ಶರವೂರು ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಅಷ್ಟಮಂಗಲ ಪ್ರಶ್ನೆಯ ಬಗ್ಗೆ ಭಕ್ತಾಧಿಗಳ ಪೂರ್ವಭಾವಿ ಸಭೆ

0

ಆಲಂಕಾರು: ಸೀಮಾ ದೇವಸ್ಥಾನ ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ಬರಿ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಹಾಗು ಬ್ರಹ್ಮಕಲಶ ಮಾಡುವ ಉದ್ದೇಶ ದಿಂದ ಅ.15 ರಿಂದ ಅ.26 ರ ತನಕ ದೈವಜ್ಞರಾದ ವಳಕುಂಜ ಶ್ರೀ ವೆಂಕಟ್ರಮಣ ಭಟ್ ರವರ ನೇತೃತ್ವದಲ್ಲಿ ಅಷ್ಟಮಂಗಲ ಪ್ರಶ್ನೆ ನಡೆಯಲಿದ್ದು ಇದರ ಅಂಗವಾಗಿ ಭಕ್ತಾಧಿಗಳ ಸಭೆಯು ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ದಾಮೋದರ ಗೌಡ ಕಕ್ವೆ ಇವರ ಅಧ್ಯಕ್ಷತೆಯಲ್ಲಿ ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರೀ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು. ಸಭೆಯಲ್ಲಿ ಸೀಮೆಗೆ ಸಂಬಂಧ ಪಟ್ಟ ಆಲಂಕಾರು,ಪೆರಾಬೆ,ಕುಂತೂರು,ಹಳೆನೇರೆಂಕಿ ಗ್ರಾಮದ ಭಕ್ತಾಧಿಗಳಿಗೆ ಅಮಂತ್ರಣ ಪತ್ರಿಕೆ ವಿತರಿಸುವ ಬಗ್ಗೆ ಬೈಲುವಾರಿ ಸಮಿತಿ ರಚನೆ ಮಾಡಲಾಯಿತು. ಸಭೆಯಲ್ಲಿ ದೇವಸ್ಥಾನದ ಅಭಿವೃದ್ದಿಯ ಬಗ್ಗೆ, ಅಷ್ಟಮಂಗಲ ಪ್ರಶ್ನೆ ನಡೆಸಲು ಬೇಕಾದ ಪೂರಕ ವ್ಯವಸ್ಥೆಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು, ಸಭೆಯ ಅಧ್ಯಕ್ಷತೆ ವಹಿಸಿದ್ದ ದಾಮೋದರ ಗೌಡ ಕಕ್ವೆ ಅಷ್ಟಮಂಗಲ ಪ್ರಶ್ನೆಗೆ ಸೀಮೆಯ ಪ್ರತಿ ಮನೆಯಿಂದ ಭಕ್ತಾದಿಗಳು ಭಾಗವಹಿಸುವಂತೆ ವಿನಂತಿಸಿ , ಈ ಬಗ್ಗೆ ಬೈಲುವಾರಿ ಸಮಿತಿಯವರು ಗಮನ ಹರಿಸುವಂತೆ ತಿಳಿಸಿದರು. ಅನಂತರ ಎಲ್ಲಾ ಭಕ್ತಾಧಿಗಳು ಒಟ್ಟು ಸೇರಿ ದುರ್ಗಾಪರಮೇಶ್ವರೀ ದೇವಿಯ ಮುಂದೆ

ದೇವಳಾಯದಲ್ಲಿ ನಡೆಯುವ ಜೀರ್ಣೋದ್ದಾರ ಹಾಗು ಬ್ರಹ್ಮ ಕಲಶ ದ ಉದ್ದೇಶದಿಂದ ಮಾಡುವ ಅಷ್ಟಮಂಗಲ ಪ್ರಶ್ನೆ ಯಾವುದೇ ವಿಘ್ನಗಳು ಬಾರದ ರೀತಿಯಲ್ಲಿ ಸುಸೂತ್ರವಾಗಿ ಶ್ರೀ ದೇವಿ ನೇರವೆರಿಸುವಂತೆ ಭಕ್ತಾಧಿಗಳು ಶ್ರೀ ದೇವಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ವ್ಯವಸ್ಥಾಪನ ಸಮಿತಿಯ ಸದಸ್ಯರಾದ ರಾಘವೇಂದ್ರ ಪ್ರಸಾದ್.ಟಿ ಪ್ರಾರ್ಥನೆಯ ವಿಧಿ ವಿಧಾನ ವನ್ನು ನೇರವೆರೆಸಿದರು. ಈ ಸಂಧರ್ಭ ದಲ್ಲಿ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷರಾದ ಗೋಪಾಲಕೃಷ್ಣ ಪಡ್ಡಿಲ್ಲಾಯ, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಶೀನಪ್ಪ ಕುಂಬಾರ ಪ್ರಶಾಂತ್ ಕುಮಾರ್ ರೈ ಮನವಳಿಕೆ, ಲಕ್ಷ್ಮೀ ನಾರಾಯಣ ಅಡೀಲು, ಬಾಬು ಕುಪ್ಲಾಜೆ ಮರುವಂತಿಲ, ಅಶಾ ಈಶ್ವರಭಟ್, ವ್ಯವಸ್ಥಾಪನ ಸಮಿತಿಯ ಮಾಜಿ ಸದಸ್ಯರು,ವಿವಿಧ ದೈವ, ದೇವಸ್ಥಾನಗಳ ಅಡಳಿತ ಪ್ರಮುಖರು,,ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಕ್ತಾಧಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here