ಅರಿಯಡ್ಕ ಶ್ರೀ ಕ್ಷೆ.ಧ.ಗ್ರಾ. ಯೋಜನೆಯ ಒಕ್ಕೂಟಗಳ ಪದಗ್ರಹಣ

0

 

 

ಅರಿಯಡ್ಕ : ಶ್ರೀ.ಕ್ಷೆ.ಧ.ಗ್ರಾಮಾಭಿವೃದ್ಧಿ ಯೋಜನೆ(ರಿ)ಬಿ.ಸಿ ಟ್ರಸ್ಟ್ ಪುತ್ತೂರು ಇದರ ಮಾರ್ಗದರ್ಶನದಲ್ಲಿ ಪ್ರಗತಿ ಬಂಧು-ಸ್ವಸಹಾಯ ಸಂಘಗಳ ಒಕ್ಕೂಟ ಅರಿಯಡ್ಕ ಎ ಮತ್ತು
ಬಿ ಇದರ ಪದಗ್ರಹಣ ಸಮಾರಂಭ ಸರಕಾರಿ ಪ್ರೌಢ ಶಾಲೆ ಪಾಪೆಮಜಲು ಇದರ ಪ್ರೇರಣಾ ಸಭಾಂಗಣದಲ್ಲಿ ಜು.17 ರಂದು ನಡೆಯಿತು. ಸಭಾ ಕಾರ್‍ಯಕ್ರಮವು ಶ್ರೀಕೃಷ್ಣ ಭಜನಾಮಂದಿರ(ರಿ)ಕೌಡಿಚ್ಚಾರು ಇದರ ಜೀರ್ಣೊದ್ದಾರ ಸಮಿತಿ ಅಧ್ಯಕ್ಷ ವಾಸು ಪೂಜಾರಿ ಗುಂಡ್ಯಡ್ಕರವರ ಅಧ್ಯಕ್ಷತೆಯಲ್ಲಿ ನಡೆಯಿತು.ಅರಿಯಡ್ಕ ಗ್ರಾ.ಪಂಚಾಯತ್ ಅಧ್ಯಕ್ಷೆ ಸೌಮ್ಯ ಬಾಲಸುಬ್ರಹ್ಮಣ್ಯ ಕಾರ್‍ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.


ವೇದಿಕೆಯಲ್ಲಿ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಮಹಾಬಲ ರೈ ಒಳತ್ತಡ್ಕ ಅರಿಯಡ್ಕ ವಲಯ ಅಧ್ಯಕ್ಷರಾದ ನವೀನ.ಬಿ.ಡಿ, ಸ.ಹಿ.ಪ್ರಾ,ಶಾಲೆಯ ಶಿಕ್ಷಕಿ ಪುಷ್ಪಾವತಿ ಎಸ್,ಅರಿಯಡ್ಕ ಒಕ್ಕೂಟಎ ಇದರ ಅಧ್ಯಕ್ಷ ಕುಂಞರಾಮ ಮಣಿಯಾಣಿ ಕುತ್ಯಾಡಿ,ಅರಿಯಡ್ಕ ಬಿ ಒಕ್ಕೂಟ ಅಧ್ಷಕ್ಷ ವಿಶ್ವನಾಥ ರೈಕುತ್ಯಾಡಿ,ಉಪಸ್ಥಿತರಿದ್ದು ಸಂದರ್ಭೊಚಿತವಾಗಿ ಮಾತಾಡಿ ಶುಭ ಹಾರೈಸಿದರು.


