ಕಟ್ಟತ್ತಾರು ಮದ್ರಸ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ

0

ಕಟ್ಟತ್ತಾರು: ಕಟ್ಟತ್ತಾರು ನುಸ್ರತುಲ್ ಇಸ್ಲಾಂ ಮದ್ರಸದ ಸುಮಾರು 160 ವಿದ್ಯಾರ್ಥಿಗಳಿಗೆ ಉಮರ್ ಹಾಜಿ ಖತ್ತರ್‌ರವರ ಪ್ರಾಯೋಜಕತ್ವದಲ್ಲಿ ಸಮವಸ್ತ್ರ ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ ಮಸೀದಿ ಅಧ್ಯಕ್ಷ ಪಿ.ಎಂ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಮಾತನಾಡಿ ವಿದ್ಯಾರ್ಥಿಯರ ನಡುವೆ ಉಂಟಾಗುವ ಮೇಲು-ಕೀಲು ಭಾವನೆಗಳನ್ನು ಹೋಗಲಾಡಿಸಲು ಸಮವಸ್ತ್ರದ ಮೂಲಕ ಸಾಧ್ಯವಿದ್ದು ಮಕ್ಕಳಲ್ಲಿ ಶಿಸ್ತು ಮೂಡಿಸಲೂ ಸಮವಸ್ತ್ರದ ಮೂಲಕ ಸಾಧ್ಯವಿದೆ. ಶಾಲೆಗೆ ಸಮವಸ್ತ್ರ ಧರಿಸಿ ಮಕ್ಕಳು ಹೋಗುತ್ತಾರೆ. ಅದೇ ರೀತಿ ಮದ್ರಸಕ್ಕೂ ಸಮವಸ್ತ್ರ ಧರಿಸಿ ಬಂದರೆ ಅದಕ್ಕೆ ತನ್ನದೇ ಆದ ಮೌಲ್ಯವಿದೆ. ಈ ನಿಟ್ಟಿನಲ್ಲಿ ಉಮರ್ ಹಾಜಿಯವರು ಮದ್ರಸದ ಮಕ್ಕಳಿಗೆ ತಮ್ಮ ವತಿಯಿಂದ ಕೊಡುಗೆ ರೂಪದಲ್ಲಿ ಸಮವಸ್ತ್ರ ನೀಡಿರುವುದು ಅಭಿನಂದನೀಯ ಎಂದು ಹೇಳಿದರು. ಸ್ಥಳೀಯ ಮಸೀದಿ ಖತೀಬ್ ಇಸಾಕ್ ಬಾಹಸನಿ ಉದ್ಘಾಟಿಸಿದರು.
ಮದ್ರಸ ಸದರ್ ಸಿದ್ದೀಕ್ ಫೈಝಿ, ಅಧ್ಯಾಪಕರಾದ ಉಮರ್ ಅಝ್ಹರಿ, ಮೊಯ್ದೀನ್ ಮುಸ್ಲಿಯಾರ್, ಮಸೀದಿಯ ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಸಿ.ಬಿ, ಉಮರ್ ಹಾಜಿ ಖತ್ತರ್, ಯೂಸುಫ್ ಹಾಜಿ ಕಟ್ಟತ್ತಾರು, ಬಿ.ಎಂ ಉಮರ್ ಹಾಜಿ, ಜಮಾಅತ್ ಆಡಳಿತ ಸಮಿತಿ ಸದಸ್ಯರು, ಜಮಾಅತ್ ಸದಸ್ಯರು, ಪೋಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here