ಜು.19:ಫಿಲೋಮಿನಾ ಕಾಲೇಜಿನಲ್ಲಿ ರ್‍ಯಾಂಕ್ ವಿಜೇತರಿಗೆ ಅಭಿನಂದನಾ ಕಾರ್ಯಕ್ರಮ

0

ಪುತ್ತೂರು: ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ದರ್ಬೆ ಫಿಲೋನಗರದಲ್ಲಿನ ಸಂತ ಫಿಲೋಮಿನಾ ಕಾಲೇಜಿನ ವತಿಯಿಂದ 2021-22ನೇ ಶೈಕ್ಷಣಿಕ ವರ್ಷದ ಪದವಿ ಮತ್ತು ಸ್ನಾತಕೋತ್ತರ ಪದವಿ ವಿಭಾಗದಲ್ಲಿ 26  ರ್‍ಯಾಂಕ್ ಗಳಿಸಿದ ವಿಜೇತರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮ ಜು.19 ರಂದು ಕಾಲೇಜಿನ ಬೆಳ್ಳಿ ಹಬ್ಬದ ಸಭಾಂಗಣದಲ್ಲಿ ಜರಗಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ವಹಿಸಿಕೊಳ್ಳಲಿರುವರು. ಮುಖ್ಯ ಅತಿಥಿಯಾಗಿ ಪುತ್ತೂರು ನಗರಸಭೆಯ ಪೌರಾಯುಕ್ತರಾದ ಮಧು ಎಸ್.ಮನೋಹರ್, ಗೌರವ ಅತಿಥಿಗಳಾಗಿ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋರವರು ಭಾಗವಹಿಸಲಿದ್ದಾರೆ.

೨೦೨೦-೨೧ರ ಸ್ನಾತಕ ಪದವಿಯ ಬಿಬಿಎಯಲ್ಲಿ ಮೈತ್ರಿ ಕೆ.ಬಿ(ದ್ವಿತೀಯ ರ್‍ಯಾಂಕ್), ಬಿಎಸ್‌ಡಬ್ಲ್ಯೂನಲ್ಲಿ ಅಕ್ಷತಾ ಎಸ್(ದ್ವಿತೀಯ ರ್‍ಯಾಂಕ್), ಬಿಕಾಂನ ದೀಪಾ ಸಿ.ಭಟ್(೪ನೇ ರ್‍ಯಾಂಕ್), ಸ್ನಾತಕೋತ್ತರ ಪದವಿಯ ಎಂಕಾಂನಲ್ಲಿ ಜೊಶಿಲಾ ಮೆರಿಟ ಮಿನೇಜಸ್(ಪ್ರಥಮ ರ್‍ಯಾಂಕ್), ಎಂಎಸ್ಸಿ ಫಿಸಿಕ್ಸ್‌ನ ಪ್ರಮಿತ ಎ(ಪ್ರಥಮ ರ್‍ಯಾಂಕ್, ಎಂಎಸ್ಸಿ ಕಂಪ್ಯೂಟರ್ ಸೈನ್ಸ್‌ನ ನಮಿಶಾ ಎಸ್.ರಾವ್(ಪ್ರಥಮ ರ್‍ಯಾಂಕ್), ಎಂಎಸ್ಸಿ ಫಿಸಿಕ್ಸ್‌ನ ತುಷಾರಾ ಆರ್.ಬಿ(ದ್ವಿತೀಯ ರ್‍ಯಾಂಕ್), ಎಂಕಾಂನ ನವ್ಯಶ್ರೀ ರೈ.ಕೆ(೪ನೇ ರ್‍ಯಾಂಕ್), ಎಂಕಾಂನ ಹರ್ಷಿತಾ ಎಸ್.ಕೆ(೯ನೇ ರ್‍ಯಾಂಕ್)ರವರನ್ನು ಸನ್ಮಾನಿಸಲಾಗುತ್ತದೆ.

