ಮುಂಗಾರು ಕವಿಗೋಷ್ಠಿ ಮತ್ತು ದಿ.ಚಿದಾನಂದ್ ಕಾಮತ್ ಸಂಸ್ಮರಣೆ ಕಾರ್ಯಕ್ರಮ

0

ಪುತ್ತೂರು: ವಿದ್ಯಾರ್ಥಿಗಳಲ್ಲಿ ಸಾಹಿತ್ಯದೆಡೆಗೆ ಒಲವು ಮೂಡಿಸುವ ಕಾರ್ಯವಾಗಬೇಕು. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ನಿರಂತರ ಮೂಡಿ ಬರಬೇಕು. ದಿ. ಚಿದಾನಂದ ಕಾಮತ್‌ರವರು ಮಕ್ಕಳ ಪ್ರತಿಭೆಗೆ ವೇದಿಕೆಯಾಗಿದ್ದರು ಎಂದು ಮಧು ಪ್ರಪಂಚ ಪತ್ರಿಕೆಯ ಸಂಪಾದಕ ಮತ್ತು ನಿವೃತ್ತ ಶಿಕ್ಷಕ ನಾರಾಯಣ ರೈ ಕುಕ್ಕುವಳ್ಳಿ ಹೇಳಿದರು.


ಚಿಗುರೆಲೆ ಸಾಹಿತ್ಯ ಬಳಗ ಮತ್ತು ಸ್ಮರಣೀಯ ಚಿದಾನಂದ ಕಾಸರಗೋಡು ಅಭಿಮಾನಿ ಬಳಗದ ಜಂಟಿ ಆಶ್ರಯದಲ್ಲಿ ಮಂಜಲ್ಪಡ್ಪು ಸುದಾನ ವಸತಿಯುತ ಶಾಲೆಯ ಎಡ್ವರ್ಡ್ ಹಾಲ್‌ನಲ್ಲಿ ಜು. 17ರಂದು ನಡೆದ ಮುಂಗಾರು ಕವಿಗೋಷ್ಠಿ ಮತ್ತು ದಿ.ಚಿದಾನಂದ್ ಕಾಮತ್ ಕಾಸರಗೋಡು ಸಂಸ್ಮರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಯುವ ಪ್ರತಿಭೆಗಳು ಗುರಿಯತ್ತ ಹೆಜ್ಜೆ ಇಡಬೇಕು:

ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ಮಾತನಾಡಿ, ಎಲ್ಲಾ ಕ್ಷೇತ್ರದಲ್ಲಿ ತೊಡಕುಗಳು ಇದ್ದೇ ಇರುತ್ತದೆ. ಟೀಕಿಸುವವರು, ಟಿಪ್ಪಣಿಗಳನ್ನು ಹೇಳುವವರು ಕೂಡ ಇರುತ್ತಾರೆ. ಯಶಸ್ಸನ್ನು ಕುಂಠಿತಗೊಳಿಸುವ ಹಾದಿಯ ಬಗ್ಗೆ ತಲೆಕೆಡಿಸಕೊಳ್ಳದೆ ಗುರಿಯತ್ತ ಯುವ ಪ್ರತಿಭೆಗಳು ಹೆಜ್ಜೆಯಿಡಬೇಕು. ಜೊತೆಗೆ ಸಮಾಜದಲ್ಲಿ ಧನಾತ್ಮಕ ಅಂಶಗಳನ್ನು ನಮ್ಮ ತೆಕ್ಕೆಗೆ ತೆಗದುಕೊಳ್ಳಬೇಕು ಎಂದರು. ಮಂಗಳೂರಿನ ಕೆಎಂಸಿಯ ನಿವೃತ್ತ ಉದ್ಯೋಗಿ ಸುದರ್ಶನ್ ಮುರರವರು ಮಾತನಾಡಿ, ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಹೊರಸೂಸಲು ಪ್ರೋತ್ಸಾಹ ಅಗತ್ಯ. ಮಕ್ಕಳಿಂದ ಹಿಡಿದು ಹಿರಿಯರನ್ನು ಪ್ರೋತ್ಸಾಹಿಸುವಂತಹ ಸೇವೆಯನ್ನು ಚಿದಾನಂದ್ ಕಾಮತ್ ಮಾಡುತ್ತಿದ್ದರು ಎಂದರು.

ಸನ್ಮಾನ: ಅಧ್ಯಕ್ಷತೆ ವಹಿಸಿದ್ದ ರೇ ವಿಜಯ್ ಹಾರ್ವಿನ್ ಕಾರ್ಯಕ್ರಮ ಉದ್ಘಾಟಿಸಿದರು. ಸಾಹಿತ್ಯ ಕಲೆಗೆ ಸದಾ ಪ್ರೋತ್ಸಾಹಿಸಿ ಬಳಗವನ್ನು ಬೆನ್ನು ತಟ್ಟುವ ರೇ ವಿಜಯ ಹಾರ್ವಿನ್ ರವರಿಗೆ ಚಿಗುರೆಲೆ ವತಿಯಿಂದ ಅಭಿಮಾನದ ಸನ್ಮಾನವನ್ನು ಮಾಡಲಾಯಿತು.

