ನಿಡ್ಪಳ್ಳಿ; ಭಾರೀ ಮಳೆಗೆ ರಸ್ತೆ ಬದಿ ಕುಸಿತ, ಅಪಾಯದಲ್ಲಿ ಮನೆ

0

ನಿಡ್ಪಳ್ಳಿ; ಇತ್ತೀಚೆಗೆ ಸುರಿದ ಭಾರೀ ಮಳೆಗೆ ನಿಡ್ಪಳ್ಳಿ ಗ್ರಾಮದ ಎಂಪೆಕಲ್ಲು ಎಂಬಲ್ಲಿ ರಸ್ತೆ ಬದಿ ಕುಸಿದು ಬಿದ್ದಿದೆ. ಕೂಟೇಲು ಸೇತುವೆ ನಿರ್ಮಾಣ ಆರಂಭವಾದ ನಂತರ ಕೂಟೇಲು ಎಂಪೆಕಲ್ಲು ಬೆಟ್ಟಂಪಾಡಿ ಸಂಪರ್ಕ ಕಲ್ಪಿಸುವ ಬದಲಿ ರಸ್ತೆಯ ಎಂಪೆಕಲ್ಲು ಎಂಬಲ್ಲಿ ರಸ್ತೆಯ ಮೇಲ್ಬದಿ ಕುಸಿದು ಬಿದ್ದಿದೆ.


ಕುಸಿದ ರಸ್ತೆಯ ಬದಿಯ ಸ್ವಲ್ಪ ದೂರದಲ್ಲಿ ಇರುವ ಅಲಿಕುಂಞ ಎಂಬವರ ಮನೆಯ ಅಂಗಳಕ್ಕೆ ಕಲ್ಲು ಕಟ್ಟಿದ್ದು ಅದು ಕುಸಿದು ಬಿದ್ದು ಮನೆ ಅಪಾಯದಂಚಿನಲ್ಲಿದ್ದು ಆತಂಕ ಸ್ಥಿತಿ ನಿರ್ಮಾಣವಾಗಿದೆ. ಕುಸಿದ ಮಣ್ಣು ಮತ್ತು ಕಲ್ಲು ರಸ್ತೆಯ ಮೇಲೆ ಬಿದ್ದ ಪರಿಣಾಮ ಅದನ್ನು ಈಗ ತೆರವು ಗೊಳಿಸಲಾಗಿದೆ. ಮನೆಯವರು ಬಡ ಕುಟುಂಬವಾಗಿದ್ದು ಅಂಗಳ ಬದಿ ಕಟ್ಟಲು ಅಸಹಾಯಕರಾಗಿದ್ದು ಸಂಬಂಽಸಿದ ಇಲಾಖೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳ ಬಹುದೆಂಬ ನಿರೀಕ್ಷೆಯಲ್ಲಿದ್ದಾರೆ.

LEAVE A REPLY

Please enter your comment!
Please enter your name here