ಪುತ್ತೂರು-ಪಾಣಾಜೆ ಲಯನ್ಸ್ ಕ್ಲಬ್ ಪದಗ್ರಹಣ ಸಮಾರಂಭ

0

  • ಸಮಾಜ ಸುಧಾರಣೆಯಲ್ಲಿ ಲಯನ್ಸ್ ಕ್ಲಬ್‌ನ ಸೇವೆ ಮಹತ್ತರ-ಬಿ.ಎಂ ಭಾರತಿ

ಪುತ್ತೂರು: ಲಯನ್ಸ್ ಕ್ಲಬ್‌ನ ಸೇವಾ ಕಾರ್ಯಗಳು ಸಮಾಜ ಸುಧಾರಣೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿದ್ದು ಈ ಸಂಸ್ಥೆಯಲ್ಲಿ ಸೇರಿಕೊಂಡು ನಾವೆಲ್ಲಾ ಸಮಾಜ ಸೇವೆ ಮಾಡುತ್ತಿರುವುದು ನಮಗೆಲ್ಲಾ ಹೆಮ್ಮೆಯ ವಿಚಾರ ಎಂದು ಲಯನ್ಸ್ ಜಿಲ್ಲಾ ಉಪಗವರ್ನರ್ ಲ|ಬಿ.ಎಂ ಭಾರತಿ ಹೇಳಿದರು.


ಬೆಟ್ಟಂಪಾಡಿ ಪ್ರಾ.ಕೃ.ಪ.ಸ.ಸಂಘದ ಸಭಾಭವನದಲ್ಲಿ ಜು.೧೪ರಂದು ರಾತ್ರಿ ನಡೆದ ಲಯನ್ಸ್ ಕ್ಲಬ್ ಪುತ್ತೂರು ಪಾಣಾಜೆ ಇದರ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಅವರು ಮಾತನಾಡಿದರು. ನಾವೆಲ್ಲಾ ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಸಮಾಜದಲ್ಲಿರುವ ಬಡವರಿಗೂ ಸಹಾಯವಾಗುತ್ತದೆ, ಲಯನ್ಸ್ ಸದಸ್ಯರು ಉತ್ತಮ ಬಾಂಧವ್ಯವನ್ನು ಹೊಂದಿರಬೇಕು ಮತ್ತು ಸಂಸ್ಥೆಯ ನಿಯಮಾವಳಿಗಳನ್ನು ಸರಿಯಾಗಿ ಅನುಸರಿಸಬೇಕು ಎಂದು ಅವರು ಹೇಳಿದರು.


ಮಾಜಿ ಗವರ್ನರ್ ಗೀತ್ ಪ್ರಕಾಶ್ ಮಾತನಾಡಿ ಸಮಾಜ ಸೇವೆಗೆ ಲಯನ್ಸ್ ಉತ್ತಮ ವೇದಿಕೆಯಾಗಿದ್ದು ಎಲ್ಲರ ಸಹಕಾರ ಸಿಕ್ಕಿದಾಗ ಕ್ಲಬ್ ಬೆಳಗುತ್ತದೆ ಎಂದು ಹೇಳಿದರು. ಪುತ್ತೂರು-ಕಾವು ಲಯನ್ಸ್ ಕ್ಲಬ್‌ನ ಸ್ಥಾಪಕಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಲಯನ್ಸ್‌ನಲ್ಲಿ ಸೇವೆಗೆ ಮಾತ್ರ ಅವಕಾಶ, ಇಲ್ಲಿ ರಾಜಕೀಯಕ್ಕೆ ಅವಕಾಶವಿಲ್ಲ, ನೂತನ ಅಧ್ಯಕ್ಷರಾದ ಮಹಮ್ಮದ್ ಕುಕ್ಕುವಳ್ಳಿ ಅವರು ಬಡವರ ಪರವಾಗಿ ಕೆಲಸಗಳನ್ನು ಮಾಡುತ್ತಾ ಬಂದಿರುವ ವ್ಯಕ್ತಿಯಾಗಿದ್ದು ಇವರ ಅವಧಿಯಲ್ಲಿ ಈ ಕ್ಲಬ್ ಟಾಪ್-೧ಗೆ ಬರುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದರು.

