ವಿಟ್ಲ: ಬೈಕ್ ಅಪಘಾತ, ವ್ಯಕ್ತಿ ಮೃತ್ಯು

0

ವಿಟ್ಲ: ಬೈಕ್ ಸ್ಕಿಡ್ ಆಗಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಜು.೧೭ರಂದು ವಿಟ್ಲ ಸಮೀಪ ನಡೆದಿದೆ.
ಅನ್ನಪೂರ್ಣ ಟ್ರಾವೆಲ್ಸ್ ಮಾಲಕ ಕಾಶಿಮಠ ಸತ್ಯನಾರಾಯಣ ಭಟ್(೫೪ ವ.)ರವರು ಮೃತ ಪಟ್ಟವರು. ಸತ್ಯನಾರಾಯಣ ಭಟ್‌ರವರು ಕನ್ಯಾನದಿಂದ ವಿಟ್ಲ ಕಡೆಗೆ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಬೈಕ್ ಸ್ಕಿಡ್ ಆಗಿ ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಸ್ಥಳೀಯರು ವಿಟ್ಲ ಸರಕಾರಿ ಆಸ್ಪತ್ರೆಗೆ ದಾಖಲಿಸಿದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರೆಂದು ತಿಳಿದುಬಂದಿದೆ. ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳನ್ನು ಮತ್ತು ಮಗಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here