ಉಪ್ಪಿನಂಗಡಿ: ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿ- ಇಬ್ಬರು ಗಂಭೀರ

0

ಉಪ್ಪಿನಂಗಡಿ: ಎರಡು ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಗಾಯಗೊಂಡ ಘಟನೆ ಉಪ್ಪಿನಂಗಡಿ ಸಮೀಪದ ಕುಟೇಲು ಸೇತುವೆ ಬಳಿ ಜು.18ರಂದು ನಡೆಯಿತು. ಮಾರುತಿ ೮೦೦ ಕಾರು ಮತ್ತು ಸಿಫ್ಟ್ ಡಿಸೈರ್ ಕಾರಿನ ಮಧ್ಯೆ ಅಪಘಾತ ನಡೆದಿದ್ದು ಮಾರುತಿ 800 ಕಾರಿನಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ. ಸಿಫ್ಟ್ ಡಿಸೈರ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಉಪ್ಪಿನಂಗಡಿ ಕೆಡೆಯಿಂದ ಹಳೆಗೇಟು ಕಡೆಗೆ ಬರುತ್ತಿದ್ದ 800 ಮಾರುತಿ ಕಾರು ಹಳೆಗೇಟನಿಂದ ಉಪ್ಪಿನಂಗಡಿ ಕಡೆಗೆ ಹೋಗುತ್ತಿದ್ದ ಸಿಫ್ಟ್ ಡಿಸೈರ್ ಕಾರಿಗೆ ಡಿಕ್ಕಿಯಾಗಿದೆ. ಸಿಫ್ಟ್ ಡಿಸೈರ್ ಕಾರು ರಸ್ತೆಯಂಚಿನ ತಗ್ಗು ಪ್ರದೇಶಕ್ಕೆ ಮಗುಚಿ ಬಿದಿದ್ದು ಮಾರುತಿ 800 ಕಾರು ಸಂಪೂರ್ಣ ನಜುಗುಜ್ಜಾಗಿ ರಸ್ತೆಯಲ್ಲಿ ತಿರುಗಿ ನಿಂತಿದೆ. ಗಾಯಗೊಂಡವರು ಹೆಸರು ಹಾಗೂ ಹೆಚ್ಚಿನ ಮಾಹಿತಿ ಇನ್ನಷ್ಟು ತಿಳಿದುಬರಬೇಕಿದೆ.

LEAVE A REPLY

Please enter your comment!
Please enter your name here