ಎಲೆಕ್ಟ್ರಿಕ್ ವೆಹಿಕಲ್ ಖರೀದಿಗೆ ಸಕಾಲ-‘ಪ್ಯೂರ್ ಇವಿ’ ಪುತ್ತೂರು, ಕಡಬ ಶಾಖೆಯಲ್ಲಿ ಆರಂಭಗೊಂಡಿದೆ ಮಾನ್ಸೂನ್ ಆಫರ್

0

ಪುತ್ತೂರು: ಪೆಟ್ರೋಲ್ ದುಬಾರಿ ಬೆಲೆಯಿಂದ ಕಂಗೆಟ್ಟಿರುವ ದ್ವಿಚಕ್ರ ವಾಹನ ಸವಾರರಿಗೆ ಎಲೆಕ್ಟ್ರಿಕ್ ವೆಹಿಕಲ್‌ಗೆ ಬದಲಾವಣೆ ಹೊಂದಲು ಇದು ಸಕಾಲವಾಗಿದ್ದು, ಎಲೆಕ್ಟ್ರಿಕ್ ಸ್ಕೂಟರ್‌ಗಳ ಮಾರಾಟ ಸಂಸ್ಥೆ ‘ಪ್ಯೂರ್ ಇವಿ’ ಪುತ್ತೂರು ಹಾಗೂ ಕಡಬ ಶಾಖೆಯಲ್ಲಿ ಮಾನ್ಸುನ್ ಆಫರ್ ಆರಂಭಗೊಂಡಿದೆ.

ಈಗ ಎಲೆಕ್ಟ್ರಿಕ್ ವೆಹಿಕಲ್‌ಗಳ ಮಾರಾಟ ವೇಗ ಪಡೆಯುತ್ತಿದ್ದು ಪೆಟ್ರೋಲ್ ಬೆಲೆಯಿಂದ ಕಂಗೆಟ್ಟಿರುವ ಗ್ರಾಹಕರು ಈ ಸ್ಕೂಟರ್‌ಗಳ ಬಗ್ಗೆ ಆಕರ್ಷಿತರಾಗುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಹೆಚ್ಚಿನ ಮೈಲೇಜ್ ಹಾಗೂ ಕಡಿಮೆ ನಿರ್ವಹಣೆ ವೆಚ್ಚ. ಎಲೆಕ್ಟ್ರಿಕಲ್ ವೆಹಿಕಲ್‌ಗಳ ನಿರ್ವಹಣೆ ಮತ್ತು ವೆಚ್ಚ ಪೆಟ್ರೋಲ್ ವೆಹಿಕಲ್‌ಗಳಿಗೆ ಹೋಲಿಸಿದರೆ ಅತೀ ಕಡಿಮೆ. ಅಲ್ಲದೇ ಇದರಲ್ಲಿ ಶಬ್ದವೇ ಇಲ್ದೆ ಅತ್ಯಂತ ಸುಖಕರವಾದ ಪ್ರಯಾಣವನ್ನು ಮಾಡಬಹುದಾಗಿದೆ. ಶಬ್ದ ಮಾಲಿನ್ಯದಿಂದ ನಲುಗುತ್ತಿರುವ ಪ್ರಪಂಚಕ್ಕೆ ಇದು ನಾವು ಮಾಡಬಹುದಾದ ಸಹಾಯವೂ ಆಗಿದೆ. ಆದ್ದರಿಂದ ಈಗ ಏರುತ್ತಿರುವ ಪೆಟ್ರೋಲ್‌ನಿಂದ ಕಂಗೆಟ್ಟಿರುವ ಜನರಿಗೆ ಎಲೆಕ್ಟ್ರಿಕ್ ವೆಹಿಕಲ್‌ಗಳಿಗೆ ಬದಲಾವಣೆ ಹೊಂದಲು ಇದು ಸಕಾಲವಾಗಿದೆ.

