ಕೆ.ವಿ.ಜಿ ವೈದ್ಯಕೀಯ ಮಹಾವಿದ್ಯಾಲಯದ ನೂತನ ಜಿರಿಯಾಟ್ರಿಕ್ ಮೆಡಿನ್ ವಿಭಾಗದ ಮುಖ್ಯಸ್ಥರಾದ ಡಾ.ಶ್ರೀಪತಿ ರಾವ್ ಅವರಿಗೆ ಪ್ರಗತಿ ಪ್ಯಾರಮೆಡಿಕಲ್‌ನಲ್ಲಿ ಅಭಿನಂದನಾ ಗೌರವ

0

  • ಟೀಚಿಂಗ್ ಆಸಕ್ತಿ ಈಡೇರಿದೆ – ಡಾ. ಸುಧಾ ಎಸ್ ರಾವ್
  • ವೈದ್ಯರನ್ನು ತಯಾರು ಮಾಡುವ ಸುಯೋಗ – ಡಾ.ಶ್ರೀಪತಿ ರಾವ್
  • ಡಾ.ಶ್ರೀಪತಿ ರಾವ್‌ರವರು ಒನ್ ಮ್ಯಾನ್ ಆರ್ಮಿ – ಡಾ. ಪ್ರಭು
  • ಎಂ.ಡಿಯೇ ವಿದ್ಯಾರ್ಥಿಗಳಿಗೆ ಟೀಚ್‌ಮಾಡುವು ವಿಶೇಷ – ಪ್ರೀತಾ ಹೆಗ್ಡೆ

ಪುತ್ತೂರು: ಸುಳ್ಯ ಕೆ.ವಿ.ಜಿ ವೈದ್ಯಕೀಯ ಮಹಾವಿದ್ಯಾಲಯದ ನೂತನ ಜಿರಿಯಾಟ್ರಿಕ್ ಮೆಡಿಸಿನ್ ವಿಭಾಗದ ಮುಖ್ಯಸ್ಥರಾಗಿ ಪದೋನ್ನತಿ ಹೊಂದಿದ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಶ್ರೀಪತಿ ರಾವ್ ಅವರನ್ನು ಪುತ್ತೂರು ಪ್ರಗತಿ ಪ್ಯಾರ ಮೆಡಿಕಲ್‌ನಲ್ಲಿ ಅಭಿನಂದಿಸಿ ಗೌರವಿಸಲಾಯಿತು. ಆಸ್ಪ್ರೆಯ ವೈದ್ಯರು, ಪ್ರಗತಿ ಪ್ಯಾರ ಮೆಡಿಕಲ್‌ನ ಪ್ರಾಂಶುಪಾಲರು, ಸಿಬ್ಬಂದಿಗಳು ಡಾ.ಶ್ರೀಪತಿ ರಾವ್ ಅವರಿಗೆ ಶಾಲು ಹೊದೆಸಿ ಗೌರವಿಸಿದರು.

 

 


ಟೀಚಿಂಗ್ ಆಸಕ್ತಿ ಈಡೇರಿದೆ:
ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಸಿಇಒ ಆಗಿರುವ ಡಾ. ಸುಧಾ ಎಸ್ ರಾವ್ ಅವರು ಮಾತನಾಡಿ ಕಳೆದ ೩೪ ವರ್ಷಗಳ ಕಾಲ ನಡೆದು ಬಂದ ದಾರಿಯಲ್ಲಿ ಇಷ್ಟೊಂದು ದೊಡ್ಡ ಸಂಸ್ಥೆ ಕಟ್ಟಲು ಸಾಧ್ಯವಾಯಿತು. ನಮ್ಮಿಬ್ಬರ ಶ್ರಮ ಬಹುಶಃ ಈ ಕಟ್ಟಡ ಒಂದೊಂದು ಕಲ್ಲಿನಲ್ಲಿದೆ. ಆದರೂ ಟೀಚಿಂಗ್ ಆಸಕ್ತಿ ಹೊಂದಿರುವ ಅವರಲ್ಲಿ ತನ್ನ ಹಿಂದಿನ ಬೆಂಗಳೂರಿನ ನೆನಪು ಕಾಡುತ್ತಿತ್ತು. ಅವರ ಹಾದಿ ಬೇರೆಯಾದರೂ ಇಲ್ಲೂ ಯಶಸ್ವಿಕಂಡಿದ್ದಾರೆ. ಇದೇ ಸಂದರ್ಭದಲ್ಲಿ ಅವರಿಗೆ ಕೋವಿಡ್ ಸಂದರ್ಭದಲ್ಲಿ ಕೆ.ವಿ.ಜಿ ವೈದ್ಯಕೀಯ ಮಹಾವಿದ್ಯಾಲಯದಿಂದ ಆನ್‌ಲೈನ್ ತರಗತಿ ತೆಗೆದು ಕೊಳ್ಳುವ ಅವಕಾಶ ಲಭಿಸಿತ್ತು. ಆಗ ಅವರು ಎಸೋಸಿಯೇಟ್ ಪ್ರೊಫೆಸರ ಅಗಿದ್ದು. ಇದೀಗ ಪ್ರೊಫೆಸರ್ ಆಗಿ ಭಡ್ತಿ ಹೊಂದಿದ್ದಾರೆ. ಅದಕ್ಕಾಗಿಯೇ ಪ್ರತ್ಯೇಕ ವಿಭಾಗವೂ ಆರಂಭಗೊಂಡಿದೆ. ಒಟ್ಟಿನಲ್ಲಿ ಅವರ ಟೀಚಿಂಗ್ ಆಸಕ್ತಿ ಈಡೇರಿದೆ ಎಂದು ಹೇಳಿದ ಅವರು ಅಭಿನಂದನೆ ಸಲ್ಲಿಸಿದರು.

