- ಅಧ್ಯಕ್ಷ: ಶಂಸುದ್ದೀನ್, ಕಾರ್ಯದರ್ಶಿ: ಖಾಸಿಫ್, ಕೋಶಾಧಿಕಾರಿ: ಜಮೀರ್
ಪುತ್ತೂರು : ಅನ್ಸಾರುದ್ದೀನ್ ಅನಾಥಾಲಾಯ ಸಾಲ್ಮರ ಪುತ್ತೂರು ಇದರ ವಿದ್ಯಾರ್ಥಿ ಸಂಘಟನೆಯಾದ ಅನ್ಸಾರುದ್ದೀನ್ ಫೋರಂ ರಚಿಸಲಾಯಿತು. ಸಂಸ್ಥೆಯ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ಅಬ್ದುಲ್ ರಶೀದ್ ಕೆ.ಎಂ.ರವರ ಮಾರ್ಗದರ್ಶನದಲ್ಲಿ ರಚಿಸಲಾಯಿತು.
ಸಂಸ್ಥೆಯ ಮೆನೇಜರ್ ಇಸ್ಮಾಯಿಲ್ ಎಸ್.ರವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯಗುರು ಅಬ್ದುಲ್ ರಝಾಕ್ ಮುಸ್ಲಿಯಾರ್ ದುಆ ನೆರವೇರಿಸಿದರು. ಅನ್ಸಾರುದ್ದೀನ್ ಸ್ಟೂಡೆಂಟ್ ಫಾರಂ ಇದರ ನೂತನ ಅಧ್ಯಕ್ಷರಾಗಿ ಶಂಸುದ್ದೀನ್ ಎಸ್.ರವರು ಆಯ್ಕೆಗೊಂಡರು. ಉಪಾಧ್ಯಕ್ಷರಾಗಿ ಅಹಮ್ಮದ್ ಶಿಫಾನ್, ಕಾರ್ಯದರ್ಶಿಯಾಗಿ ಮೊಹಮ್ಮದ್ ಖಾಸಿಫ್, ಜತೆ ಕಾರ್ಯದರ್ಶಿಯಾಗಿ ಮೊಹಮ್ಮದ್ ಅಬ್ಬಾಸ್, ಕೋಶಾಧಿಕಾರಿಯಾಗಿ ಜಮೀರ್, ಸಂಘಟನಾ ಕಾರ್ಯದರ್ಶಿಯಾಗಿ ಸೈಯ್ಯದ್ ಸಮೀರ್, ಮಾಧ್ಯಮ ಕಾರ್ಯದರ್ಶಿಯಾಗಿ ರಶೀದ್ರವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಪೈರೋಝ್, ಮೊಹಮ್ಮದ್ ಮುಸ್ತಫಾ, ಮೊಹಮ್ಮದ್ ಖಲೀಮ್, ಮೊಹಮ್ಮದ್ ಅಮಾನುಲ್ಲರವರನ್ನು ಆಯ್ಕೆ ಮಾಡಲಾಯಿತು. ಸಲಹಾ ಸಮಿತಿ ಸದಸ್ಯರಾಗಿ ಇಸ್ಮಾಹಿಲ್ ಎಸ್., ಅಬ್ದುಲ್ ರಝಾಕ್ ಮುಸ್ಲಿಯಾರ್, ಇಲ್ಯಾಸ್ ಎಸ್., ಜಮಾಲ್ ಮುಸ್ಲಿಯಾರ್, ಮೊಹಮ್ಮದ್ ಕುಂಞಿ ಮುಸ್ಲಿಯಾರ್ರವರನ್ನು ಆಯ್ಕೆ ಮಾಡಲಾಯಿತು.