ಕವಿಗೋಷ್ಠಿ: ಕವಿಗೋಷ್ಠಿಗೆ ಪ್ರಥಮ ಬಾರಿ ವಿಶೇಷ ಚೇತನ ಬಾಲಕ ರಕ್ಷಿತ್ ಗೋಳ್ತಮಜಲು ಚಾಲನೆ ನೀಡಿದರು. ಕವಿಗೋಷ್ಠಿಯಲ್ಲಿ ಲಿಖಿತ ಕೋಟ್ಯಾನ್, ಪುನೀತ್ ಕುಮಾರ್, ರಹಾನ, ಮೋಕ್ಷಿತಾ ಮಾಯಿಲಕೊಚ್ಚಿ, ಮಹಮ್ಮದ್ ಸಿಂಸಾರುಲ್ ಹಕ್, ಧನ್ವಿತಾ ಕಾರಂತ್, ಶ್ರೀಕಲಾ ಕಾರಂತ್, ಆಶಾ ಅಡೂರ್, ಗುಣಾಜೆ ರಾಮಚಂದ್ರ ಭಟ್, ರಮ್ಯ ಎನ್, ಬೃಂದಾ ಪಿ ಮುಕ್ಕೂರು, ಮಲ್ಲಿಕಾ ಜೆ ರೈ, ನವೀನ್ ಕುಲಾಲ್ ಚಿಪ್ಪಾರು, ಶಿವಪ್ರಸಾದ್ ಕೊಕ್ಕಡ, ರಶ್ಮಿ ಸನಿಲ್ ಮಂಗಳೂರು, ಶಾಂತಾ ಪುತ್ತೂರು, ಶ್ರೇಯಾ ಮಿಂಚಿನಡ್ಕ, ಶ್ರೇಯಾ ಸಿ ಪಿ ಕಡಬ, ಅನನ್ಯ. ಹೆಚ್. ಸುಬ್ರಹ್ಮಣ್ಯ, ಶಿರ್ಷಿತಾ ಕಾರಂತ್, ವಿಂಧ್ಯಾ. ಎಸ್. ರೈ., ಉಮಾಶಂಕರಿ ಮರಿಕೆ, ಪರಿಮಳ, ಬಾಲಕೃಷ್ಣ ಕೇಪುಳು, ಪ್ರಭಾಕರ್ ಭಟ್. ಟಿ. ಪೋಳ್ಯ, ರೇಖಾ ಸುದೇಶ್ ರಾವ್, ಜಯಾನಂದ ಪೆರಾಜೆ, ನಾರಾಯಣ ನಾಯ್ಕ ಕುದುಕೋಳಿ, ಪಂಕಜಾ ಕೆ ಮುಡಿಪು, ಆಶಾ ಮಯ್ಯ. ಪುತ್ತೂರು, ಆಶಾ ಅಡೂರ್, ಆನಂದ ರೈ ಅಡ್ಕಸ್ಥಳ,ದೀಪ್ತಿ ಅಡ್ಡಂತ್ತಡ್ಕ, ಯಾನ್ವಿ ಡಿ. ಪೂಜಾರಿ, ಸುಜಯ ಎಸ್, ಗೀತಾ ಲಕ್ಷ್ಮೀಶ್, ಶಶಿಧರ್ ಏಮಾಜೆ ಕವನ ವಾಚಿಸಿದರು. ಪ್ರಥಮ ಬಾರಿ ಕವಿಗೋಷ್ಠಿ ಅಧ್ಯಕ್ಷರಾದ ಗೀತಾ ಲಕ್ಷ್ಮೀಶ್ ಮುಂಗಾರು ಕವಿಗೋಷ್ಠಿಯ ಅದೃಷ್ಟವಂತ ಕವಿಯಾಗಿ ಆಯ್ಕೆಯಾದರು. ಅದೃಷ್ಟವಂತ ಕವಿಯನ್ನು ಚೀಟಿ ಎತ್ತುವ ಮೂಲಕ ಕು. ದುರ್ಗಾಶ್ರೀ ಉರ್ಲಾಂಡಿ ಆಯ್ಕೆ ಮಾಡಿದರು. ಕಾರ್ಯಕ್ರಮದಲ್ಲಿ ಕವಿಗೋಷ್ಠಿಯ ಸಂಚಾಲಕಿ ಚೈತ್ರ ಮಾಯಿಲಕೊಚ್ಚಿ, ಕಾರ್ಯಕ್ರಮದ ಸಂಯೋಜಕ ನಾರಾಯಣ ಕುಂಬ್ರ ಉಪಸ್ಥಿತರಿದ್ದರು. ಅಪೂರ್ವ ಕಾರಂತ್ ಪ್ರಾರ್ಥಿಸಿದರು. ಮಂಜುಶ್ರೀ ನಲ್ಕ ಸ್ವಾಗತಿಸಿ, ಅನ್ನಪೂರ್ಣ ಎನ್. ಕೆ. ವಂದಿಸಿದರು. ಪ್ರತೀಕ್ಷಾ ಆರ್ ಕಾವು ಮತ್ತು ಸಮ್ಯಕ್ತ್ ಜೈನ್ ಕವಿಗೋಷ್ಠಿ ನಿರ್ವಹಿಸಿದರು. ಸುಪ್ರೀತಾಚರಣ್ ಪಾಲಪ್ಪೆ ಕಡಬ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here