ವೈದ್ಯರನ್ನು ತಯಾರು ಮಾಡುವ ಸುಯೋಗ ಬಂದಿದೆ:
ಸನ್ಮಾನ ಸ್ವೀಕರಿಸಿದ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಶ್ರೀಪತಿ ರಾವ್ ಅವರು ಮಾತನಾಡಿ ನಾನು ಪದೋನ್ನತಿ ಆಗಿದ್ದರೂ. ಇದು ಜವಾಬ್ದಾರಿಯುತ ಕೆಲಸ ಎಂದು ಹೇಳಲು ಇಚ್ಚಿಸುತ್ತೇನೆ. ಯಾವುದೇ ಒಂದು ವಿಭಾಗದ ಮುಖ್ಯಸ್ಥನಾದಾಗ ತಪ್ಪು, ಸರಿಗಳು ಇರುತ್ತವೆ. ಅದನ್ನು ನಿಭಾಯಿಸಿಕೊಂಡು ಹೋಗುವುದು ಬಹಳ ಕಷ್ಟದ ಕೆಲಸ. ಕಾರ್ಮಿಕರು, ಕೈಗಾರಿಕೆ, ಇಂಜಿನಿಯರಿಂಗ್, ಸರಕಾರಿ ಉದ್ಯೋಗಕ್ಕೆ ಭಿನ್ನವಾಗಿ ವೈದ್ಯರನ್ನು ತಯರಿಸುವ ಜವಾಬ್ದಾರಿ ಬಹಳ ಸಂತೋಷ ಕೊಡುವ ಸಂಗತಿ ಆಗಿದೆ. ಗುಣಮಟ್ಟದ ಚಿಕಿತ್ಸೆಯಿಂದ ವಿಶೇಷ ಸಂದರ್ಭದಲ್ಲಿ ರೋಗಿಯನ್ನು ಉಳಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಮುಂದಿನ ಜನಾಂಗದ ವೈದ್ಯರು ಗುಣಮಟ್ಟದ ಚಿಕಿತ್ಸೆಗೆ ಆದ್ಯತೆ ಕೊಡಬೇಕು. ಎಷ್ಟು ಕೇಸು ಬಂತು ಎಂದು ಹೇಳುವುದಕ್ಕಿಂತ ಎಷ್ಟು ಮಂದಿ ರೋಗಿಯನ್ನು ಉಳಿಸಿದ್ದೀರಿ ಎಂಬುದು ಮುಖ್ಯ. ರೋಗಿಗೆ ಔಷಧಿ ಕೊಡುವ ಕೆಲಸ ಮಾತ್ರವಲ್ಲ, ರೋಗಿಯನ್ನು ಉಳಿಸುವ ಉತ್ತಮ ವೈದ್ಯನಾಗಿ ಮೂಡಿಬರಬೇಕು. ಆಗ ನಮ್ಮ ವೈದ್ಯಕೀಯ ಕ್ಷೇತ್ರಕ್ಕೆ ಗೌರವ ಬರುತ್ತದೆ. ರಾಜಕೀಯ, ಧಾರ್ಮಿಕ, ಸಾಮಾಜಿಕ ಕ್ಷೇತ್ರವನ್ನು ವೈದ್ಯ ಲೋಕವನ್ನು ಹೋಲಿಸಲು ಸಾಧ್ಯವಿಲ್ಲ. ಆಸ್ಪತ್ರೆಗೆ ಬಂದ ರೋಗಿಯನ್ನು ಆರೋಗ್ಯವಂತರನ್ನಾಗಿ ಮಾಡಿ ಕಳಿಸುವುದೇ ನಮ್ಮ ಧೇಯ ಎಂದ ಅವರು ವೈದ್ಯಕೀಯ ಸೇವೆಯ ಆರಂಭದಲ್ಲಿ ತಾನು ಬೆಂಗಳೂರು ನಿಮಾನ್ಸ್‌ನಿಂದ ಪುತ್ತೂರಿಗೆ ಬಂದು ಸರಕಾರಿ ಆಸ್ಪತ್ರೆಗೆ ನೇಮಕಗೊಂಡು. ಇವತ್ತಿನ ತನಕ ಬೆಳದು ಬಂದ ಹಾದಿಯಲ್ಲಿ ಆಸ್ಪತ್ರೆ ಎಲ್ಲಾ ಸಿಬ್ಬಂದಿಗಳ ಪಾತ್ರವಿದೆ. ಇದು ನನ್ನ ವೈಯುಕ್ತಿಕ ಸಾಧನೆಯಲ್ಲ. ೧೯೯೭ರಲ್ಲಿ ೨೦ ಬೆಡ್‌ನ ಆಸ್ಪತ್ರೆಯಿಂದ ಅಪ್‌ಗ್ರೇಡ್ ಮಾಡಿ ಗ್ರಾಮೀಣ ಭಾಗ ಜನರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ಸಿಗಬೇಕೆಂದು ೨೦೦೪ರಲ್ಲಿ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆ ಆರಂಭಗೊಂಡಿತ್ತು. ಇವತ್ತು ನನಗೆ ವೈದ್ಯರನ್ನು ತಯಾರು ಮಾಡುವ ಸುಯೋಗ ಬಂದಿರುವುದು ಸಂತೋಷ ಆಗಿದೆ ಎಂದರು.