ಸನ್ಮಾನ:ಅರಿಯಡ್ಕ ಎ ಮತ್ತು ಬಿ ಒಕ್ಕೂಟಗಳಲ್ಲಿ ಸೇವಾಪ್ರತಿನಿಧಿಗಳಾಗಿ ಸೇವೆ ಸಲ್ಲಿಸಿ ಇದೀಗ ವರ್ಗಾವಣೆಗೊಂಡಿರುವ ಸಾವಿತ್ರಿ ಪೊನ್ನೆತ್ತಳ್ಕ ಮತ್ತು ಸುಧಾಆಕಾಯಿಯವನ್ನು ಸನ್ಮಾನಿಸಿ
ಗೌರವಿಸಲಾಯಿತು ಮತ್ತು ಜನಸೇವಾ ಕೇಂದ್ರದ ಸಿ.ಎಸ್.ಸಿ ಅರ್ಪಿತಾರವನ್ನು ಗೌರವಿಸಲಾಯಿತು.ಇದೇ ಸಂದರ್ಭದಲ್ಲಿ ಒಕ್ಕೂಟಗಳ ನಿಕಟ ಪೂರ್ವ ಪದಾಧಿಕಾರಿಗಳಾದ ಕುಂಞರಾಮ ಮಣಿಯಾಣಿ,ವಿಶ್ವನಾಥ ರೈಕುತ್ಯಾಡಿ,ಶೈಲಾ.ಡಿ ಪೆರಿಗೇರಿ,ಚಂದ್ರಶೇಖರ ಪೂಜಾರಿ ಬೈರಮೂಲೆ,ನಯನ ಪೆರ್ನುಕು,ಹೇಮಲತಾ ಬಳ್ಳಿಕಾನ,ಸತ್ಯಭಾಮ ಕೌಡಿಚ್ಚಾರು,ಶಿವಪ್ರಸಾದ್ ಮಾಲಕೊಚ್ಚಿ,ದೇವಪ್ಪ ನಾಯ್ಕ ಪೆರ್ನುಕು ಮತ್ತು ಪುಷ್ಪಾವತಿ ಕುತ್ಯಾಡಿಯವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.


ನೂತನ ಪದಾಧಿಕಾರಿಗಳ ಪರವಾಗಿ ಒಕ್ಕೂಟ ಎ ಇದರ ಅಧ್ಯಕ್ಷ ದಯಾನಂದ ಗೌಡ ಆಕಾ, ಒಕ್ಕೂಟ ಬಿ ಇದರ ಅಧ್ಯಕ್ಷ ತಿಲಕ್ ರೈ ಕುತ್ಯಾಡಿ ಮುಂದಿನ ದಿನಗಳಲ್ಲಿ ಸಹಕಾರ ನೀಡಬೇಕೆಂದು ಸಭೆಯಲ್ಲಿ ವಿನಂತಿಸಿದರು.

ಕಾರ್‍ಯಕ್ರಮದಲ್ಲಿ ಅಚ್ಚುತ್ತ ಮಣಿಯಾಣಿ,ಮೋನಪ್ಪ ಕುಲಾಲ್,ಸತೀಶ್ ಕೊಪ್ಪಳ,ಮಾಧವಿ,ಸದಾಶಿವ ಮಣಿಯಾಣಿ,ಶೈಲಾ.ಡಿ ಪೆರಿಗೇರಿ,ವೇದಾವತಿ ಹೊಸಗದ್ದೆ,ಭವ್ಯರಾಜ್ ರೈ ಮದ್ಲ,ದಯಾನಂದ ಬೈರಮೂಲೆ,ಕಲಾವತಿ ಪೆರಿಗೇರಿ,ಶ್ರೀಧರ ಪೂಜಾರಿ ಕುಕ್ಕುತ್ತಡಿ,ಶಾಂಭವಿ ಪಿ.ಎಸ್ ಕುತ್ಯಾಡಿ,ಭಾಗೀರಥಿ ಕುರಿಂಜ,ಗಣೇಶ್ ದಾಸ್ ಬಳ್ಳಿಕಾನ,ಸೇವಾಪ್ರತಿನಿಧಿ ವಾಣಿಶ್ರೀ,ಜಯಂತಿ ಕುತ್ಯಾಡಿ,ಗಿರಿಜ ಪಾದೆಲಾಡಿ ಮುಂತಾದವರು ಸಹಕರಿಸಿದರು.

ತಾಲೂಕು ಜ್ಞಾನವಿಕಾಸ ಸಂಯೋಜಕಿ ಅಶ್ವಿನಿ ಪ್ರಾಸ್ತಾವಿಕ ಮಾತಾಡಿದರು.ಹೇಮಲತಾ ಬಳ್ಳಿಕಾನ ಪ್ರಾರ್ಥಿಸಿ ವರದಿ ವಾಚಿಸಿದರು,ನಯನ ಪೆರ್ನುಕು ಪರಿಚಯ ಪತ್ರವಾಚಿಸಿ,ಸೇವಾಪ್ರತಿನಿಧಿ ಜಯಲಕ್ಷ್ಮಿ ಪಟ್ಟೆ ಸ್ವಾಗತಿಸಿಸದರು,ಪುಷ್ಪಾವತಿ ಕುತ್ಯಾಡಿ ವಂದಿಸಿ,ಮೇಲ್ವಿಚಾರಕರಾದ ಮೋಹನ.ಕೆ ಕಾರ್‍ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here