ತೆಗ್ಗು: ವಿದ್ಯುತ್ ಶಾರ್ಟ್‌ಸರ್ಕ್ಯೂಟ್: ಗ್ರಾ.ಪಂ. ತಂಡ ಭೇಟಿ

0

ಪುತ್ತೂರು: ವಿದ್ಯುತ್ ಲೈನ್‌ನಲ್ಲಿ ಉಂಟಾದ ಅವಾಂತರದಿಂದಾಗಿ ಮನೆಯ ವಯರಿಂಗ್ ಸಹಿತ ವಸ್ತುಗಳಿಗೆ ಹಾನಿಯುಂಟಾಗಿ ಸಾವಿರಾರು ರೂಪಾಯಿ ನಷ್ಟ ಉಂಟಾದ ಘಟನೆ ಕೆಯ್ಯೂರು ಗ್ರಾಮದ ತೆಗ್ಗು ಎಂಬಲ್ಲಿ ನಡೆದಿದೆ. ತೆಗ್ಗು ನಿವಾಸಿ ಸಂಶುದ್ದೀನ್ ಎಂಬವರ ಮನೆಯ ವಿದ್ಯುತ್ ಲೈನ್‌ನಲ್ಲಿ ತೊಂದರೆಯುಂಟಾಗಿ ಮನೆಯೊಳಗೆ ಶಾರ್ಟ್‌ಸರ್ಕ್ಯೂಟ್ ಉಂಟಾಗಿದೆ.

ಇದರಿಂದ ಮನೆಯ ವಯರಿಂಗ್ ಸುಟ್ಟು ಹೋಗಿದ್ದು ಮನೆಯೊಳಗಿದ್ದ ವಸ್ತುಗಳಿಗೆ ಹಾನಿಯುಂಟಾಗಿದೆ. ಇದರಿಂದ ಸುಮಾರು 50 ಸಾವಿರ ರೂ ನಷ್ಟ ಉಂಟಾಗಿದೆ ಎಂದು ಮನೆಯವರು ತಿಳಿಸಿದ್ದಾರೆ. ಮನೆಗೆ ಜು.16 ರಂದು ಕೆಯ್ಯೂರು ಗ್ರಾಪಂ ಅಧ್ಯಕ್ಷೆ ಜಯಂತಿ ಎಸ್.ಭಂಡಾರಿ, ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ, ವಾರ್ಡ್ ಸದಸ್ಯ ಅಬ್ದುಲ್ ಖಾದರ್ ಮೇರ್ಲ, ಗ್ರಾಮಕರಣಿಕರಾದ ಸ್ವಾತಿ, ಸಹಾಯಕ ನಾರಾಯಣ್‌ರವರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

LEAVE A REPLY

Please enter your comment!
Please enter your name here