ಜಿಲ್ಲಾ ಮಟ್ಟದ ಈಜು ಸ್ಪರ್ಧೆ: ಬೆಥನಿ ಪ್ರೌಢ ಶಾಲೆಯ ಪ್ರಾಧಿ ಕ್ಲೇರಾ ಪಿಂಟೋ, ಪ್ರತೀಕ್ಷಾ ಎನ್. ಶೆಣೈರವರಿಗೆ 9 ಚಿನ್ನದ ಪದಕದೊಂದಿಗೆ ಸಮಗ್ರ ಪ್ರಶಸ್ತಿ

0

 

ಪುತ್ತೂರು : ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ದ.ಕ. ಜಿಲ್ಲಾ ಪಂಚಾಯತ್ ಉಪನಿರ್ದೇಶಕರ ಕಛೇರಿ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಮತ್ತು ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ ತೆಂಕಿಲ ಇದರ ಸಹಯೋಗದೊಂದಿಗೆ ಜು.15ರಂದು ಪರ್ಲಡ್ಕ ಡಾ.ಶಿವರಾಮಕಾರಂತ ಈಜುಕೊಳದಲ್ಲಿ ನಡೆದ ಪ್ರಾಥಮಿಕ/ಪ್ರೌಢಶಾಲಾ ವಿದ್ಯಾರ್ಥಿಗಳ ಜಿಲ್ಲಾಮಟ್ಟದ ಈಜು ಸ್ಪರ್ಧೆಯಲ್ಲಿ ದರ್ಬೆ ಬೆಥನಿ ಪ್ರೌಢ ಶಾಲೆಯ 9 ನೇ ತರಗತಿಯ ವಿದ್ಯಾರ್ಥಿಗಳಾದ ಪ್ರಾಧಿ ಕ್ಲೇರಾ ಪಿಂಟೋ ಮತ್ತು ಪ್ರತೀಕ್ಷಾ ಎನ್.ಶೆಣೈರವರು 6 ಚಿನ್ನದ ಪದಕ ಪಡೆದು ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಪ್ರಾಧಿ ಕ್ಲೇರಾ ಪಿಂಟೋರವರು ಜೋಸೆಫ್ ಆಂಟನಿ ಲೆನಾಲ್ ಪಿಂಟೋ ಮತ್ತು ವೈಲೆಟ್ ನತಾಲಿಯ ಪಿಂಟೋರವರ ಪುತ್ರಿ.
ಪ್ರತೀಕ್ಷಾ ಎನ್. ಶೆಣೈರವರು ಪುತ್ತೂರಿನ ಎಮ್. ನರಸಿಂಹ ಶೆಣೈ ಮತ್ತು ಲಕ್ಷ್ಮೀ ಶೆಣೈ ದಂಪತಿ ಪುತ್ರಿಯಾಗಿದ್ದಾರೆ

LEAVE A REPLY

Please enter your comment!
Please enter your name here