2021-22ರಲ್ಲಿ ಸ್ನಾತಕ ವಿಭಾಗದಲ್ಲಿ ಬಿಎಸ್ಸಿಯ ಅನು ಡಿ(4ನೇ ರ್‍ಯಾಂಕ್), ಬಿಬಿಎ ವಿಭಾಗದ ರಾಶಿಯಾ ರೈ ಎಂ(5ನೇ ರ್‍ಯಾಂಕ್), ಬಿಎ ವಿಭಾಗದಲ್ಲಿ ಚೇತನಾ ಎನ್(6ನೇ ರ್‍ಯಾಂಕ್), ಬಿಬಿಎ ವಿಭಾಗದ ಶ್ರೇಯಾ ಕೆ.ಎಸ್(7ನೇ ರ್‍ಯಾಂಕ್), ಬಿಎಸ್ಸಿ ವಿಭಾಗದ ರೆನಿಲ್ಡಾ ಜೋಯ್ಸ್ ಮಾರ್ಟಿಸ್(9ನೇ ರ್‍ಯಾಂಕ್), ಬಿಎಸ್ಸಿ ವಿಭಾಗದ ರಮ್ಯಶ್ರೀ ರೈ(10ನೇ ರ್‍ಯಾಂಕ್), ಸ್ನಾತಕೋತ್ತರ ಪದವಿಯಲ್ಲಿ ಎಂಎಸ್ಸಿ ಕಂಪ್ಯೂಟರ್ ಸೈನ್ಸ್‌ನ ಜೈನಾಬತ್ ರಮ್ಸೀನಾ ಎನ್(ಪ್ರಥಮ ರ್‍ಯಾಂಕ್), ಎಂಎಸ್ಸಿ ಫಿಸಿಕ್ಸ್‌ನ ಸುಶ್ಮಿತಾ ಕೆ(ಪ್ರಥಮ ರ್‍ಯಾಂಕ್), ಎಂಎಸ್‌ಡಬ್ಲ್ಯೂನ ಸಾರಮ್ಮ ಟಿ.ಜೆ(2ನೇ ರ್‍ಯಾಂಕ್), ಎಂಕಾಂನ ನಿರೀಶ್ಮಾ ಎನ್.ಸುವರ್ಣ(4ನೇ ರ್‍ಯಾಂಕ್), ಎಂಕಾಂನ ಯಶಸ್ವಿನಿ ಬಿ(5ನೇ ರ್‍ಯಾಂಕ್), ಎಂಕಾಂನ ರಕ್ಷಾ ಎಸ್.ವಿ(5ನೇ ರ್‍ಯಾಂಕ್), ಎಂಕಾಂನ ನಿವಿನ್ ಕೊರೆಯಾ(6ನೇ ರ್‍ಯಾಂಕ್), ಎಂಕಾಂನ ಶ್ರಾವ್ಯ ಎನ್.ಎಸ್(7ನೇ ರ್‍ಯಾಂಕ್), ಎಂಕಾಂನ ಭವ್ಯಶ್ರೀ ವೈ(7ನೇ ರ್‍ಯಾಂಕ್), ಎಂಕಾನ ರಮ್ಯ ಎಂ(9ನೇ ರ್‍ಯಾಂಕ್), ಎಂಕಾಂನ ಸ್ವಾತಿ ಎಂ(10ನೇ ರ್‍ಯಾಂಕ್)ರವರನ್ನು ಸನ್ಮಾನಿಸಲಾಗುತ್ತದೆ ಎಂದು ಕಾಲೇಜು ಪ್ರಾಂಶುಪಾಲ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೋರವರು ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಡಾ|ಕೆ.ಚಂದ್ರಶೇಖರ್, ಶ್ರೀಮತಿ ಭಾರತಿ ಎಸ್.ರೈ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಮಿತ್ ಎಸ್.ಆರಾನ್ಹಾ, ಕಾರ್ಯದರ್ಶಿ ಪ್ರಖ್ಯಾತ್ ಟಿ.ಜೆ, ಜೊತೆ ಕಾರ್ಯದರ್ಶಿ ಮಹಾಲಸಾ ಪೈ ಜಿ.ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here