ಪ್ರಾಂತೀಯ ಕಾರ್ಯದರ್ಶಿ ಸುದರ್ಶನ್ ಪಡಿಯಾಲ್ ಮಾತನಾಡಿ ಪುತ್ತೂರು-ಪಾಣಾಜೆ ಲಯನ್ಸ್ ಕ್ಲಬ್ ಎಲ್ಲರ ಸಹಕಾರದೊಂದಿಗೆ ಮಾದರಿ ಕ್ಲಬ್ ಆಗಿ ಮೂಡಿ ಬರಲಿ ಎಂದರು. ಪುತ್ತೂರು-ಕಾವು ಲಯನ್ಸ್ ಕ್ಲಬ್‌ನ ಸ್ಥಾಪಕಾಧ್ಯಕ್ಷ ರಮೇಶ್ ರೈ ಸಾಂತ್ಯ ಮಾತನಾಡಿ ಪುತ್ತೂರು-ಪಾಣಾಜೆ ಲಯನ್ಸ್ ಕ್ಲಬ್ ಉತ್ತಮ ಕಾರ್ಯಚಟುವಟಿಕೆಗಳ ಮೂಲಕ ಗುರುತಿಸಿಕೊಳ್ಳಲಿ ಎಂದು ಹಾರೈಸಿದರು.ನಿರ್ಗಮನ ಅಧ್ಯಕ್ಷ ನವೀನ್ ರೈ ಚೆಲ್ಯಡ್ಕ ಮಾತನಾಡಿ ನಾವೆಲ್ಲರೂ ಜೊತೆಯಾಗಿ ನಿಂತು ಮುಂದಕ್ಕೂ ಈ ಕ್ಲಬ್‌ನಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.

ವ್ಹೀಲ್ ಚೆಯರ್ ಹಸ್ತಾಂತರ:
ಕಾರ್ಯಕ್ರಮದಲ್ಲಿ ಚನಿಯ ನಿಡ್ಪಳ್ಳಿ ಎಂಬವರಿಗೆ ವ್ಹೀಲ್ ಚೆಯರ್ ನೀಡಲಾಯಿತು. ಚನಿಯ ಅವರ ಪರವಾಗಿ ಅವರ ಸಹೋದರ ವ್ಹೀಲ್ ಚೆಯರ್ ಸ್ವೀಕರಿಸಿದರು.

