ಕೊಯಿಲತ್ತಡ್ಕ-ಡಿಂಬ್ರಿ ರಸ್ತೆಯಲ್ಲಿ ಶ್ರಮದಾನ

0

 

ಪುತ್ತೂರು; ಒಳಮೊಗ್ರು ಗ್ರಾಮದ ಕೊಯಿಲತ್ತಡ್ಕ -ಡಿಂಬ್ರಿ ರಸ್ತೆಯಲ್ಲಿ ಸ್ಥಳೀಯ ಯುವಕರಿಂದ ಶ್ರಮದಾನ ನಡೆಯಿತು. ಒಳ ರಸ್ತೆಯಲ್ಲಿ ಹಾದು ಹೋಗುತ್ತಿದ್ದ ಹೈಟೆನ್ಷನ್ ವಿದ್ಯುತ್ ಲೈನಿಗೆ ತಾಗುತ್ತಿದ್ದ ಅಪಾಯಕಾರಿ ಮರದ ಗೆಲ್ಲುಗಳನ್ನು, ಒಣಗಿದ ಮರಗಳನ್ನು ಶ್ರಮದಾನದ ಮೂಲಕ ತೆರವು ಮಾಡಲಾಯಿತು. ಹೈ ಟೆನ್ಷನ್ ತಂತಿ ಮರಗಳಿಗೆ ಸುತ್ತಿಕೊಂಡ ಪರಿಣಾಮ ಅಪಾಯವನ್ನು ಸೃಷ್ಟಿಸಿತ್ತು. ಶ್ರಮದಾನದಲ್ಲಿ ಕುಂಬ್ರ ಬದ್ರಿಯಾ ನಗರ ಬದ್ರಿಯಾ ಜಮಾತ್ ಕಮಿಟಿ ಅಧ್ಯಕ್ಷರಾದ ಉಸ್ಮಾನ್ ಮುಸ್ಲಿಯಾರ್, ಡಿಂಬ್ರಿ ತರ್ಬಿಯತ್ತುಲ್ ಇಸ್ಲಾಂ ಜಮಾತ್ ಕಮಿಟಿ ಅಧ್ಯಕ್ಷ ಯೂಸುಫ್ ಮುಸ್ಲಿಯಾರ್ ಬೆದ್ರಗುರಿ, ಕಿಶೋರ್ ಮಗಿರೆ, ಇಬ್ರಾಹಿಂ ಬಾತಿಷಾ ಝುಹುರಿ ಕುಂಬ್ರ, ರಿಕ್ಷಾ ಚಾಲಕ ರಝಾಕ್ ಶಾಂತಿನಡಿ, ಉದ್ಯಮಿ ಮಹಮ್ಮದ್ ಮುಸ್ಲಿಯಾರ್ ಡಿಂಬ್ರಿ, ಮಹಮ್ಮದ್ ಮಗಿರೆ ಡಿಂಬ್ರಿ, ನಿಝಾರ್ ಡಿಂಬ್ರಿ, ಮುನೀರ್ ಮಗಿರೆ, ದಾವೂದ್ ಮಗಿರೆ, ಹಸೈನಾರ್ ಮಗಿರೆ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here