ಫಿಲೋಮಿನಾ ಕಾಲೇಜಿನಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ

0

ಜನಸಂಖ್ಯೆ ವರವೂ ಹೌದು, ಶಾಪವೂ ಹೌದು – ವಾಸುದೇವ ಎನ್

ಪುತ್ತೂರು: ಯಾವುದೇ ದೇಶದ ಪ್ರಗತಿಗೆ ಜನಸಂಖ್ಯೆ ಮಾನವ ಸಂಪನ್ಮೂಲ ಅತ್ಯಂತ ಅಗತ್ಯವಾದ ಅಂಶ. ಕೃಷಿ, ಕೈಗಾರಿಕೆ, ಕಾಮಗಾರಿ ಕ್ಷೇತ್ರಗಳಲ್ಲಿ ಕೆಲಸ ಕಾರ್ಯ ಮಾಡಲು ಜನರು ಅಗತ್ಯ. ಜನಸಂಖ್ಯೆ ಮಿತಿಯನ್ನು ಮೀರಿದರೆ ವರವಾಗುವ ಬದಲಿಗೆ ಶಾಪವಾಗುತ್ತದೆ ಎಂದು ಫಿಲೋಮಿನಾ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ|ವಾಸುದೇವ ಎನ್‌ರವರು ಹೇಳಿದರು.

ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ದರ್ಬೆ ಫಿಲೋನಗರದಲ್ಲಿನ ಸಂತ ಫಿಲೋಮಿನಾ ಕಾಲೇಜಿನ ಮಾನವಿಕ ಸಂಘದ ಆಶ್ರಯದಲ್ಲಿ ಜುಲೈ 11ರಂದು ಆಚರಿಸಲಾಗುವ ವಿಶ್ವ ಜನಸಂಖ್ಯಾ ದಿನಾಚರಣೆಯಲ್ಲಿ ಅವರು ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದರು. ಭಾರತದ ಜನಸಂಖ್ಯೆ ಸುಮಾರು 130 ಕೋಟಿ. ಭಾರತವು ಪ್ರತಿ ವರ್ಷ ಒಂದು ಆಸ್ಟ್ರೇಲಿಯಾ ಖಂಡದ ಜನಸಂಖ್ಯೆಯನ್ನು ಜಾಗತಿಕ ಜನಸಂಖ್ಯೆಗೆ ಸೇರಿಸುತ್ತಿದೆ. ಸುಮಾರು ಶೇ.0.97 ದರದಲ್ಲಿ ದೇಶದ ಜನಸಂಖ್ಯೆ ಹೆಚ್ಚುತ್ತಿದೆ. ಈಗಾಗಲೇ ಅಗಾಧವಾಗಿರುವ ಜನಸಂಖ್ಯೆಗೆ ಈ ದರದಲ್ಲಿ ಜನಸಂಖ್ಯೆ ಸೇರ್ಪಡೆಯಾದಾಗ ದೇಶದ ಒಟ್ಟು ಜನಸಂಖ್ಯೆ ಮತ್ತಷ್ಟು ಹೆಚ್ಚುತ್ತದೆ. ಜನಸಂಖ್ಯೆ ಮತ್ತು ಲಭ್ಯ ಸಂಪನ್ಮೂಲ ಸಮಾನವಾಗಿದ್ದಾಗ ಮಾತ್ರ ದೇಶ ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತದೆ. ಜವಾಬ್ದಾರಿಯುತ ಪ್ರಜೆಗಳಾಗಿ ಜನಸಂಖ್ಯೆಯ ನಿಯಂತ್ರಣಕ್ಕೆ ಗಮನ ಹರಿಸಬೇಕಾದದ್ದು ವರ್ತಮಾನದ ಆದ್ಯತೆ ಎಂದು ಹೇಳಿದರು.

ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆಯ ಕೋಶದ ನಿರ್ದೇಶಕರಾಗಿರುವ ಡಾ|ಎ.ಪಿ.ರಾಧಾಕೃಷ್ಣರವರು ಮಾತನಾಡಿ, ಯುರೋಪಿನ ಹಲವು ದೇಶಗಳು ಜನಸಂಖ್ಯಾ ಕುಸಿತದಿಂದ ಸಮಸ್ಯೆ ಎದುರಿಸುತ್ತಿರುವ ಸಂದರ್ಭದಲ್ಲಿಯೇ ಏಷ್ಯಾ ಖಂಡದ ಹಲವು ರಾಷ್ಟ್ರಗಳು ಹೆಚ್ಚುತ್ತಿರುವ ಜನಸಂಖ್ಯೆಯಿಂದ ತತ್ತರಿಸುತ್ತಿವೆ. ಈ ಎರಡು ಅತಿಗಳ ನಡುವೆ ಮಿತಿಯನ್ನು ಕಾಯ್ದುಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.

ಇತಿಹಾಸ ವಿಭಾಗ ಮುಖ್ಯಸ್ಥ ಪ್ರೊ|ಝುಬೈರ್ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಹಾಶಿನಿ ಸಿಂಗ್ ವಂದಿಸಿ, ಲಾವಣ್ಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಇತಿಹಾಸ ವಿಭಾಗ ಪ್ರಾಧ್ಯಾಪಕ ಡಾ|ನೋರ್ಬರ್ಟ್ ಮಸ್ಕರೇನ್ಹಸ್, ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥ ಲೆ|ಜೋನ್ಸನ್ ಡಿ’ಸಿಕ್ವೆರಾ, ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿ ಶ್ರೀಮತಿ ಹರ್ಷಿತಾ ಮತ್ತು ಇತರ ಉಪನ್ಯಾಸಕರು ಉಪಸ್ಥಿತರಿದ್ದರು.

[box type=”tip” bg=”#” color=”#” border=”#” radius=”26″]ಗಂಟೆಗೆ 3 ಸಾವಿರ ಶಿಶುಗಳು ದೇಶದಲ್ಲಿ ಜನನ…

 

ನಮ್ಮ ದೇಶದಲ್ಲಿ ಜನಸಂಖ್ಯೆ ಏರುಗತಿಯಲ್ಲಿ ಹೆಚ್ಚುತ್ತಿರುವುದು ಕಳವಳಕಾರಿ ಅಂಶ. ಪ್ರತಿ ಗಂಟೆಗೆ ಸುಮಾರು ಮೂರು ಸಾವಿರ ಶಿಶುಗಳು ದೇಶದಲ್ಲಿ ಜನನವಾಗುತ್ತಿವೆ. ಅಂತರ್ಜಾಲದಲ್ಲಿರುವ ವರ್ಲ್ಡೋ ಮೀಟರ್ ಜಾಗತಿಕವಾಗಿ ಜನಸಂಖ್ಯೆ ಹೇಗೆ ಹೆಚ್ಚಿತ್ತಿದೆ ಎಂದು ತೋರಿಸುತ್ತದೆ. ಅದರಲ್ಲಿ ಮೂಡುವ ಅಂಕಿಗಳ ವೇಗವು ಸಮಸ್ಯೆಯನ್ನು ನಿರೂಪಿಸುತ್ತದೆ.

 

-ವಂ|ಡಾ|ಆಂಟನಿ ಪ್ರಕಾಶ್ ಮೊಂತೆರೋ, ಪ್ರಾಂಶುಪಾಲರು, ಸಂತ ಫಿಲೋಮಿನಾ ಕಾಲೇಜು[/box]

LEAVE A REPLY

Please enter your comment!
Please enter your name here