ಸನ್ಮಾನ-ಗೌರವರ್ಪಾಣೆ:
ಜಿಲ್ಲಾ ಉಪಗವರ್ನರ್ ಬಿ.ಎಂ ಭಾರತಿ, ಮಾಜಿ ಗವರ್ನರ್ ಗೀತ್ ಪ್ರಕಾಶ್, ಸುದರ್ಶನ್ ಪಡಿಯಾಲ್, ರಮೇಶ್ ರೈ ಸಾಂತ್ಯ, ನಿರ್ಗಮನ ಅಧ್ಯಕ್ಷ ನವೀನ್ ರೈ ಚೆಲ್ಯಡ್ಕ, ಕೋಶಾಧಿಕಾರಿ ಶಾಹುಲ್ ಹಮೀದ್ ಜಾಲಗದ್ದೆ ಮೊದಲಾದವರನ್ನು ಸನ್ಮಾನಿಸಿ ಗೌರವಿಸಲಾಯಿತು. ಲಯನ್ಸ್ ಪ್ರಮುಖರಾದ ಕಾವು ಹೇಮನಾಥ ಶೆಟ್ಟಿ, ಶಿವಪ್ರಸಾದ್, ರವಿಪ್ರಸಾದ್ ಶೆಟ್ಟಿ, ಗಣೇಶ್ ಶೆಟ್ಟಿ ಹಾಗೂ ಲ್ಯಾನ್ಸಿ ಮಸ್ಕರೇನ್ಹಸ್ ಅವರನ್ನು ಗೌರವಿಸಲಾಯಿತು. ನಿವೃತ್ತ ದೈ.ಶಿ.ಶಿಕ್ಷಕ ದಯಾನಂದ ರೈ ಕೋರ್ಮಂಡ-ಚಿತ್ರಾವತಿ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಪರಿಚಯ ವಾಚನ:
ಬಿ.ಎಂ ಭಾರತಿಯವರ ವ್ಯಕ್ತಿ ಪರಿಚಯ ಪತ್ರವನ್ನು ದಯಾನಂದ ರೈ ಕೋರ್ಮಂಡ ವಾಚಿಸಿದರು. ಮಹಮ್ಮದ್ ಕುಕ್ಕುವಳ್ಳಿಯವರ ಪರಿಚಯವನ್ನು ಶಿಕ್ಷಕ ಸುಧೀರ್ ರೈ, ಶ್ರೀಪ್ರಸಾದ್ ಪಾಣಾಜೆಯವರ ಪರಿಚಯವನ್ನು ಶಿಕ್ಷಕ ಸತ್ಯನಾರಾಯಣ ರೈ ಹಾಗೂ ಪ್ರಕಾಶ್ ರೈ ಬೈಲಾಡಿಯವರ ಪರಿಚಯವನ್ನು ಶಿಕ್ಷಕ ಸುಧಾಕರ ರೈ ವಾಚಿಸಿದರು.

ಶಿಕ್ಷಕ ಸೀತಾರಾಮ ಗೌಡ ಮಿತ್ತಡ್ಕ ಪ್ರಾರ್ಥಿಸಿದರು. ನವೀನ್ ರೈ ಚೆಲ್ಯಡ್ಕ ಸ್ವಾಗತಿಸಿದರು. ಲಯನ್ಸ್ ಪ್ರತಿಜ್ಞೆಯನ್ನು ಶಿಕ್ಷಕ ಸುಧಾಕರ ರೈ ಬೋಧಿಸಿದರು. ಲಯನ್ಸ್ ಧ್ವಜ ಸಂಹಿತೆಯನ್ನು ಶಿಕ್ಷಕ ಸೀತರಾಮ ಗೌಡ ಮಿತ್ತಡ್ಕ ನಿರ್ವಹಿಸಿದರು. ವಿಶ್ವ ಶಾಂತಿಗೆ ಒಂದು ನಿಮಿಷ ಮೌನ ಪ್ರಾರ್ಥನೆ ಮಾಡಲಾಯಿತು. ಶ್ರೀಪ್ರಸಾದ್ ಪಾಣಾಜೆ ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಲಯನ್ಸ್ ಪ್ರಮುಖರು, ಊರವರು ಉಪಸ್ಥಿತರಿದ್ದರು.

 

