ಜು.30: ಅಂಗನವಾಡಿ ಕಾರ್ಯಕರ್ತೆ ಶಾಂತಿ ಮಂಜುನಾಥ್ ರೈಯವರಿಗೆ ಸನ್ಮಾನ, ಅಭಿನಂದನಾ ಸಮಾರಂಭ

0

ಪುತ್ತೂರು : ಸಂಟ್ಯಾರ್ ಅಂಗನವಾಡಿ ಕೇಂದ್ರದ ಸ್ಥಾಪನೆಯಿಂದ ನಿರಂತರ 32 ವರ್ಷಗಳ ಕಾಲ ಅಂಗನವಾಡಿ ಕಾರ್ಯಕರ್ತೆಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿಗೊಳ್ಳುತ್ತಿರುವ ಶಾಂತಿ ಮಂಜುನಾಥ ರೈಯವರಿಗೆ ಜು.30ರಂದು ಬೆಳಿಗ್ಗೆ 10ಕ್ಕೆ ವಿದಾಯ, ಸನ್ಮಾನ ಹಾಗೂ ಅಭಿನಂದನಾ ಸಮಾರಂಭ ನಡೆಯಲಿದೆ.

ಜು.16 ರಂದು ಸಂಟ್ಯಾರ್ ಅಂಗನವಾಡಿ ಕೇಂದ್ರದಲ್ಲಿ ಬಾಲವಿಕಾಸ ಸಮಿತಿಯ ನೇತೃತ್ವದಲ್ಲಿ ನಡೆದ ಅಂಗನವಾಡಿ ಪೋಷಕರು, ಅಂಗನವಾಡಿ ವ್ಯಾಪ್ತಿಯ ಸಾರ್ವಜನಿಕರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ದ.ಕ.ಜಿಲ್ಲಾ ಪಂಚಾಯತ್ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸನ್ಮಾನ, ಅಭಿನಂದನಾ ಸಮಾರಂಭ ನಡೆಯಲಿದೆ. ಬಾಲವಿಕಾಸ ಸಮಿತಿ ಅಧ್ಯಕ್ಷ ಮಾದವಿ ಕುಶಾಲಪ್ಪ ಗೌಡ ದೇವಸ್ಯ ಹಾಗೂ ಸಮಿತಿ ಸದಸ್ಯರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಪಂಚಾಯತ್ ಸದಸ್ಯರಾದ ಹರೀಶ್ ನಾಯಕ್ ವಾಗ್ಳೆ ಬಳಕ್ಕ ಮತ್ತಿತರರು ಕಾರ್ಯಕ್ರಮದ ಬಗ್ಗೆ ಸೂಕ್ತ ಸಲಹೆ ನೀಡಿ, ಸಾರ್ವಜನಿಕ ಅಭಿನಂದನೆ, ಸಮಿತಿ ರಚಿಸಲಾಯಿತು.

ಪದಾಧಿಕಾರಿಗಳ ನೇಮಕ: ಅಧ್ಯಕ್ಷರಾಗಿ ಪೋಷಕರು, ಉದ್ಯಮಿಯು ಆಗಿರುವ ಯತೀಶದೇವ ಸಂಟ್ಯಾರ್, ಸಂಚಾಲಕರಾಗಿ ಗ್ರಾ.ಪಂ. ಸದಸ್ಯ ಹರೀಶ್ ನಾಯಕ್ ವಾಗ್ಲೆ ಬಳಕ್ಕ, ಗೌರವಾಧ್ಯಕ್ಷರಾಗಿ ಕಾರ್ಪಾಡಿ ಶ್ರೀಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಧಾಕರ ರಾವ್ ಆರ್ಯಾಪು, ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್ ಕರ್ಕೇರ ಮರಿಕೆ, ಕೋಶಾಽಕಾರಿಯಾಗಿ ಮಾಧವಿ ಕುಶಾಲಪ್ಪ ಗೌಡ ದೇವಸ್ಯ, ಜತೆ ಕಾರ್ಯದರ್ಶಿಯಾಗಿ ಕಿಶೋರ ಗೌಡ ಮರಿಕೆ, ಉಪಾಧ್ಯಕ್ಷರಾಗಿ ಗಣೇಶ್ ರೈ ಮೂಲೆ, ಹಮೀದಾಲೀಷ್ ಸಂಟ್ಯಾರ್, ಬಾಬು ಮರಿಕೆ, ಚೆನ್ನಪ್ಪ ಮರಿಕೆ, ಶಶಿಧರ ಗೌಡ ಮರಿಕೆ, ಗೌರವ ಸಲಹೆಗಾರರಾಗಿ ಎ.ಪಿ ಸದಾಶಿವ ಮರಿಕೆರವರನ್ನು ಆಯ್ಕೆ ಮಾಡಲಾಯಿತು. ಪ್ರತೀ ಮನೆಗಳ ಸಂಪರ್ಕ, ಆಮಂತ್ರಣ ನೀಡಿ ಕಾರ್ಯಕ್ರಮದ ಯಶಸ್ಸಿಗೆ ಧನ ಸಂಗ್ರಹಿಸುವ ಉದ್ದೇಶದಿಂದ ಮಿನಿಪದವು, ಬಳಕ್ಕ, ತೊಟ್ಲ, ಖಂಡಿಗ, ಮರಿಕೆ, ಗುಂಡಿಗದ್ದೆ ಸಂಟ್ಯಾರ್, ಕಾಯರಾಪು, ಕೂರೇಲು ನೀರ್ಕಜೆ, ಕಲ್ಲರ್ಪೆ, ಕಾರ್ಪಾಡಿ ಪ್ರದೇಶಕ್ಕೆ ಸದಸ್ಯರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here