ವನದೊಂದಿಗೆ ನಾವು-ಬಂಟಾಜೆ ರಕ್ಷಿತಾರಣ್ಯ ಪ್ರದೇಶದಲ್ಲಿ ಸೂರಂಬೈಲು ಶಾಲಾ ಮಕ್ಕಳಿಂದ ಹಣ್ಣಿನ ಗಿಡ ನೆಡುವ ವಿನೂತನ ಕಾರ್ಯಕ್ರಮ.

0

 ನಿಡ್ಪಳ್ಳಿ;  ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸೂರಂಬೈಲು ಶಾಲಾ ಎಸ್.ಡಿ.ಎಂ.ಸಿ, ಪೋಷಕರು ಹಾಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ ಜು.16 ರಂದು ಬಂಟಾಜೆ ರಕ್ಷಿತಾರಣ್ಯ ಪ್ರದೇಶದಲ್ಲಿ ವನ್ಯಜೀವಿಗಳ ಆಹಾರಕ್ಕಾಗಿ ಹಾಗೂ ಅರಣ್ಯ ಸಂರಕ್ಷಣೆಗಾಗಿ ಹಣ್ಣಿನ ಗಿಡಗಳನ್ನು ಪ್ರತಿ ಶಾಲಾ ಮಕ್ಕಳ ಹೆಸರಿನಲ್ಲಿ  ನೆಡಲಾಯಿತು.
ಪಾಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ  ಭಾರತಿ ಭಟ್  ಶುಭ ಹಾರೈಸಿ ಗಿಡ ನೆಟ್ಟು ಕಾರ್ಯಕ್ರಮವನ್ನು ಉದ್ಘಾಟಿಸಿದರು.ಕಾರ್ಯಕ್ರಮ ಆಯೋಜನೆಗೆ  ಸಹಕಾರ ನೀಡಿದ ಬೇಂಗದ ಪದವು ಶಾಲಾ ಮುಖ್ಯ ಗುರು ಶಿವಕುಮಾರ್  ಅರಣ್ಯ ಸಂರಕ್ಷಣೆಯ ಮಹತ್ವವನ್ನು ಮಕ್ಕಳಿಗೆ ತಿಳಿಸಿ ಶುಭ ಹಾರೈಸಿದರು.ಬೆಟ್ಟಂಪಾಡಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ  ಪರಮೇಶ್ವರಿ,ಗ್ರಾಮ ಪಂಚಾಯತ್ ಸದಸ್ಯರಾದ  ಮೋಹನನಾಯ್ಕ ತೂಂಬಡ್ಕ, ಊರಿನ ಗಣ್ಯರಾದ  ಸದಾಶಿವ ರೈ ಸೂರಂಬೈಲು, ಪುತ್ತೂರು ಅರಣ್ಯ ವಿಭಾಗದ ರಕ್ಷಕರಾದ  ಲಿಂಗರಾಜು,ಮುಖ್ಯಗುರುಗಳಾದ  ಊರ್ಮಿಳಾ ಕೆ,ಎಸ್.ಡಿ.ಎಂ.ಸಿ ಅಧ್ಯಕ್ಷರಾದ  ಸುನೀತಾ ತೂಂಬಡ್ಕ, ಉಪಾಧ್ಯಕ್ಷರಾದ  ಲಲಿತಾ ಸೂರಂಬೈಲು, ಪ್ರದೀಪ್ ಪಾಣಾಜೆ, ಶಾಲಾ ಅತಿಥಿ ಶಿಕ್ಷಕಿ  ಸುಪ್ರೀತಾ,ವಿದ್ಯಾಲಕ್ಷೀ,ಗೌರವ ಶಿಕ್ಷಕಿಯರಾದ ಕವಿತಾ,ಯಶಸ್ವಿನಿ ಹಾಗೂ ಶಾಲೆಯ ಪೋಷಕರು ಉಪಸ್ಥಿತರಿದ್ದರು.ಶಾಲಾ ಸಹಶಿಕ್ಷಕರಾದ ನಾಗೇಶ್ ಪಾಟಾಳಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here