ಬೆಂಕಿ ಅವಘಡ ತೀರಾ ಕಡಿಮೆ:
ನಾವೀಗ ಟೆಕ್ನಾಲಜಿಯ ಯುಗದಲ್ಲಿ ಬದುಕುತ್ತಿದ್ದೇವೆ. ಎಲ್ಲಾ ಮಾಹಿತಿಗಳೂ ಬೆರಳ ತುದಿಯಲ್ಲಿ ಲಭ್ಯವಿದೆ. ಇಂತಹ ಸಂದರ್ಭದಲ್ಲಿ ಎಲೆಕ್ಟ್ರಿಕ್ ವೆಹಿಕಲ್‌ಗಳಲ್ಲಿ ಬೆಂಕಿ ಹೊತ್ತಿಕೊಳ್ಳುತ್ತದೆ ಎಂಬ ಸುಳ್ಳುಗಳು ಹಾಗೂ ತಪ್ಪು ಮಾಹಿತಿಗಳು ತುಂಬಾ ಪ್ರಚಾರ ಪಡೆದುಕೊಳ್ಳುತ್ತಿದೆ. ಹೊಸ ಅಧ್ಯಯನದ ಪ್ರಕಾರ ಪೆಟ್ರೋಲ್ ವೆಹಿಕಲ್‌ಗಳು ಬೆಂಕಿ ಅವಘಡಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ವೆಹಿಕಲ್‌ಗಳು ಬೆಂಕಿ ಅವಘಡಗಳಾಗುವುದು ತೀರಾ ಕಡಿಮೆ. ಇದಕ್ಕೆ ಪುರಾವೆಯೂ ಇದೆ. ನ್ಯಾಷನಲ್ ಟ್ರಾನ್ಸ್‌ಪೋರ್ಟ್ ಸೇಫ್ಟಿ ಬೋರ್ಡ್(ಎನ್‌ಟಿಎಸ್‌ಬಿ), ಬ್ಯೂರೋ ಆಫ್ ಟ್ರಾನ್ಸ್‌ಪೋರ್ಟೇಶನ್ ಸ್ವಾಟಿನ್ಟೆಕ್ಸ್(ಬಿಟಿಎಸ್) ಮತ್ತು ಗವರ್ನ್‌ಮೆಂಟ್ ರಿಕಾಲ್ ಡೇಟಾ ಫ್ರಂ ರಿಕಾಲ್ಸ್ ಅಧ್ಯಯನದ ಪ್ರಕಾರ ಪೆಟ್ರೋಲ್ ವೆಹಿಕಲ್‌ಗಳಿಗಿಂತ ಎಲೆಕ್ಟ್ರಿಕ್ ವೆಹಿಕಲ್‌ಗಳಲ್ಲಿ ಬೆಂಕಿ ಅವಘಡ ಆಗುತ್ತಿರುವುದು ತೀರಾ ಕಡಿಮೆ ಆಗಿದೆ. ಎಲೆಕ್ಟ್ರಿಕ್ ವೆಹಿಕಲ್‌ಗಳಲ್ಲಿ ಥರ್ಮಲ್ ರನ್‌ವೇಯಿಂದಾಗಿ ಹೆಚ್ಚು ಸಮಯದಲ್ಲಿ ಬೆಂಕಿ ಅವಘಡಗಳು ಆಗಿವೆ. ಅಂದರೆ ಬ್ಯಾಟರಿಗಳು ಅದರ ಸಾಮರ್ಥ್ಯದಿಂದ ಹೆಚ್ಚು ಬಿಸಿಯಾಗಿ ಆಗುತ್ತದೆ. ಇದು ಯಾಕಾಗುತ್ತದೆ ಅಂದರೆ ಹೆಚ್ಚಿನ ಸಂದರ್ಭದಲ್ಲಿ ಕೆಲ ಮೆಕ್ಯಾನಿಕ್‌ಗಳು ಹೆಚ್ಚಿನ ಮೈಲೇಜ್ ಸಿಗುತ್ತದೆ ಎಂದು ಒರಿಜನಲ್ ಬ್ಯಾಟರಿಯನ್ನು ಸೇಪ್ಟಿ ನಾರ್ಮ್ ಪರಿಗಣಿಸದೆ ಟ್ಯಾಂಪರ್ ಮಾಡಿರುತ್ತಾರೆ. ಈ ರೀತಿ ಮಾಡಿದ ಬ್ಯಾಟರಿಗಳು ಬೆಂಕಿ ಹಿಡಿಯುವ ಪ್ರಮೇಯ ಹೆಚ್ಚಿರುತ್ತದೆ. ಎಲೆಕ್ಟ್ರಿಕಲ್ ವೆಹಿಕಲ್‌ಗಳಿಗೆ ಬೆಂಕಿ ಹಿಡಿಯುವುದು ತೀರಾ ಕಡಿಮೆ ಆಗಿದೆ.

ಪುತ್ತೂರು,ಕಡಬದಲ್ಲಿ ಲಭ್ಯ;
ಪ್ಯೂರ್ ಇವಿ ಪುತ್ತೂರು ಹಾಗೂ ಪ್ಯೂರ್ ಇವಿ ಕಡಬದಲ್ಲಿ ಭರ್ಜರಿ ಮಾನ್ಸೂನ್ ಆಫರ್‌ಗಳು ಆರಂಭಗೊಂಡಿದೆ. ಇದರ ಸದುಪಯೋಗ ಪಡೆದುಕೊಳ್ಳಲು ಗ್ರಾಹಕರಿಗೆ ಇದು ಸಕಾಲವಾಗಿದೆ. ಗ್ರಾಹಕರು ಪ್ಯೂರ್ ಇವಿ ಪುತ್ತೂರು ಹಾಗೂ ಕಡಬ ಶೋ ರೂಂಗಳನ್ನು ಸಂಪರ್ಕಿಸಿ ಆಫರ್‌ಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಮಾಹಿತಿಗಾಗಿ7795469921(ಪುತ್ತೂರು), 9482674295(ಕಡಬ) ನಂಬರ್‌ಗೆ ಕರೆ ಮಾಡಬಹುದಾಗಿದೆ.

LEAVE A REPLY

Please enter your comment!
Please enter your name here