ಲಯನ್ಸ್ ಕ್ಲಬ್ ಪುತ್ತೂರ್‍ದ ಮುತ್ತು ಪದ ಪ್ರದಾನ-ಸೇವೆ ಮಾಡುವ ಮನಸ್ಸಿದ್ದಾಗ ದೇವರ ಅನುಗ್ರಹ ಪ್ರಾಪ್ತಿ-ಎಚ್.ಎಂ ತಾರಾನಾಥ್

0

ಪುತ್ತೂರು: ಹತ್ತಾರು ಕೈ ಜೋಡಿಸಿ ಸೇವೆ ಮಾಡಿದಾಗ ಫಲ ಸಿಗುತ್ತದೆ, ಹೆಸರು ಬರುತ್ತದೆ. ಆದರೆ ಸೇವೆ ಮಾಡುವ ಮನಸ್ಸು ಬೇಕಾಗಿದೆ. ಸೇವೆ ಮಾಡುವ ಮನಸ್ಸಿದ್ದಾಗ ದೇವರು ಅನುಗ್ರಹ ಖಂಡಿತಾ ಪ್ರಾಪ್ತಿಯಾಗುತ್ತದೆ ಎಂದು ಲಯನ್ಸ್ ಕ್ಲಬ್ ಜಿಲ್ಲಾ ಮುಖ್ಯ ಸಂಯೋಜಕರಾದ ಎಂಜೆಎಫ್ ಎಚ್.ಎಂ ತಾರಾನಾಥ್‌ರವರು ಹೇಳಿದರು.

 


ಲಯನ್ಸ್ ಕ್ಲಬ್ ಪುತ್ತೂರು ಕಾವು ಪ್ರವರ್ತಿಸಿದ ಎರಡನೇ ಕ್ಲಬ್ ಲಯನ್ಸ್ ಕ್ಲಬ್ ಪುತ್ತೂರ್‍ದ ಮುತ್ತು ಇದರ 2022-23ನೇ ಸಾಲಿನ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭವು ಜು.೧೬ ರಂದು ಲಯನ್ಸ್ ಸೇವಾ ಮಂದಿರದಲ್ಲಿ ಸಂಜೆ ಜರಗಿದ್ದು, ಕ್ಲಬ್‌ನ ನೂತನ ಪದಾಧಿಕಾರಿಗಳ ಪದ ಪ್ರದಾನವನ್ನು ನೆರವೇರಿಸಿ ಅವರು ಮಾತನಾಡಿದರು. ಅಂತರ್ರಾಷ್ಟ್ರೀಯ ಲಯನ್ಸ್ ಸಂಸ್ಥೆಯು ಸೇವಾ ಮನೋಭಾವದಿಂದ ಕೂಡಿದ ಸಂಸ್ಥೆಯಾಗಿದೆ. ಯಾವುದೇ ಸಂಸ್ಥೆಯನ್ನು ಹುಟ್ಟು ಹಾಕುವುದು ಸುಲಭ, ಆದರೆ ಅದನ್ನು ಯಶಸ್ವಿಯಾಗಿ ಮುನ್ನೆಡೆಸಿಕೊಂಡು ಹೋಗುವುದು ಬಹಳ ಸವಾಲಿನಿಂದ ಕೂಡಿದೆ. ಈ ನಿಟ್ಟಿನಲ್ಲಿ ಲಯನ್ಸ್ ಕ್ಲಬ್ ಪುತ್ತೂರ್‍ದ ಮುತ್ತು ಕೇವಲ ಒಂದೇ ವರ್ಷದಲ್ಲಿ ಅನೇಕ ಗಣನೀಯ ಸಾಧನೆಯನ್ನು ಮಾಡಿರುವುದು ಶ್ಲಾಘನೀಯ ಎಂದರು.
ಲಯನ್ಸ್ ಪಿಡಿಜಿ ಡಾ.ಗೀತ್‌ಪ್ರಕಾಶ್‌ರವರು ಮಾತನಾಡಿ, ಕೊರೋನಾ ಸಂದರ್ಭದಲ್ಲಿ ಸ್ಥಾಪನೆಯಾದ ಲಯನ್ಸ್ ಕ್ಲಬ್ ಪುತ್ತೂರ್‍ದ ಮುತ್ತು ಸಂಸ್ಥೆಯು ಅದೇ ವರ್ಷ ಲಿಯೋ ಕ್ಲಬ್‌ನ್ನು ಹುಟ್ಟುಹಾಕಿರೋದು ವಿಶೇಷತೆ. ಸ್ಥಾಪನೆಯಾದ ಐದು ವರ್ಷದ ಒಳಗಿನ ಕ್ಲಬ್‌ಗಳಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಲಯನ್ಸ್ ಕ್ಲಬ್ ಪುತ್ತೂರ್‍ದ ಮುತ್ತು ಏಳನೇ ಸ್ಥಾನ ಗಳಿಸಿದೆ. ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸ್ಟಾಲನ್ನು ತೆರೆದು ಕ್ಲಬ್‌ಗೆ ನಿಧಿ ಸಂಗ್ರಹಿಸಿರೋದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಲಯನ್ಸ್ ಪ್ರಾಂತೀಯ ಅಧ್ಯಕ್ಷ ಸುದರ್ಶನ್ ಪಡಿಯಾರ್ ಮಾತನಾಡಿ, ತಾನು ಲಯನ್ಸ್ ಪ್ರಾಂತ್ಯ ಅಧ್ಯಕ್ಷನಾದರೂ ಪುತ್ತೂರು ಲಯನ್ಸ್ ಕ್ಲಬ್‌ನ್ನು ಮರೆಯಲು ಸಾಧ್ಯವಿಲ್ಲ. ಈಗಾಗಲೇ ಲಯನ್ಸ್ ಕ್ಲಬ್ ಪುತ್ತೂರ್‍ದ ಮುತ್ತು ಜನ ಮೆಚ್ಚುಗೆಯ ಕಾರ್ಯಗಳನ್ನು ಮಾಡುತ್ತಾ ಉತ್ತಮ ಹೆಸರನ್ನು ಗಳಿಸಿದ್ದು, ಮುಂದಿನ ದಿನಗಳಲ್ಲಿ ಕ್ಲಬ್‌ನ ಸಮಾಜಮುಖಿ ಕಾರ್ಯಗಳು ಮುಂದುವರೆಯಲಿ ಎಂದರು.

ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಲಯನ್ಸ್ ಕ್ಲಬ್ ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚೆಚ್ಚು ಬಲಿಷ್ಟವಾಗಿ ಬೆಳೆಯುತ್ತಿದೆ. ಈಗಾಗಲೇ ವಿವಿಧ ೬ ಕ್ಲಬ್‌ಗಳಲ್ಲಿ ಸುಮಾರು ೬೦ ಜನ ಸೇರ್ಪಡೆಯಾಗಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಮುಂದಿನ ದಿನಗಳಲ್ಲಿ ಮತ್ತೆರಡು ಕ್ಲಬ್‌ಗಳ ಉದಯ ಮಾಡುವ ಯೋಜನೆಯಿದೆ. ಲಯನ್ಸ್ ಪ್ರಾಂತ್ಯ-೭ ಉತ್ತಮ ಸಾಧನೆಯನ್ನು ಮಾಡುತ್ತಿದೆ ಎಂದರು.

ಲಯನ್ಸ್ ಕ್ಲಬ್ ಪುತ್ತೂರ್‍ದ ಮುತ್ತು ನಿರ್ಗಮಿತ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನ್ಹಸ್ ಸ್ವಾಗತಿಸಿ, ಮಾತನಾಡಿ, ಪುತ್ತೂರಿನಲ್ಲಿ ಮತ್ತೊಂದು ಲಯನ್ಸ್ ಕ್ಲಬ್ ಆಗಲೇಬೇಕು ಎಂದು ಪಣ ತೊಟ್ಟವರು ಕಾವು ಹೇಮನಾಥ ಶೆಟ್ಟಿಯವರು. ಕೊರೋನಾ ಸಂದರ್ಭದಲ್ಲಿ ಹೆಚ್ಚಿನ ಕೆಲಸ ಕಾರ್ಯಗಳನ್ನು ಮಾಡಲು ಸಾಧ್ಯವಾಗದಿದ್ದರೂ, ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ನೆರವು ನೀಡುವ ಕಾರ್ಯವನ್ನು ಮಾಡಿದ್ದೇವೆ. ಎಲ್ಲರ ಸಹಕಾರದಿಂದ ಕ್ಲಬ್ ಉತ್ತಮ ಸಾಧನೆಯನ್ನು ಮಾಡಿದ್ದು ಸಹಕಾರವಿತ್ತವರಿಗೆ ಕೃತಜ್ಞತೆ ಸಲ್ಲಿಸಿದರು.

