ರೋಟರಿ ಆರೋಗ್ಯ ಸಿರಿಯಿಂದ ಉಚಿತ ನೇತ್ರ ಚಿಕಿತ್ಸಾ ಸೇವಾ ಶಿಬಿರ ಉದ್ಘಾಟನೆ

0

ಪುತ್ತೂರು: ರೋಟರಿ ಕ್ಲಬ್ ಪುತ್ತೂರು, ಆನಂದಾಶ್ರಮ ಸೇವಾ ಟ್ರಸ್ಟ್, ಜಿಲ್ಲಾ ಅಂಧತ್ವ ನಿವಾರಣ ಸಂಸ್ಥೆ ಮಂಗಳೂರು, ಸರಕಾರಿ ಆಸ್ಪತ್ರೆ, ರೋಟಾರ್‍ಯಾಕ್ಟ್ ಕ್ಲಬ್ ಪುತ್ತೂರು ಇವರ ಸಹಭಾಗಿತ್ವದಲ್ಲಿ ರೋಟರಿ ಜಿಲ್ಲೆ 3181ಆರೋಗ್ಯಸಿರಿ ಯೋಜನೆಯಲ್ಲಿ ಜು. 15ರಂದು ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ವಠಾರದಲ್ಲಿರುವ ಸುಕೃತೀಂದ್ರ ಕಲಾ ಮಂದಿರದಲ್ಲಿ ಉಚಿತ ನೇತ್ರ ಚಿಕಿತ್ಸಾ ಸೇವಾ ಶಿಬಿರ ನಡೆಯಿತು.


ಹಿರಿಯ ವೈದ್ಯರಾಗಿರುವ ಆನಂದಾಶ್ರಮ ಸೇವಾ ಟ್ರಸ್ಟ್‌ನ ಅಧ್ಯಕ್ಷೆ ಡಾ.ಗೌರಿ ಪೈ ಮತ್ತು ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಆಶಾ ಜ್ಯೋತಿ ಪುತ್ತೂರಾಯ ಅವರು ಶಿಬಿರವನ್ನು ಉದ್ಘಾಟಿಸಿ ಶುಭ ಹಾರೈಸಿದರು. ರೋಟರಿ ಕ್ಲಬ್ ಅಧ್ಯಕ್ಷ ಉಮಾನಾಥ್ ಪಿ.ಬಿ ಅಧ್ಯಕ್ಷತೆ ವಹಿಸಿದ್ದರು.


ಜಿಲ್ಲಾ ಅಂದತ್ವ ನಿವಾರಣ ಸಂಸ್ಥೆ ಜಿಲ್ಲಾ ನೇತ್ರ ಪರಿವೀಕ್ಷಕ ಡಾ.ಶಾಂತರಾಮ, ವೆನ್‌ಲಾಕ್ ಆಸ್ಪತ್ರೆಯ ನೇತ್ರ ತಜ್ಞ ಡಾ.ಅನಿಲ್ ರಾಮಾನುಜಮ್, ರೋಟರಿ ಕ್ಲಬ್ ಝೋನ್ ಅಸಿಸ್ಟೆಂಟ್ ಗವರ್ನರ್ ಎ.ಜೆ.ರೈ, ಅಂಗಾಂಗ ದಾನ ವಿಭಾಗದ ಪದ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮುದಾಯ ಸೇವಾ ನಿರ್ದೇಶಕ ಝೇವಿಯರ್ ಡಿ’ಸೋಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಒಕೆಶನ್ ನಿರ್ದೇಶಕ ವಾಮನ್ ಪೈ, ಝೋನಲ್ ಅಸಿಸ್ಟೆಂಟ್ ಗವರ್ನರ್ ಎ.ಜೆ.ರೈ, ಡಾ.ಅಶೋಕ್ ಪಡಿವಾಳ್, ಬಾಲಕೃಷ್ಣ ಆಚಾರ್ಯ, ಹೆರಾಲ್ಡ್ ಮಾಡ್ತಾ, ಜಯರಾಜ್ ಭಂಡಾರಿ ಅತಿಥಿಗಳನ್ನು ಗೌರವಿಸಿದರು. ರೋಟರಿ ಕ್ಲಬ್ ಕಾರ್ಯದರ್ಶಿ ಡಾ.ಶ್ರೀಪ್ರಕಾಶ್ ವಂದಿಸಿದರು. ಆನಂದಾಶ್ರಮ ಸೇವಾ ಸಂಸ್ಥೆಯ ಸದಾಶಿವ ಪೈ, ರೋಟರ್‍ಯಾಕ್ಟ್ ಕ್ಲಬ್‌ನ ಅಧ್ಯಕ್ಷ ಗಣೇಶ್ ಕಲ್ಲರ್ಪೆ, ಕಾರ್ಯದರ್ಶಿ ಮಹೇಶ್, ಶ್ರೀಧರ್ ಅಚಾರ್ಯ, ಪರಮೇಶ್ವರ ಗೌಡ ಸೇರಿದಂತೆ ಹಲವಾರು ಮಂದಿ ರೋಟರಿ ಸಂಸ್ಥೆಯ ಸದಸ್ಯರು ಭಾಗವಹಿಸಿದ್ದರು.

140 ಮಂದಿಗೆ ಉಚಿತ ಕನ್ನಡಕ ವಿತರಣೆ
ಶಿಬಿರದಲ್ಲಿ ಉಚಿತ ಕಣ್ಣಿನ ಪರೀಕ್ಷೆ, ಚಿಕಿತ್ಸೆ ಮತ್ತು ಸಲಹೆ, ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ, ಕನ್ನಡಕ ವಿತರಣೆ ನಡೆಯಿತು. ಸುಮಾರು 180ಮಂದಿ ಶಿಬಿರದಲ್ಲಿ ಭಾಗವಹಿಸಿದ್ದರು. ಈ ಪೈಕಿ 140ಮಂದಿಗೆ ಉಚಿತ ಕನ್ನಡಕ ವಿತರಣೆ ಮಾಡಲಾಯಿತು. 16 ಮಂದಿಗೆ ಕಣ್ಣಿನ ಪೊರೆ ಚಿಕಿತ್ಸೆಗೆ ತಿಳಿಸಲಾಯಿತು. ಜು. 26ಕ್ಕೆ 16ಮಂದಿಗೆ ಕಣ್ಣಿನ ಶಸ್ತ್ರಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗುವುದು ಎಂದು ರೋಟರಿ ಕ್ಲಬ್ ಅಧ್ಯಕ್ಷ ಉಮಾನಾಥ್ ಪಿ.ಬಿ. ತಿಳಿಸಿದ್ದಾರೆ

LEAVE A REPLY

Please enter your comment!
Please enter your name here