ವಿಟ್ಲ: ಬೆಳ್ಳಂಬೆಳಿಗ್ಗೆ ಹೆದ್ದಾರಿಗೆ ಮರ ಬಿದ್ದು ರಸ್ತೆ ಬ್ಲಾಕ್

0


ವಿಟ್ಲ: ಬೆಳ್ಳಂಬೆಳಿಗ್ಗೆ ಕಲ್ಲಡ್ಕ-ಕಾಂಞಂಗಾಡ್ ಅಂತಾರಾಜ್ಯ ಹೆದ್ದಾರಿಯ ವಿಟ್ಲದ ಕಾಶಿಮಠ ಎಂಬಲ್ಲಿ ಮರ ಬಿದ್ದು ಕೆಲಹೊತ್ತು ಸಂಚಾರದಲ್ಲಿ ಅಸ್ತವ್ಯಸ್ತಗೊಂಡಿದೆ.

ಬೆಳಿಗ್ಗೆ 5.30ರ ವೇಳೆಗೆ ಈ ಘಟನೆ ಬೆಳಕಿಗೆ ಬಂದಿದೆ. ಇದರಿಂದ ವಿಟ್ಲ-ಕಾಸರಗೋಡು, ಕನ್ಯಾನ, ಉಪ್ಪಳ ಕಡೆಗಳಿಗೆ ತೆರಳುವ ವಾಹನ ಸಾಲುಗಟ್ಟಿ ನಿಂತಿತ್ತು. ಈ ಬಗ್ಗೆ ಮಾಹಿತಿ ಪಡೆದ ಯೋಗೀಶ ಕಾಶಿಮಠ ಅವರ ನೇತೃತ್ವದ ತಂಡ ಮರವನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದರು. ಬಳಿಕ ಸುಗಮ ಸಂಚಾರಕ್ಕೆ ಅನುಮಾಡಿಕೊಟ್ಟರು.

LEAVE A REPLY

Please enter your comment!
Please enter your name here