ಚಿಕ್ಕಮುಡ್ನೂರು ಕಲಿಯುಗ ಸೇವಾ ಸಮಿತಿಯಿಂದ ನೆರಳು ಪ್ರಯಾಣ ಯೋಜನೆ

0

 

 

ಪುತ್ತೂರು: ಚಿಕ್ಕಮುಡ್ನೂರು ಕಲಿಯುಗ ಸೇವಾ ಸಮಿತಿ ವತಿಯಿಂದ ನೆರಳು ಪ್ರಯಾಣ ಯೋಜನೆಯಲ್ಲಿ ಪ್ರತಿವರ್ಷ ಸಾರ್ವಜನಿಕ ರಸ್ತೆ ಬದಿಗಳಲ್ಲಿ ಗಿಡಗಳನ್ನು ನೆಡುತ್ತಿದ್ದು ಈ ಬಾರಿ ರಾಗಿದಕುಮೇರು, ಜಿಡೆಕಲ್ಲು, ಬೆದ್ರಾಳದಲ್ಲಿ ಸಮಿತಿ ಅಧ್ಯಕ್ಷ ಲಿಗೋರಿ ಸೆರಾವೋರವರ ನೇತೃತ್ವದಲ್ಲಿ ಗಿಡ ನೆಡಲಾಯಿತು. ಬಳಿಕ ಮಾತನಾಡಿದ ಲಿಗೋರಿ ಸೆರಾವೋರವರು ಮರಗಿಡಗಳು ಪರಿಸರ ಮಾಲಿನ್ಯವನ್ನು ನಿಯಂತ್ರಿಸುತ್ತದೆ. ಹಸಿರು ಪ್ರದೇಶ ಮನುಷ್ಯನಿಗೆ ಉಪಯುಕ್ತವಾಗಿದೆ. ಆದ್ದರಿಂದ ಗಿಡಗಳನ್ನು ನೆಟ್ಟು ಸಂರಕ್ಷಿಸುವ ಅಗತ್ಯವಿದೆ ಎಂದರು. ಸಮಿತಿಯ ಪದ್ಮನಾಭ ಪ್ರಭು, ಸಂಜೀವ ರೈ, ಪ್ರಕಾಶ, ಗೋಪಾಲ, ದೇವದಾಸ್, , ಸಂಪತ್ ಕುಮಾರ್ ಜೈನ್ ಹಾಗೂ ಸತೀಶ್ ರೈ ಸೇರಿದಂತೆ ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here