ಲಯನ್ಸ್ ಕ್ಲಬ್ ಪುತ್ತೂರ್‍ದ ಮುತ್ತು ನೂತನ ಪದಾಧಿಕಾರಿಗಳ ಆಯ್ಕೆ

0

  • ಅಧ್ಯಕ್ಷ:ಕೇಶವ ಪೂಜಾರಿ,ಕಾರ್ಯದರ್ಶಿ:ಮೋಹನ್ ನಾಯಕ್,ಕೋಶಾಧಿಕಾರಿ:ರವಿಚಂದ್ರ ಆಚಾರ್ಯ

ಪುತ್ತೂರು:ಲಯನ್ಸ್ ಕ್ಲಬ್ ಪುತ್ತೂರು ಕಾವು ಪ್ರವರ್ತಿಸಿದ ಎರಡನೇ ಕ್ಲಬ್ ಲಯನ್ಸ್ ಕ್ಲಬ್ ಪುತ್ತೂರ್‍ದ ಮುತ್ತು ಇದರ 2022-23ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಜರಗಿದ್ದು ನೂತನ ಅಧ್ಯಕ್ಷರಾಗಿ ದರ್ಬೆ ನಂದಿಕೇಶ್ವರ ಎಲೆಕ್ಟ್ರಿಕಲ್ಸ್ ಮಾಲಕ ಕೇಶವ ಪೂಜಾರಿ ಬೆದ್ರಾಳ, ಪ್ರಧಾನ ಕಾರ್ಯದರ್ಶಿಯಾಗಿ ನಿವೃತ್ತ ಸಬ್ ರಿಜಿಸ್ಟ್ರಾರ್ ಎಸ್.ಮೋಹನ್ ನಾಯಕ್ ಬೆದ್ರಾಳ, ಕೋಶಾಧಿಕಾರಿಯಾಗಿ ರವಿಚಂದ್ರ ಆಚಾರ್ಯರವರು ಆಯ್ಕೆಯಾಗಿದ್ದಾರೆ.

ಉಳಿದಂತೆ ನಿಕಟಪೂರ್ವ ಅಧ್ಯಕ್ಷರಾಗಿ ಲ್ಯಾನ್ಸಿ ಮಸ್ಕರೇನ್ಹಸ್, ಪ್ರಥಮ ಉಪಾಧ್ಯಕ್ಷರಾಗಿ ವಿಕ್ರಂ ರೈ ಸಾಂತ್ಯ, ದ್ವಿತೀಯ ಉಪಾಧ್ಯಕ್ಷರಾಗಿ ಮಂಜುನಾಥ್ ಎಂ, ಕ್ಲಬ್ ಟೇಮರ್ ಆಗಿ ನಾಗೇಶ್ ಆಚಾರ್ಯ, ಕ್ಲಬ್ ಟಾಲ್ ಟಿಸ್ಟರ್ ಆಗಿ ಅಬೂಬಕ್ಕರ್ ಮುಲಾರ್, ಎಲ್‌ಸಿಐಎಫ್ ಚೇರ್‌ಮ್ಯಾನ್ ಆಗಿ ಬಿ.ರವಿಪ್ರಸಾದ್ ಶೆಟ್ಟಿ, ಮೆಂಬರ್‌ಶಿಪ್ ಚೇರ್‌ಮ್ಯಾನ್ ಆಗಿ ಅನ್ವರ್ ಖಾಸಿಂ, ಸರ್ವಿಸ್ ಚೇರ್‌ಮ್ಯಾನ್ ಆಗಿ ರವೀಂದ್ರ ಪೈ, ನಿರ್ದೇಶಕರುಗಳಾಗಿ ಜಗದೀಶ್ ಕಜೆ, ನೇಮಾಕ್ಷ ಸುವರ್ಣ, ಚಂದ್ರಶೇಖರ್ ಪಿ, ಸಿಲ್ವೆಸ್ತರ್ ಡಿ’ಸೋಜ, ಬಿ.ಎಚ್ ಅಹಮದ್ ಬಶೀರ್, ಕೆ.ದಾಮೋದರ್ ಭಂಡಾರ್‍ಕರ್, ಬಿ.ನರೇಂದ್ರ ಬಾಳಿಗ, ಅಬ್ದುಲ್ ನಿಶಾದ್‌ರವರು ಆಯ್ಕೆಯಾಗಿದ್ದಾರೆ.

