ಜವಾಹರ್ ನವೋದಯ ವಿದ್ಯಾಲಯಕ್ಕೆ ಅಮೃತ್ ಬಿ. ಆಯ್ಕೆ

0

ಪುತ್ತೂರು: 2022ರ ಎಪ್ರಿಲ್‌ ನಲ್ಲಿ ನಡೆದ ಜವಾಹರ್‌ ನವೋದಯ 6ನೇ ತರಗತಿಯ ಪ್ರವೇಶ ಪರೀಕ್ಷೆಯಲ್ಲಿ ಸುದಾನ ರೆಸಿಡೆನ್ಸಿಯಲ್ ಸ್ಕೂಲ್‌ನ 5 ನೇ ತರಗತಿ ವಿದ್ಯಾರ್ಥಿ ಅಮೃತ್ ಬಿ. ರವರು ದಕ್ಷಿಣ ಕನ್ನಡ ಜಿಲ್ಲೆಗೆ 6ನೇ ಸ್ಥಾನ ಪಡೆದು ನವೋದಯ ವಿದ್ಯಾಲಯಕ್ಕೆ ಆಯ್ಕೆಯಾಗಿರುತ್ತಾರೆ. ಇವರು ಬೆದ್ರಾಳ ನಿವಾಸಿ ನಿವೃತ ಸೇನಾನಿ, ವಿಟ್ಲ ಸಿಪಿಸಿಆರ್‌ಐ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಉಮೇಶ್ ಕೆ. ಮತ್ತು ಗೀತಾ ಡಿ. ದಂಪತಿ ಪುತ್ರ.

LEAVE A REPLY

Please enter your comment!
Please enter your name here