ಅಂಬಿಕಾ ಮಹಾವಿದ್ಯಾಲಯದಲ್ಲಿ2022-23ನೇ ಸಾಲಿನ ಸಿಎ ಕೋಚಿಂಗ್ ತರಗತಿಗಳಿಗೆ ಚಾಲನೆ

0

  • ಛಲದಿಂದ ಏನನ್ನು ಬೇಕಾದರೂ ಸಾಧಿಸುವುದಕ್ಕೆ ಸಾಧ್ಯ : ಸುಬ್ರಹ್ಮಣ್ಯ ನಟ್ಟೋಜ

ಪುತ್ತೂರು: ಛಲವೊಂದಿದ್ದರೆ ಎಲ್ಲವನ್ನೂ ಸಾಧಿಸಿಬಿಡಬಹುದು. ಅಸಾಧ್ಯವಾದುದು ಯಾವುದೂ ಇಲ್ಲ. ಗುರಿಯೆಡೆಗೆ ಗುರುತರವಾದ ಏಕಾಗ್ರತೆಯಿರಬೇಕು. ಸಿಕ್ಕ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ನಿರಂತರ ಓದುವಿಕೆ, ಮನನ ಮಾಡುವಿಕೆ ಮುಂತಾದ ತಂತ್ರಗಳಿಂದ ಯಶಸ್ಸನ್ನು ಪಡೆಯಬಹುದು ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ಶುಕ್ರವಾರದಂದು 2022-2023ರ ಸಿಎ ತರಬೇತಿ ತರಗತಿಗಳ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ಮಾತನಾಡಿದರು.

ಭ್ರ?ಚಾರ ಎಲ್ಲ ಕ್ಷೇತ್ರವನ್ನೂ ಆವರಿಸಿಬಿಟ್ಟಿದೆ. ಸಿಎ ಹುದ್ದೆಗೇರುವವರು ಭ್ರಷ್ಟ್ರಚಾರಕ್ಕೆ ಎಡೆಮಾಡಿಕೊಟ್ಟು, ಹಣವೊಂದನ್ನೇ ಸಂಪಾದಿಸುವ ಧ್ಯೇಯವನ್ನು ಹೊಂದಿರಬಾರದು. ದೇಶದ ಅಭಿವೃದ್ಧಿಗಾಗಿ, ಸಮಾಜವನ್ನು ಲೂಟಿಮಾಡದೆ ಮಾತೃಭೂಮಿಯನ್ನು ಔನ್ನತ್ಯಕ್ಕೇರಿಸಬೇಕು. ಪಾರದರ್ಶಕತೆಯಿಂದ ದೇಶದ ಆರ್ಥಿಕತೆಯನ್ನು ಕಾಯುವ ವ್ಯಕ್ತಿತ್ವಗಳು ನಿರ್ಮಾಣವಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪುತ್ತೂರಿನ ಸಿಎ ಅನೀಶ್ ಪಿ. ಎಸ್ ಮಾತನಾಡಿ, ಸಿಎ ಕೋರ್ಸ್ ವಿಭಿನ್ನ ರೀತಿಯ ಕಲಿಕಾ ಮಾಧ್ಯಮ. ಆಸಕ್ತಿಯನ್ನು ಹುಟ್ಟಿಸಿ, ಜವಾಬ್ದಾರಿಯಿಂದ ಓದಿದರೆ ಕಲಿಯುವಿಕೆ ಹೊರೆಯಾಗವುದಿಲ್ಲ. ಬದಲಾಗಿ ಖುಷಿಯ ಸಂಗತಿಯಾಗಿ ಬಿಡುತ್ತದೆ. ನಿರಂತರ ಶ್ರಮದಿಂದ ಅದೆಷ್ಟು  ಮಂದಿ ಇಂದು ಸಮಾಜದಲ್ಲಿ ಸಿಎ ಹುದ್ದೆಯಲ್ಲಿದ್ದಾರೆ. ಅವರನ್ನೆಲ್ಲ ಆದರ್ಶವಾಗಿರಿಸಿಕೊಂಡು, ಗುರಿಯನ್ನು ಸಾಧಿಸಬೇಕು ಎಂದುರು.

ಕಾರ್ಯಕ್ರಮದಲ್ಲಿ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ವಿದ್ಯಾರ್ಥಿನಿಯರಾದ ಅನನ್ಯಾ, ಶ್ರೀಲಕ್ಷ್ಮೀ ಪ್ರಾರ್ಥಿಸಿದರು. ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ ಸ್ವಾಗತಿಸಿ, ವಾಣಿಜ್ಯ ವಿಭಾಗ ಮುಖ್ಯಸ್ಥೆ ಅನನ್ಯಾ ಪ್ರಸ್ತಾವನೆಗೈದರು. ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಾಣಿಜ್ಯ ವಿಭಾಗ ಮುಖ್ಯಸ್ಥೆ ಅಕ್ಷತಾ ವಂದಿಸಿದರು. ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿನಿ ನಾಗರತ್ನ ಕಿಣಿ ನಿರೂಪಿಸಿದರು.

LEAVE A REPLY

Please enter your comment!
Please enter your name here