ಡಾ.ಶ್ರೀಪತಿ ರಾವ್‌ರವರು ಒನ್ ಮ್ಯಾನ್ ಆರ್ಮಿ:
ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಡಾ. ಪ್ರಭು ಅವರು ಮಾತನಾಡಿ ರೋಗಿಗಿರುವ ರೋಗವನ್ನು ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ಒದಗಿಸುವುದು ಡಾ.ಶ್ರೀಪತಿ ರಾವ್ ಅವರ ಗುಣ. ಅವರಿಂದ ಕಲಿಯುವಂತಹದ್ದು ಬಹಳಷ್ಟಿದೆ. ಅವರು ಒಂದು ರೀತಿಯಲ್ಲಿ ಒನ್ ಮ್ಯಾನ್ ಆರ್ಮಿ. ಮುಂದಿನ ದಿನ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆ ಸೂಫರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಹೊರ ಹೊಮ್ಮಲಿ ಎಂದು ಹಾರೈಸಿದರು.

ಎಂ.ಡಿಯೇ ವಿದ್ಯಾರ್ಥಿಗಳಿಗೆ ಟೀಚ್‌ಮಾಡುವು ವಿಶೇಷ:
ಪ್ರಗತಿ ಪ್ಯಾರ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲೆ ಪ್ರೀತಾ ಹೆಗ್ಡೆ ಅವರು ಮಾತನಾಡಿ ಯಾವುದೇ ಕಾಲೇಜು ಇರಬಹುದು. ಅಲ್ಲಿ ಆಡಳಿತ ವೈದ್ಯಾಧಿಕಾರಿಯವರು ಮಕ್ಕಳಿಗೆ ಟೀಚ್ ಮಾಡುವುದು ಬಹಳ ಕಡಿಮೆ. ಆದರೆ ಡಾ.ಶ್ರೀಪತಿ ರಾವ್ ಅವರು ಮಕ್ಕಳಿಗೆ ಅರ್ಥ ಆಗುವ ರೀತಿಯಲ್ಲಿ ಶಿಕ್ಷಣ ನೀಡುತ್ತಾರೆ. ಇದು ಅವರಲ್ಲಿರುವ ಗುಣ. ಇದರಿಂದಾಗಿ ಇವತ್ತು ಅವರು ಉನ್ನತ ಮಟ್ಟದ ಸ್ಥಾನ ಏರಿದ್ದಾರೆ ಎಂದರು. ಲ್ಯಾಬ್‌ನ ಹಿರಿಯ ಪ್ರಾಯೋಗ ತಜ್ಞೆ ಎಲಿಜಬೆತ್, ಆಸ್ಪತ್ರೆಯ ಮ್ಯಾನೇಜರ್ ವಿಠಲ್ ರಾವ್, ಪ್ರಗತಿ ಪ್ಯಾರಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿ ನಾಫಿಯಾ ಶುಭ ಹಾರೈಸಿದರು. ವಿದ್ಯಾರ್ಥಿನಿ ಆನಂದಿ ಪ್ರಾರ್ಥಿಸಿದರು. ಪ್ರಗತಿ ಪ್ಯಾರ ಮೇಡಿಕಲ್ ಉಪನ್ಯಾಸಕಿ ಮಾನಸ ಸ್ವಾಗತಿಸಿದರು. ಪ್ರಾಂಶುಪಾಲೆ ಪ್ರೀತಾ ಹೆಗ್ಡೆ ವಂದಿಸಿದರು.

LEAVE A REPLY

Please enter your comment!
Please enter your name here