ಪುತ್ತೂರು : ಕೂರ್ನಡ್ಕ ಜಂಕ್ಷನ್ ಬಳಿಯ ಅಶ್ರಾ ಕಾಂಪ್ಲೆಕ್ಸ್ನಲ್ಲಿ ನೂತನವಾಗಿ ಸೀಮಾ ಬೇಕರಿ ಜು.18ರಂದು ಶುಭಾರಂಭಗೊಂಡಿತು. ಕೂರ್ನಡ್ಕ ಜುಮಾ ಮಸೀದಿಯ ಖತೀಬ್ ಹುನೈಸ್ ಫೈಝಿರವರು ನೂತನ ಸಂಸ್ಥೆಯನ್ನು ಉದ್ಘಾಟಿಸಿ ಶುಭಹಾರೈಸಿದರು.
ಬನ್ನೂರು ಹನಫಿ ಮಸೀದಿಯ ಖತೀಬ್ ಸೈಯದ್ ಸೈಫುಲ್ಲ ರಿಝ್ವಿ ಮತ್ತು ಮರೀಲ್ ಹನಫಿ ಜುಮಾ ಮಸೀದಿ ಖತೀಬ್ ಮೊಹಮ್ಮದ್ ಸುಹೇಬ್ ಆಲಂ ರಝ್ವಿರವರು ದುವಾಶೀರ್ವಚನ ನೀಡಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಪುತ್ತೂರು ನಗರಸಭಾ ಸದಸ್ಯರಾದ ಯೂಸುಫ್ ಡ್ರೀಮ್, ಬಾಲಣ್ಣ, ಸಿಝ್ಲರ್ ಸಾಫ್ಟ್ಡ್ರಿಂಕ್ಸ್ನ ಮಾಲಕ ಪ್ರಸನ್ನ ಕುಮಾರ್ ಶೆಟ್ಟಿ ಸಾಮೆತ್ತಡ್ಕ, ಹಿರಿಯರಾದ ಸಾಮೆತ್ತಡ್ಕ ಗೋಪಾಲಕೃಷ್ಣ ಭಟ್, ಕೂರ್ನಡ್ಕ ಜುಮಾ ಮಸೀದಿ ಅಧ್ಯಕ್ಷ ಕೆ.ಎಚ್.ಖಾಸಿಂ ಹಾಜಿ, ಪದಾಧಿಕಾರಿ ರಿಯಾಝ್ ಭೂಮಿ, ಮರೀಲ್ ಹನಫಿ ಮಸೀದಿಯ ಅಧ್ಯಕ್ಷ ಬುಡಾನ್ ಸಾಹೇಬ್, ಕಾರ್ಯದರ್ಶಿ ರಿಯಾಝ್, ಸಹಾಯಕ ಗುರುಗಳಾದ ಮೊಹಮ್ಮದ್ ಅಯಾಝ್ ರಿಝ್ವಿ, ಆಯ್ಕೆ ಸಪ್ಲಾಯಿಸ್ನ ಮಾಲಕ ರಝಾಕ್ ಖಾನ್, ಕೆ.ಎಂ.ಖಾದರ್ ಕೂರ್ನಡ್ಕ, ಡಿ.ಕೆ.ಅಬ್ದುಲ್ ರಹಿಮಾನ್, ಉಮ್ಮರ್ ಕೆ.ಎಸ್.ಕೂರ್ನಡ್ಕ, ಅಬ್ದುಲ್ ಸಮದ್ ಬಾವಾ ಹಾಜಿ ಕೂರ್ನಡ್ಕ, ಸೂರಜ್ ಶೆಟ್ಟಿ ಸಾಮೆತ್ತಡ್ಕ, ಇಲ್ಯಾಸ್ ಸಾಹೇಬ್ ಮುಕ್ವೆ, ಸಿರಾಜ್ ಸಾಮೆತ್ತಡ್ಕ, ಅನ್ವರ್ ಖಾನ್ ಕೂರ್ನಡ್ಕ, ಜಿಲ್ಲಾ ಮಹಿಳಾ ಕಾಂಗ್ರೆಸ್ ಪದಾಧಿಕಾರಿ ಸನಮ್ ನಝೀರ್, ಸತ್ತಾರ್ ಸಾಹೇಬ್ ಕೂರ್ನಡ್ಕ, ಬಾವಾ ಹಾಜಿ, ಸುಲೈಮಾನ್ ಹಾಜಿ ಕೂರ್ನಡ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಮಾಲಕ ಶಬ್ಬೀರ್ ಸಾಮೆತ್ತಡ್ಕರವರು ಸ್ವಾಗತಿಸಿ ಮಾತನಾಡಿ ನಮ್ಮಲ್ಲಿ ಎಲ್ಲಾ ತರಹದ ಖಾರ, ಸೀಟ್ಸ್ ಮತ್ತು ಕೇಕ್ ಐಟಂಗಳು ತಂಪು ಪಾನೀಯಗಳು, ಹಾಲು, ಮೊಸರು, ಐಡಿಯಲ್ ಐಸ್ಕ್ರೀಮ್ಗಳು ಹಾಗೂ ಶುಭಸಮಾರಂಭಗಳಿಗೆ ಮಿತದರದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇರುತ್ತದೆ ಎಂದು ಹೇಳಿ ಸಹಕಾರ ಕೋರಿದರು. ಸೀಮಾ ಬೇಕರಿಯ ಶಾಹಿದ್, ಫಾಯಿಜ್, ಪರ್ವಿಜ್, ಶಿಫಾಜ್ ಸಹಕರಿಸಿದರು.