ಕುಂಬ್ರ ಪೇಟೆಗೆ ಆಂಬುಲೆನ್ಸ್ ವಾಹನ ಒದಗಿಸುವ ಬಗ್ಗೆ ಕುಂಬ್ರ ವರ್ತಕರ ಸಂಘದಿಂದ ಶಾಸಕರಿಗೆ ಮನವಿ

0

ಪುತ್ತೂರು: ತಾಲೂಕಿನ ಅತೀ ದೊಡ್ಡ ಪಟ್ಟಣವಾಗಿ ಬೆಳೆಯುತ್ತಿರುವ ಕುಂಬ್ರ ಪೇಟೆಗೆ ಆಂಬುಲೆನ್ಸ್ ವಾಹನ ಒದಗಿಸುವ ಬಗ್ಗೆ ಪುತ್ತೂರು ಶಾಸಕ ಸಂಜೀವ ಮಠಂದೂರು ಸೇರಿದಂತೆ ಕೆದಂಬಾಡಿ, ಒಳಮೊಗ್ರು ಮತ್ತು ಅರಿಯಡ್ಕ ಗ್ರಾಪಂ ಅಧ್ಯಕ್ಷರಿಗೆ ಕುಂಬ್ರ ವರ್ತಕರ ಸಂಘದಿಂದ ಜು.14 ರಂದು ಮನವಿ ಸಲ್ಲಿಸಲಾಯಿತು. ಕುಂಬ್ರ ಪೇಟೆಯು ತಿಂಗಳಾಡಿ, ಕೌಡಿಚ್ಚಾರು ಹಾಗೂ ಪರ್ಪುಂಜ ಭಾಗಗಳಿಗೆ ಸಂಪರ್ಕಿಸುವ ಪೇಟೆ ಆಗಿದ್ದು ಕುಂಬ್ರ ವ್ಯಾಪ್ತಿಯಲ್ಲಿ ಇತ್ತೀಚೆಗೆ ಎರಡು ಮೂರು ವಾಹನ ಅಫಘಾತಗಳು ನಡೆದು ಆಂಬುಲೆನ್ಸ್ ವಾಹನಗಳು ಇಲ್ಲದ ಕಾರಣ ಜೀವವನ್ನು ಉಳಿಸಲು ಕಷ್ಟವಾಯಿತು ಹಾಗೂ ಸಕಾಲದಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಪರದಾಡುವ ಪರಿಸ್ಥಿತಿ ಬಂದಿದ್ದು ಈ ಕಾರಣದಿಂದ ಕುಂಬ್ರದಲ್ಲಿ ಆಂಬುಲೆನ್ಸ್ ನ ಅಗತ್ಯವಿದ್ದು ತಕ್ಷಣವೇ 108 ಆಂಬುಲೆನ್ಸ್ ಸೌಲಭ್ಯ ನೀಡಬೇಕಾಗಿ ಮನವಿ ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ ಕುಂಬ್ರ ವರ್ತಕರ ಸಂಘದ ಅಧ್ಯಕ್ಷ ಎಸ್ ಮಾಧವ ರೈ ಕುಂಬ್ರ, ಮಾಜಿ ಅಧ್ಯಕ್ಷರುಗಳಾದ ದಿವಾಕರ ಶೆಟ್ಟಿ ನಾರಾಯಣ ಪೂಜಾರಿ ಕುರಿಕ್ಕಾರ , ಮೆಲ್ವಿನ್ ಮೊಂತೇರೋ, ಉಪಾಧ್ಯಕ್ಷ ರಾಜೇಶ್ ರೈ ಪರ್ಪುಂಜ , ಜೊತೆ ಕಾರ್ಯದರ್ಶಿ ಉದಯ ಆಚಾರ್ಯ, ಪದ್ಮನಾಭ ಆಚಾರ್ಯ, ಶ್ರುತಿ ಚಂದ್ರ, ಹನೀಫ್ ಕುಂಬ್ರ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here