ಶಿಕ್ಷಕ-ರಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ- ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮ

0

ಪುತ್ತೂರು:2022-23ನೇ ಶೈಕ್ಷಣಿಕ ವರ್ಷದ ಪೋಷಕರ ಸಭೆ ಮತ್ತು ಶಿಕ್ಷಕ-ರಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಇತ್ತೀಚೆಗೆ ನವೋದಯ ಪ್ರೌಢ ಶಾಲಾ ಸಭಾಂಗಣದಲ್ಲಿ 2021-22ನೇ ಸಾಲಿನ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಶ್ರೀಕೃಷ್ಣ ಭಟ್ ಬಟ್ಯಮೂಲೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಗುರುಗಳಾದ  ಪುಷ್ಪಾವತಿ.ಎಸ್ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಇಂಗ್ಲಿಷ್ ಅಧ್ಯಾಪಕ ರಾಧಾಕೃಷ್ಣ ಕೋಡಿ ಇವರು ವಿವಿಧ ಸಂಘಗಳ ರಚನೆ ಕಾರ್ಯವನ್ನು ನಿರ್ವಹಿಸಿದರು.  ಶ್ರೀಕೃಷ್ಣ ಭಟ್ ಬಟ್ಯಮೂಲೆ ಇವರು ಸತತ ಮೂರನೇ ಬಾರಿ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾಗಿ ಆಯ್ಕೆಗೊಂಡರು. ಜಲಜಾಕ್ಷಿ ಕೋಡಿ,  ಶಶಿಕಲಾ ಕರ್ನಪ್ಪಾಡಿ ಮತ್ತು  ರಶೀದಾ ಕೋನಡ್ಕ ಇವರುಗಳನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

 

ಪೋಷಕರಾದ ಶ್ರೀಧರ್ ಭಟ್, ಕವಿತಾ, ಮಂಜುನಾಥ, ರತ್ನ, ನಳಿನಾಕ್ಷಿ, ಅಲಿಕುಂಞ, ವೆಂಕಪ್ಪ ನಾಯ್ಕ, ಇಸ್ಮಾಯಿಲ್, ಶ್ರೀಧರ, ಉಮ್ಮರ್ ಫಾರೂಕ್, ಜಯಲಕ್ಮಿ, ಅಲಿ, ಕೇಶವ ನಾಯಕ್, ವೆಂಕಪ್ಪ ಇವರುಗಳನ್ನೊಳಗೊಂಡ ಶಿಕ್ಷಕ-ರಕ್ಷಕ ಸಮಿತಿಯನ್ನು ರಚಿಸಲಾಯಿತು. ಹಾಗೆಯೇ ಮಂಜಪ್ಪ, ಶಿವಪ್ಪ ನಾಯ್ಕ, ದಯಾನಂದ, ಅಬ್ದುಲ್ಲ, ಇಂದಿರಾ, ಗೀತಾ ಇವರುಗಳನ್ನೊಳಗೊಂಡ ಸುರಕ್ಷಾ ಸಮಿತಿ ಹಾಗೂ ಮಮತಾ, ಕುಸುಮ, ದೇವಕಿ, ಲಕ್ಷ್ಮೀ, ಗೀತಾ, ರಝಿನಾ ಇವರನ್ನೊಳಗೊಂಡ ಮಾತೆಯರ ಸಂಘವನ್ನು ರಚಿಸಲಾಯಿತು. ನೂತನವಾಗಿ ಆಯ್ಕೆಗೊಂಡವರ ಪದಾಧಿಕಾರ ಹಾಗೂ ಅಭಿನಂದನಾ ಕಾರ್ಯಕ್ರಮದ ಬಳಿಕ ಅಧ್ಯಕ್ಷರು ಎಲ್ಲರ ಸಹಕಾರವನ್ನು ಯಾಚಿಸಿದರು. ಗಣಿತ ಅಧ್ಯಾಪಿಕೆ ಕುಮಾರಿ ರೇವತಿ ಧನ್ಯವಾದವನ್ನರ್ಪಿಸಿದರು. ವಿಜ್ಞಾನ ಅಧ್ಯಾಪಿಕೆ ಶ್ರೀಮತಿ ಭುವನೇಶ್ವರಿ.ಎಂ NMMS,NTSE ಮೊದಲಾದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ತಿಳಿಸಿದರು. ಸಮಾಜ ಅಧ್ಯಾಪಿಕೆ ಸುಮಂಗಲಾ.ಕೆ ಸ್ವಾಗತಿಸಿದರು ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಹಿಂದಿ ಅಧ್ಯಾಪಿಕೆ ಪ್ರವೀಣ ಕುಮಾರಿ ಕಾರ್ಯಕ್ರಮವನ್ನು ನಿರೂಪಿಸಿದರು.ಸಂಸ್ಕೃತ  ಅಧ್ಯಾಪಿಕೆ ಶ್ರೀಮತಿ ಶೋಭಾ.ಬಿ ನಾರಾಯಣ ಬನ್ನಿಂತಾಯ,ಪುರಂದರ ನಾಯ್ಕ,ಯಸ್ತಿತಾ ಹಾಗೂ ಮಕ್ಕಳು ಸಹಕರಿಸಿದರು.

 

LEAVE A REPLY

Please enter your comment!
Please enter your name here