ಕತ್ತಿಯಿಂದ ಕಡಿದು ವ್ಯಕ್ತಿ ಗಂಭೀರ

0

ಪುತ್ತೂರು; ತಡ‌ರಾತ್ರಿ ಮನೆಗೆ ಅಕ್ರಮ ಪ್ರವೇಶ ಮಾಡಿ ವ್ಯಕ್ತಿಯೋರ್ವರಿಗೆ ಕತ್ತಿಯಿಂದ ಕಡಿದು ಗಂಭೀರ ಹಲ್ಲೆ ನಡೆಸಿದ ಘಟನೆ ಈಶ್ವರಮಂಗಲದ‌ಮೇನಾಲದಲ್ಲಿ ನಡೆದಿದೆ.ಕೃಷ್ಣಪ್ಪ (52) ಹಲ್ಲೆಗೊಳಗಾದವರು. ಗಾಯಾಳು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ‌ ದಾಖಲಾಗಿದ್ದಾರೆ. ಹಲ್ಲೆ ನಡೆಸಿದ ಆರೋಪಿ ಬಾಲಕೃಷ್ಣ ಎಂಬಾತನ ವಿರುದ್ಧ ಸಂಪ್ಯ ಪೊಲೀಸರಿಗೆ ದೂರು ನೀಡಲಾಗಿದೆ. ಆರೋಪಿ ಬಾಲಕೃಷ್ಣ ಎಂಬಾತ ಕೃಷ್ಣಪ್ಪ ಎಂಬವರ ಮನೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಇದ್ದು ಇವರ‌ ಮನೆಯಿಂದಲೇ ಕೆಲಸಕ್ಕೆ ತೆರಳುತ್ತಿದ್ದ. ಕಳೆದ ಕೆಲವು ದಿನಗಳಿಂದ ಮದ್ಯ ಸೇವಿಸಿ ಮನೆಗೆ ಬರುತ್ತಿದ್ದು ಇದನ್ನು ಕೃಷ್ಣಪ್ಪರು ಆಕ್ಷೇಪಿಸಿದ್ದರು. ಕುಡಿದು ಮನೆಗೆ ಬಾರದಂತೆ ತಿಳಿಸಿದ್ದರು. ಇದೇ ಕೋಪದಲ್ಲಿ ನನ್ನ‌ ಮೇಲೆ ಕತ್ತಿಯಿಂದ ಕಡಿದು ಹಲ್ಲೆ ನಡೆಸಿದ್ದಾಗಿ ಕೃಷ್ಣಪ್ಪ ಆರೋಪಿಸಿದ್ದಾರೆ.‌ ಕೃಷ್ಣಪ್ಪರ ಕುತ್ತಿಗೆ, ಕೈ,ಕಾಲುಗಳಿಗೆ ಗಾಯಗಳಾಗಿದೆ.

LEAVE A REPLY

Please enter your comment!
Please enter your name here