ಕಾಲೇಜು ಬಳಿಯ ಬಸ್ ಪ್ರಯಾಣಿಕರ ತಂಗುದಾಣದಲ್ಲಿ ಅಕ್ರಮ ಗಾಂಜಾ ಮಾರಾಟ ಯತ್ನ – ಆರೋಪಿ ಪೊಲೀಸ್ ವಶಕ್ಕೆ

0

ಪುತ್ತೂರು: ದರ್ಬೆ ಕಾಲೇಜೊಂದರ ಹೊರವಲಯದಲ್ಲಿರುವ ಬಸ್ ಪ್ರಯಾಣಿಕರ ತಂಗುದಾಣದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬರನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ ೫೫೦ ಗ್ರಾಮ್ ತೂಕದ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ.

ಕೇರಳ ರಾಜ್ಯದ ತಿರುವನಂತಪುರಂ ಜಿಲ್ಲೆಯ ವೆಲ್ಲನಾಡ್ ತಾಲೂಕಿನ ಕಾಟಕ್ಕಾಡು ನಿವಾಸಿ ಮೋಬಿನ್ ಜೋರ್ಜ್ (೨೦ವ) ರವರು ಬಂಧಿತ ಆರೋಪಿ. ಆತ ಕಾಲೇಜು ಸಮೀಪದ ಬಸ್ ಪ್ರಯಾಣಿಕರ ತಂಗುದಾಣದಲ್ಲಿ ಗಾಂಜಾವನ್ನು ಮಾರಾಟಕ್ಕೆಂದು ನಿಂತಿದ್ದ ವೇಳೆ ಪುತ್ತೂರು ನಗರ ಪೊಲೀಸ್ ಠಾಣೆ ಎಸ್ ಐ ರಾಜೇಶ್ ಕೆ.ವಿ ಅವರು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ ೫೫೦ ಗ್ರಾಂ ತೂಕದ ಗಾಂಜಾ , ಒಂದು ಮೊಬೈಲ್ ಮತ್ತು ರೂ.೫೦೦ ನಗದನ್ನು ವಶಕ್ಕೆ ಪಡೆಯಲಾಗಿದೆ

LEAVE A REPLY

Please enter your comment!
Please enter your name here