ನೂತನ ಅಧ್ಯಕ್ಷರ ಪರಿಚಯ:
ಬೆದ್ರಾಳ ರಾಮಣ್ಣ ಪೂಜಾರಿ ಹಾಗೂ ಲೀಲಾ ದಂಪತಿಗಳ ಎರಡನೇ ಪುತ್ರನಾಗಿ ಜನಿಸಿದ ಕೇಶವ ಪೂಜಾರಿರವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಲಿಟ್ಲ್ ಫ್ಲವರ್ ಶಾಲೆ ಹಾಗೂ ಫಿಲೋಮಿನಾ ಪ್ರೌಢಶಾಲೆಯಲ್ಲಿ ಪೂರೈಸಿರುತ್ತಾರೆ. ಇಲೆಕ್ಟ್ರಿಶಿಯನ್ ವೃತ್ತಿಯನ್ನು ಆರಂಭಿಸಿದ ಇವರು ಸರೆಕಾರದ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರಾದರು. ೨೦೦೧ರಲ್ಲಿ ನಂದೀಕೇಶ್ವರ ಇಲೆಕ್ಟ್ರಿಕಲ್ಸ್ ಸಂಸ್ಥೆಯನ್ನು ಸ್ಥಾಪಿಸಿದರು. ಇವರು ಬೆದ್ರಾಳ ನಂದಿಕೇಶ್ವರ ಭಜನಾ ಮಂದಿರದಲ್ಲಿ ಹಲವು ಹುದ್ದೆಗಳನ್ನು ಅಲಂಕರಿಸಿದ್ದು, ಪುತ್ತೂರು ಬಿಲ್ಲವ ಸಂಘದ ಚಿಕ್ಕಮುಡ್ನೂರು ಗ್ರಾಮ ಸಮಿತಿಯ ಅಧ್ಯಕ್ಷರಾಗಿ ೧೦ ವರ್ಷ, ನಗರ ಸಮಿತಿ ಅಧ್ಯಕ್ಷರಾಗಿ ೪ ವರ್ಷ, ತಾಲೂಕು ಬಿಲ್ಲವ ಸಂಘದ ಜೊತೆ ಕಾರ್ಯದರ್ಶಿಯಾಗಿ ಹಾಗೂ ಕಾರ್ಯದರ್ಶಿಯಾಗಿ, ಯುವವಾಹಿನಿ ಪುತ್ತೂರು ಘಟಕದ ಅಧ್ಯಕ್ಷರಾಗಿ, ಯುವವಾಹಿನಿ ಕೇಂದ್ರ ಸಮಿತಿಯ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ನಗರಸಭೆಯ ನಾಮ ನಿರ್ದೇಶಿತ ಸದಸ್ಯರಾಗಿ, ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ, ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಮೂರು ವರ್ಷ, ಲಯನ್ಸ್ ಕ್ಲಬ್ ಪುತ್ತೂರ್‍ದ ಮುತ್ತು ಇದರ ಸ್ಥಾಪಕ ಸದಸ್ಯರಾಗಿ, ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಪತ್ನಿ ಸವಿತಾ, ಪುತ್ರರಾದ ಪ್ರಣ್ವಿತ್, ರಿಷ್ವಿತ್‌ರವರೊಂದಿಗೆ ಬೆದ್ರಾಳದಲ್ಲಿ ವಾಸ್ತವ್ಯ ಹೊಂದಿರುತ್ತಾರೆ.