 

ನೂತನ ಸದಸ್ಯರ ಸೇರ್ಪಡೆ:
ಲಯನ್ಸ್ ನಿರ್ಗಮಿತ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನ್ಹಸ್‌ರವರ ಪತ್ನಿ, ಮಂಗಳೂರಿನ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿರುವ ಪ್ರಿಯಲತಾ ಡಿ’ಸಿಲ್ವ, ನೂತನ ಕಾರ್ಯದರ್ಶಿ ಮೋಹನ್ ನಾಯಕ್‌ರವರ ಪತ್ನಿ ಇಂದಿರಾ ಮೋಹನ್ ನಾಯಕ್, ರಂಜಿನಿ ಶೆಟ್ಟಿ, ವತ್ಸಲಾ ಪದ್ಮನಾಭ ಶೆಟ್ಟಿ ಸಾಮೆತ್ತಡ್ಕ, ಕಟ್ಟಡ ನಿರ್ಮಾಣ ಗುತ್ತಿಗೆದಾರ ಮೊಹಮದ್ ಅಶ್ರಫ್ ಬನ್ನೂರು, ಬೀಡಿ ಉದ್ಯಮವನ್ನು ನಡೆಸುತ್ತಿರುವ ಮೊಹಮದ್ ಹನೀಫ್ ಮುಂಡೂರು, ಅಶೋಕ್ ಸಂಪ್ಯರವರನ್ನು ಜಿಲ್ಲಾ ಮುಖ್ಯ ಸಂಯೋಜಕರಾದ ಎಂಜೆಎಫ್ ಎಚ್.ಎಂ ತಾರಾನಾಥ್‌ರವರು ಲಯನ್ಸ್ ಪಿನ್ ತೊಡಿಸಿ ಕ್ಲಬ್‌ಗೆ ಸ್ವಾಗತಿಸಿ ಬರಮಾಡಿಕೊಂಡರು.

ನೂತನ ಕರ್ಯದರ್ಶಿ ಮೋಹನ್ ನಾಯಕ್‌ರವರು ಲಯನ್ಸ್ ಪ್ರಾರ್ಥನೆ ನುಡಿದರು. ನಿರ್ದೇಶಕ ಚಂದ್ರಶೇಖರ್ ಪಿರವರು ಧ್ವಜ ವಂದನೆ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ವಿಶ್ವ ಶಾಂತಿಗಾಗಿ ಒಂದು ನಿಮಿಷದ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಪದ ಪ್ರದಾನ ಅಧಿಕಾರಿಗಳ ಹಾಗೂ ನೂತನ ಪದಾಧಿಕಾರಿಗಳ ಪರಿಚಯವನ್ನು ಪ್ರಿಯಲತಾ ಡಿ’ಸಿಲ್ವ, ನೇಮಾಕ್ಷ ಸುವರ್ಣ, ವಿಕ್ರಂ ಶೆಟ್ಟಿ ಅಂತರ, ರವೀಂದ್ರ ಪೈರವರು ನೆರವೇರಿಸಿದರು. ವೇದಿಕೆಯಲ್ಲಿ ಲಿಯೋ ಕ್ಲಬ್ ಅಧ್ಯಕ್ಷೆ ರಂಜಿತಾ ಶೆಟ್ಟಿ, ಕಾರ್ಯದರ್ಶಿ ಲೆರಿಸ್ಸ ಮಸ್ಕರೇನ್ಹಸ್, ನಿರ್ಗಮಿತ ಕಾರ್ಯದರ್ಶಿ ದಿವಿತ್ ರೈರವರು ಉಪಸ್ಥಿತರಿದ್ದರು. ನೂತನ ಕಾರ್ಯದರ್ಶಿ ಮೋಹನ್ ನಾಯಕ್ ವಂದಿಸಿದರು. ನಿರ್ಗಮಿತ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ ಹಾಗೂ ಲಯನ್ಸ್ ಸಲಹೆಗಾರ ಗಣೇಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಸನ್ಮಾನ:
ಪದ ಪ್ರದಾನ ಅಧಿಕಾರಿ ಎಂಜೆಎಫ್ ಎಚ್.ಎಂ ತಾರಾನಾಥ್, ಪಿಡಿಜಿ ಡಾ.ಗೀತ್‌ಪ್ರಕಾಶ್, ಪ್ರಾಂತ್ಯ-೭ರ ನಿಕಟಪೂರ್ವ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಕಳೆದ ವರ್ಷ ಉತ್ತಮ ಕಾರ್ಯ ಮಾಡಿದ ನಿರ್ಗಮಿತ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನ್ಹಸ್ ಹಾಗೂ ನಿರ್ಗಮಿತ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ, ಕ್ಲಬ್ ಮುನ್ನೆಡೆಸಲು ಮಾರ್ಗದರ್ಶನವಿತ್ತ ಗೈಡಿಂಗ್ ಲಯನ್ ಗಣೇಶ್ ಶೆಟ್ಟಿ, ಲಯನ್ಸ್ ಮಾಜಿ ವಲಯಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಕ್ಲಬ್ ಮುನ್ನೆಡೆಸಲು ಉತ್ತಮ ಸಹಕಾರವಿತ್ತ ನೂತನ ಕೋಶಾಧಿಕಾರಿ ರವಿಚಂದ್ರ ಆಚಾರ್ಯ, ನೂತನ ಕೋಶಾಧಿಕಾರಿ ಮೋಹನ್ ನಾಯಕ್, ಸ್ನಾತಕೋತ್ತರ ಎಂಕಾಂನಲ್ಲಿ ರ್‍ಯಾಂಕ್ ಗಳಿಸಿದ ನಿರೀಶ್ಮಾ ಎನ್.ಸುವರ್ಣ, ದೀಪಾವಳಿ ಸಂದರ್ಭ ದರ್ಬೆಯಲ್ಲಿ ಪಟಾಕಿ ಸ್ಟಾಲ್ ಹಾಕಲು ತನ್ನ ಅಂಗಡಿ ಎದುರುಗಡೆ ಸ್ಥಳಾವಕಾಶ ಒದಗಿಸಿದ ದಿನೇಶ್ ನಾಕ್, ಕೊರೋನಾ ಸಂದರ್ಭದಲ್ಲಿ ಅಗತ್ಯವುಳ್ಳವರಿಗೆ ಆಂಬುಲೆನ್ಸ್ ಚಾಲಕನಾಗಿ ಸೇವೆಗೈಯ್ದ ಡೊನ್ ಬೊಸ್ಕೊ ಕ್ಲಬ್‌ನ ಮಾಜಿ ಅಧ್ಯಕ್ಷ ರೋಶನ್ ಡಾಯಸ್, ಕಾವು ಹೇಮನಾಥ ಶೆಟ್ಟಿಯವರ ಸಾರಥಿ ದಿನೇಶ್ ಪಾಣಾಜೆರವರನ್ನು ಗುರುತಿಸಿ ಸನ್ಮಾನಿಸಲಾಯಿತು.

