೆ ಶಾಲೆಯ ಚರಣ್ ಕುಮಾರ್ ವೀರಮಂಗಲ ಶಾಲೆಯ ತಾರಾನಾಥ ಸವಣೂರು, ನರಿಮೊಗರು ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ವಿಮಲ, ನರಿಮೊಗರು ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಲತಾ ಶಾಂತಿಗೋಡು ಶಾಲೆಯ ಸರೋಜ. ಪಿ.ಕೆ ಅತಿಥಿಗಳನ್ನು ಗೌರವಿಸಿದರು.

ಆಟೋಟವು ನರಿಮೊಗರು ಶಾಲೆಯ ಅರುಣೋದಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು. ಈ ಮಧ್ಯೆ ಕ್ಷೇತ್ರಶಿಕ್ಷಣಾಧಿಕಾರಿ ಲೋಕೇಶ್ ಸಿ ಆರ್ ಆಗಮಿಸಿ ಕ್ರೀಡಾಳುಗಳಿಗೆ ಶುಭಹಾರೈಸಿದರು. ಪಂದ್ಯಾವಳಿಯಲ್ಲಿ ಬಾಲಕಿಯರ ವಿಭಾಗದಲ್ಲಿ 3 ತಂಡ ಹಾಗೂ ಬಾಲಕರ ವಿಭಾಗದಲ್ಲಿ 7 ತಂಡಗಳು ಭಾಗವಹಿಸಿದ್ದವು. ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ವೀರಮಂಗಲ ದ್ವಿತೀಯ ಸ್ಥಾನವನ್ನು ಪ್ರಗತಿ ಕಾಣಿಯೂರು ಹಾಗೂ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಶಾಂತಿಗೋಡು ಹಿರಿಯ ಪ್ರಾಥಮಿಕ ಶಾಲೆ ದ್ವಿತೀಯ ಸ್ಥಾನವನ್ನು ವೀರಮಂಗಲ ಪ್ರಾಥಮಿಕ ಶಾಲೆ ಪಡೆದುಕೊಂಡಿತು. ಸೆಟ್ಲ್ ಬ್ಯಾಡ್ಮಿಂಟನ್ ಸ್ಪರ್ದೆಯಲ್ಲಿ ಬಾಲಕಿಯರ ವಿಭಾಗ ಪ್ರಥಮ ವೀರಮಂಗಲ ಶಾಲೆ ದ್ವಿತೀಯ ಪ್ರಗತಿ ಕಾಣಿಯೂರು ಬಾಲಕರು ಪ್ರಥಮ ಶಾಂತಿಗೋಡು ದ್ವಿತೀಯ ಸ್ಥಾನ ಪಡೆದುಕೊಂಡಿತು. ವೀರಮಂಗಲ ಶಾಲೆ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಸಮಗ್ರ ಬಹುಮಾನ ಪಡೆದಿದೆ.

LEAVE A REPLY

Please enter your comment!
Please enter your name here