ನೂತನ ಕಾರ್ಯದರ್ಶಿ ಪರಿಚಯ:
ದಿ.ಎಸ್ ಕೇಶವ ನಾಯಕ್ ಹಾಗೂ ದಿ.ಲಲಿತಾ ನಾಯಕ್‌ರವರ ಎರಡನೇ ಪುತ್ರನಾಗಿ ಜನಿಸಿದ ಮೋಹನ್ ನಾಯಕ್‌ರವರು ತಮ್ಮ ಪ್ರಾಥಮಿಕ ಶಿಕ್ಷಣವು ಮಂಡ್ಯ ಜಿಲ್ಲೆಯಲ್ಲಿ, ನಂತರದ ಬಿ.ಎವರೆಗಿನ ಶಿಕ್ಷಣವು ಪುತ್ತೂರು ತಾಲೂಕಿನಲ್ಲಿ ಪೂರೈಸಿದ್ದರು. ಬಳಿಕ ಕೆಪಿಎಸ್‌ಸಿ ಪರೀಕ್ಷೆ ಮೂಲಕ ಆಯ್ಕೆಯಾಗಿ ನೋಂದಣಿ ಹಾಗೂ ಮುದ್ರಾಂಕ ಇಲಾಖೆಗೆ ಸೇರಿಕೊಂಡು ಸುಮಾರು ೩೪ ವರ್ಷಗಳ ಸೇವೆಯಲ್ಲಿ ೧೦ ವರ್ಷ ಎಫ್‌ಡಿಐ ಆಗಿ, ೨೪ ವರ್ಷ ಉಪ ನೋಂದಣಾಧಿಕಾರಿ ಹಾಗೂ ಹಿರಿಯ ಉಪ ನೋಂದಣಾಧಿಕಾರಿಯಾಗಿ ಮೂಲ್ಕಿಯಲ್ಲಿ ಸೇವೆ ಸಲ್ಲಿಸಿ ೨೦೨೧ರಲ್ಲಿ ಸೇವಾ ನಿವೃತ್ತಿ ಹೊಂದಿರುತ್ತಾರೆ. ಪ್ರಸ್ತುತ ಮೋಹನ್ ನಾಯಕ್‌ರವರು ಪತ್ನಿ ಇಂದಿರಾ, ಪುತ್ರ ಎಚ್‌ಡಿಎಫ್‌ಸಿ ಮಂಗಳೂರು ಶಾಖೆಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿರುವ ರಾಹುಲ್, ಪುತ್ರಿ ಐಎಎಸ್ ಹುದ್ದೆಗಾಗಿ ಬೆಂಗಳೂರಿನ ಶಂಕರ್ ಐಎಎಸ್‌ನಲ್ಲಿ ಪರೀಕ್ಷಾ ತರಬೇತಿ ಪಡೆಯುತ್ತಿರುವ ಅನುಷಾರವರನ್ನು ಹೊಂದಿರುತ್ತಾರೆ.

ನೂತನ ಕೋಶಾಧಿಕಾರಿ ಪರಿಚಯ:
ಆರ್ಯಾಪು ಗ್ರಾಮದ ಕಂಬಳತ್ತಡ್ಡ ಸುಬ್ರಾಯ ಆಚಾರ್ಯ ಹಾಗೂ ಲೀಲಾವತಿ ದಂಪತಿಗಳ ಮೂರನೇ ಪುತ್ರನಾಗಿ ಜನಿಸಿದ ರವಿಚಂದ್ರ ಆಚಾರ್ಯರವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸಂಪ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಪ್ರೌಢಶಿಕ್ಷಣವನ್ನು ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ ಪೂರೈಸಿರುತ್ತಾರೆ. ಚಿನ್ನದ ಆಭರಣ ತಯಾರಿಕೆಯ ವೃತ್ತಿಯನ್ನು ನಿರ್ವಹಿಸುತ್ತಿರುವ ಇವರು ಸಂಪ್ಯದಲ್ಲಿ ಅಕ್ಷಯ ಜ್ಯುವೆಲ್ಲರಿ ಎಂಬ ಸ್ವಂತ ಸಂಸ್ಥೆಯನ್ನು ಹೊಂದಿ ೪ ಜನ ಕೆಲಸಗಾರರಿಗೆ ಉದ್ಯೋಗವನ್ನೂ ನೀಡಿರುತ್ತಾರೆ. ತನ್ನ ೧೩ನೇ ವಯಸ್ಸಿನಲ್ಲಿಯೇ ಗೆಳೆಯರ ಬಳಗ ಎಂಬ ತಂಡದೊಂದಿಗೆ ಕಂಬಳತ್ತಡ್ಡ ಎಂಬಲ್ಲಿ ಶ್ರೀ ಕೃಷ್ಣ ಯುವಕ ಮಂಡಲ ಎಂಬ ಯುವಕ ಮಂಡಲವನ್ನು ಸ್ಥಾಪಿಸಿ ಸ್ಥಾಪಕಾಧ್ಯಕ್ಷರಾಗಿದ್ದರು. ಸಂಪ್ಯ ನವಚೇತನಾ ಯುವಕ ಮಂಡಲದ ಸಕ್ರಿಯ ಸದಸ್ಯರಾಗಿರುವ ಇವರು ಯುವ ಕಾಂಗ್ರೆಸ್ ಸಮಿತಿಯ ಮಾಜಿ ಉಪಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಇವರು ಪತ್ನಿ ಆಶಾ, ಈರ್ವರು ಮಕ್ಕಳಾದ ಅಕ್ಷಯ ಹಾಗೂ ಆಶ್ರಯರವರೊಂದಿಗೆ ಸಂಪ್ಯದಲ್ಲಿ ನೂತನವಾಗಿ ನಿರ್ಮಿಸಿದ `ಆಶ್ರಯ ನಿಲಯ’ದಲ್ಲಿ ವಾಸವಾಗಿದ್ದಾರೆ.

LEAVE A REPLY

Please enter your comment!
Please enter your name here