ಸೇವಾ ಚಟುವಟಿಕೆಗಳು:
ಇತ್ತೀಚೆಗೆ ನಡೆದ ಸ್ಕೂಟರ್ ಅಪಘಾತದಲ್ಲಿ ಗಾಯಾಳುವಾದ ಕು|ಸೌಮ್ಯ ಎಂಬವರಿಗೆ ರೂ.೧೦ ಸಾವಿರ, ಕು|ಮೇಘ ಎಂಬವರ ಶಾಲಾ ಶಿಕ್ಷಣದ ಶುಲ್ಕ ರೂ.೨ ಸಾವಿರ, ಪುತ್ತೂರು ಲಯನ್ಸ್ ಕ್ಲಬ್ ಮಾಜಿ ವಲಯಾಧ್ಯಕ್ಷ ಶಿವಪ್ರಸಾದ್ ಶೆಟ್ಟಿಯವರಿಂದ ಲಯನ್ಸ್ ಸೇವಾ ಮಂದಿರಕ್ಕೆ ಟೀಪಾಯಿ ಹಸ್ತಾಂತರ, ಎಸೆಸ್ಸೆಲ್ಸಿ ವಿದ್ಯಾರ್ಥಿನಿ ಕು|ಸ್ವಾತಿ ಎಂಬಾಕೆಗೆ ರೂ.೧ ಸಾವಿರ ಸ್ಕಾಲರ್‌ಶಿಪ್, ಕ್ಲಬ್ ವತಿಯಿಂದ ಈಗಾಗಲೇ ದತ್ತು ಪಡೆದ ಕು|ಪವಿಶ್ರೀ ಎಂಬ ವಿದ್ಯಾರ್ಥಿನಿಗೆ ಸ್ಕಾಲರ್‌ಶಿಪ್, ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಅಭಿಷೇಕ್ ಮತ್ತು ಐಶ್ವರ್ಯರವರಿಗೆ ರೂ.೧೦ ಸಾವಿರರವರಿಗೆ ನೆರವನ್ನು ನೀಡಲಾಯಿತು.