ರಾಜ್ಯದಲ್ಲಿ ನಂ.1 ಮಾಡುವ ಗುರಿ-ಕುಕ್ಕುವಳ್ಳಿ


ಲಯನ್ಸ್ ಕ್ಲಬ್ ಪುತ್ತೂರು ಪಾಣಾಜೆ ಇದರ ನೂತನ ಅಧ್ಯಕ್ಷ ಮಹಮ್ಮದ್ ಕುಕ್ಕುವಳ್ಳಿ ಮಾತನಾಡಿ ೧೦ ವರ್ಷಗಳ ಹಿಂದೆ ವಿದೇಶದಲ್ಲಿದ್ದ ಸಂದರ್ಭ ನಾನು ಲಯನ್ಸ್‌ನ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದ್ದೆ, ಆ ಸಂದರ್ಭದಲ್ಲಿ ನಾನೂ ಲಯನ್ಸ್‌ನಲ್ಲಿ ಸದಸ್ಯನಾಗಬೇಕೆಂಬ ಕನಸು ಕಂಡಿದ್ದೆ. ಲಯನ್ಸ್ ಕ್ಲಬ್‌ನ ಶಿಸ್ತು, ಸೇವಾ ಬದ್ಧತೆ ನನಗೆ ಅತಿಯಾಗಿ ಇಷ್ಟವಾಗಿತ್ತು ಎಂದು ಅವರು ಹೇಳಿದರು. ಇದೀಗ ನಾನು ಈ ಕ್ಲಬ್‌ನ ಅಧ್ಯಕ್ಷನಾಗಲು ಅವಕಾಶ ಒದಗಿ ಬಂದಿರುವುದು ನನಗೆ ಅತೀವ ಸಂತಸವಾಗಿದ್ದು ಮುಂದಕ್ಕೆ ರಾಜ್ಯದಲ್ಲಿಯೇ ನಂಬರ್-೧ ಕ್ಲಬ್ ಆಗಿ ನಮ್ಮ ಕ್ಲಬ್‌ನ್ನು ಮಾಡುವ ಗುರಿ ನನಗಿದೆ. ಪದಾಧಿಕಾರಿಗಳ, ಸದಸ್ಯರ ಸಹಕಾರ ಪಡೆದುಕೊಂಡು ಮುಂದಿನ ೧ ವರ್ಷದದಲ್ಲಿ ೧೨ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಗುವುದು. ಈಗಾಗಲೇ ನಾನು ಇತರರ ಸಹಕಾರದೊಂದಿಗೆ ಬಡವರ ಪರವಾದ ಕಾರ್ಯಕ್ರಮಗಳನ್ನು ಸಮಾಜಕ್ಕೆ ನೀಡುತ್ತಾ ಬಂದಿದ್ದು ಮುಂದಕ್ಕೆ ಲಯನ್ಸ್ ಕ್ಲಬ್ ಮೂಲಕವೂ ಬಡವರ ಪರವಾಗಿರುವ ಕಾರ್ಯಚಟುವಟಿಕೆಗಳನ್ನು ಮುಂದುವರಿಸಲಾಗುವುದು ಎಂದು ಮಹಮ್ಮದ್ ಕುಕ್ಕುವಳ್ಳಿ ಹೇಳಿದರು.

ನೂತನ ಸಾರಥಿಗಳು:
ಅಧ್ಯಕ್ಷರಾಗಿ ಮಹಮ್ಮದ್ ಕುಕ್ಕುವಳ್ಳಿ, ಕಾರ್ಯದರ್ಶಿಯಾಗಿ ಶ್ರೀಪ್ರಸಾದ್ ಪಾಣಾಜೆ, ಕೋಶಾಧಿಕಾರಿಯಾಗಿ ಪ್ರಕಾಶ್ ರೈ ಬೈಲಾಡಿ, ಸದಸ್ಯರಾಗಿ ಬಾಲಕೃಷ್ಣ ಪೊರ್ದಾಲ್ ಜಲೀಲ್ ಬೈತಡ್ಕ, ನವೀನ್ ಮಣಿಯಾನಿ. ಅಲಿಕುಂಞಿ ಹಾಜಿ ಕೊರಿಂಗಿಲ, ಯೂಸುಫ್ ಗೌಸಿಯಾ ಸಾಜ, ಹಾರಿಸ್ ಮಾಡಾವು, ಸುಧೀರ್ ರೈ, ಆಸೀಫ್ ಹಾಜಿ ತಂಬುತಡ್ಕ, ಶ್ಯಾಮ್‌ಜೀತ್ ಪಾಪನಡ್ಕ.

 

LEAVE A REPLY

Please enter your comment!
Please enter your name here