ಎಲ್ಲರ ಸಹಕಾರದೊಂದಿಗೆ ಕ್ಲಬ್ ಉತ್ತುಂಗತೆಯತ್ತ..
ಲಯನ್ಸ್ ಕ್ಲಬ್ ಪುತ್ತೂರ್‍ದ ಮುತ್ತು ಇದರ ಸ್ಥಾಪಕ ಸದಸ್ಯನಾಗಿ, ಕೋಶಾಧಿಕಾರಿಯಾಗಿ ಇದೀಗ ಅಧ್ಯಕ್ಷನಾಗಿ ಆಯ್ಕೆಯಾಗಿದ್ದಕ್ಕೆ ಖುಶಿಯಾಗಿದೆ. ಹೆದರಬೇಡಿ, ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಧೈರ್ಯ ತುಂಬಿದವರು ಕಾವು ಹೇಮನಾಥ ಶೆಟ್ಟಿಯವರು. ನಮ್ಮ ಕ್ಲಬ್ ಪ್ರಥಮ ವರ್ಷದಲ್ಲೇ ಟಾಪ್ ಹತ್ತರಲ್ಲಿ ಏಳನೇ ಸ್ಥಾನ ಪಡೆಯಲು ನಿರ್ಗಮಿತ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನ್ಹಸ್‌ರವರ ತಂಡ ಮಾಡಿದ್ದಾರೆ. ಎಲ್ಲರ ಸಹಕಾರದಿಂದ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಕ್ಲಬ್‌ನ ಉತ್ತುಂಗತೆಯಲ್ಲಿ ಪ್ರಯತ್ನ ಮಾಡಲಿದ್ದೇನೆ ಎಂಬ ಭರವಸೆ ನನ್ನದಾಗಿದೆ. -ಕೇಶವ ಪೂಜಾರಿ ಬೆದ್ರಾಳ, ಅಧ್ಯಕ್ಷರು, ಲಯನ್ಸ್ ಕ್ಲಬ್ ಪುತ್ತೂರ್‍ದ ಮುತ್ತು

 

ಪದ ಪ್ರದಾನ..
ಕ್ಲಬ್‌ನ ನೂತನ ಅಧ್ಯಕ್ಷರಾದ ಕೇಶವ ಪೂಜಾರಿ, ಪ್ರಧಾನ ಕಾರ್ಯದರ್ಶಿ ಎಸ್.ಮೋಹನ್ ನಾಯಕ್, ಕೋಶಾಧಿಕಾರಿ ರವಿಚಂದ್ರ ಆಚಾರ್ಯ, ನಿಕಟಪೂರ್ವ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನ್ಹಸ್, ಪ್ರಥಮ ಉಪಾಧ್ಯಕ್ಷ ವಿಕ್ರಂ ಶೆಟ್ಟಿ ಅಂತರ, ದ್ವಿತೀಯ ಉಪಾಧ್ಯಕ್ಷ ಮಂಜುನಾಥ್ ಎಂ, ಕ್ಲಬ್ ಟೇಮರ್ ನಾಗೇಶ್ ಆಚಾರ್ಯ, ಕ್ಲಬ್ ಟಾಲ್ ಟಿಸ್ಟರ್ ಅಬೂಬಕ್ಕರ್ ಮುಲಾರ್, ಎಲ್‌ಸಿಐಎಫ್ ಚೇರ್‌ಮ್ಯಾನ್ ಬಿ.ರವಿಪ್ರಸಾದ್ ಶೆಟ್ಟಿ, ಮೆಂಬರ್‌ಶಿಪ್ ಚೇರ್‌ಮ್ಯಾನ್ ಅನ್ವರ್ ಖಾಸಿಂ, ಸರ್ವಿಸ್ ಚೇರ್‌ಮ್ಯಾನ್ ರವೀಂದ್ರ ಪೈ, ನಿರ್ದೇಶಕರುಗಳಾದ ಜಗದೀಶ್ ಕಜೆ, ನೇಮಾಕ್ಷ ಸುವರ್ಣ, ಚಂದ್ರಶೇಖರ್ ಪಿ, ಸಿಲ್ವೆಸ್ತರ್ ಡಿ’ಸೋಜ, ಬಿ.ಎಚ್ ಅಹಮದ್ ಬಶೀರ್, ಕೆ.ದಾಮೋದರ್ ಭಂಡಾರ್‍ಕರ್, ಬಿ.ನರೇಂದ್ರ ಬಾಳಿಗ, ಅಬ್ದುಲ್ ನಿಶಾದ್‌ರವರಿಗೆ ಜಿಲ್ಲಾ ಮುಖ್ಯ ಸಂಯೋಜಕರಾದ ಎಂಜೆಎಫ್ ಎಚ್.ಎಂ ತಾರಾನಾಥ್‌ರವರು ಪದ ಪ್ರದಾನ ನೆರವೇರಿಸಿದರು.

LEAVE A REPLY

Please enter your comment!
Please enter your name here