ಕಬಕ : ಗಲ್ಫ್ ಯೂತ್ಸ್ ಕಬಕ ಜಮಾಅತ್ ವತಿಯಿಂದ ವಿದ್ಯಾರ್ಥಿಗಳಿಗೆ ಮಾಹಿತಿ ಶಿಬಿರ, ಪ್ರತಿಭಾ ಪುರಸ್ಕಾರ

0

ಪುತ್ತೂರು: ಕಳೆದ ಆರು ಏಳು ವರ್ಷಗಳಿಂದ ಕಬಕದ ಬಡನಿರ್ಗತಿಗರ ಸೇವೆಗಳಿಗೆ ಹೆಚ್ಚು ಆದ್ಯತೆ ನೀಡುವ ಗಲ್ಫ್ ಯೂತ್ಸ್ ಕಬಕ ಜಮಾಅತ್ ಇದೀಗ ಕಳೆದ ಮೂರು ವರ್ಷಗಳಿಂದ ಶಾಲಾ ವಿದ್ಯಾರ್ಥಿಗಳನ್ನು ಹುರಿದುಂಬಿಸುವ ಪ್ರೇರೇಪಿಸುವ ಸಲುವಾಗಿ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಾ ಇದೆ.

ಇದರ ಭಾಗವಾಗಿ ಕಬಕ ಮೌಲಾನ ಕೋಟೆಜ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಉದ್ಘಾಟನೆಯನ್ನು ಕಬಕ ಖತೀಬ್ ಅಲ್ ಹಾಜ್ ಝುಬೈರ್ ಅಝ್ಹರಿ ರವರು ದುವಾ ಮತ್ತು ಆಶೀರ್ವಚನ ಮೂಲಕ ಉದ್ಘಾಟಿಸಿ ಮಾತಾಡಿದರು. ಮದರಸ ಮತ್ತು ಲೌಕಿಕ ವಿದ್ಯಾಭ್ಯಾಸ ತಾಯಿ ಮತ್ತು ತಂದೆಗೆ ಸಮ ಎರಡನ್ನು ಸಮನಾಗಿ ವಿದ್ಯಾರ್ಜನೆ ಮಾಡಬೇಕು. ನಮ್ಮ ಸಮುದಾಯ ಜ್ಞಾನಾರ್ಜನೆ ಜೊತೆಗೆ ವಿವಿಧ ದೊಡ್ಡ ದೊಡ್ಡ ಹುದ್ದೆಯನ್ನು ಅಲಂಕರಿಸಬೇಕು ಎಂದು ಕರೆ ನೀಡಿದರು.

ಪ್ರಸ್ತಾವಿಕ ಭಾಷಣ ಮಾಡಿದ ಸಂಚಾಲಕರಲ್ಲೋರ್ವರಾದ ಬಶೀರ್ ಹಾಜಿ ಅಬುದಾಬಿ ಈ ಸಂಸ್ಥೆ ನಡೆದು ಬಂದ ಹಾದಿಯ ಬಗ್ಗೆ ವಿಸ್ತಾರವಾಗಿ ಸಭೆಗೆ ತಿಳಿಸಿದರು. ಸಭೆಗೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪುತ್ತೂರು ಕಮ್ಯುನಿಟಿ ಸೆಂಟರ್ನ ಹನೀಫ್ ಇವರು 5 ವರ್ಷಗಳ ಹಿಂದೆ ಹಲವು ಜಮಾತ್ ಗಳಲ್ಲಿ ಕಬಕದ ಅನಿವಾಸಿಗಳ ಮಾದರಿ ಕೆಲಸವನ್ನು ಪರಿಚಯಿಸಿದ ಬಗ್ಗೆ ಮತ್ತು ಸಮುದಾಯದ ವಿದ್ಯಾಭ್ಯಾಸಕ್ಕಾಗಿ ಅಮ್ಜದ್ ಖಾನ್ ರವರ ಉತ್ಸಹ ಹಾಗೂ ಗಲ್ಫ್ ಯೂತ್ಸ್ ಬಗ್ಗೆ ಮೆಚ್ಚುಗೆಯ ಮಾತನಾಡಿದರು.

ಪ್ರಮುಖ ಮಾಹಿತಿದಾರರಾಗಿ ಆಗಮಿಸಿದ್ದ ಅಹಮದ್ ಶಬೀಬ್ ಬೆಂಗಳೂರು(CEO Shipthis Inc) ITBT ಬಗ್ಗೆ ಮಾತಾನಾಡಿ ನೆರೆದ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಕಬಕದವರೇ ಆದ ಈ ಸಾಲಿನ ಚಾರ್ಟೆರ್ಡ್ ಅಕೌಂಟೆಂಟ್(CA) ಉತ್ತೀರ್ಣಗೊಂಡ ಮೊಹಮ್ಮದ್ ಪೈರೋಝ್ ಬಗ್ಗುಮೂಲೆ ಇವರು ತಮ್ಮ ವಿದ್ಯಾಭ್ಯಾಸದ ಹಾಗೂ ಅನುಭವವನ್ನು ಹಂಚಿಕೊಂಡು ವಿದ್ಯಾರ್ಥಿಗಳು ಶ್ರಮ ಪಡಬೇಕು, ಶ್ರಮ ಮತ್ತು ಫಲಿತಾಂಶ ಸಂಬಂಧವನ್ನು ತಿಳಿಸಿದರು.

ನಂತರ ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಗಲ್ಫ್ ಯೂತ್ಸ್ ಇದರ ಪ್ರ.ಕಾರ್ಯದರ್ಶಿ ಶರೀಫ್ ಅಹ್ಮದ್ ಕತಾರ್ ತಾನು ಕಬಕದ ಸರಕಾರಿ ಪ್ರೈಮರಿ ಹಾಗೂ ಹೈಸ್ಕೂಲ್ ನಲ್ಲಿ ವಿದ್ಯಾಭ್ಯಾಸ ಕಲಿತು, ಮಂಗಳೂರಿನ KPT ಕಾಲೇಜಲ್ಲಿ ಸಿವಿಲ್ ಇಂಜಿನಿಯರಿಂಗ್ ನಲ್ಲಿ ರಾಜ್ಯಕ್ಕೆ ಐದನೇ ರಾಂಕ್ ಗಳಿಸಿದ್ದನ್ನು ಇಲ್ಲಿ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಸ್ಮರಿಸುವುದರೊಂದಿಗೆ ತಮ್ಮ ಅನುಭವಗಳನ್ನು ಹಂಚಿ ವಿದ್ಯಾರ್ಥಿಗಳಿಗೆ ಪ್ರೇರಣೆ ಜೊತೆಗೆ ಕಲಿಕೆ ಒಂದು ನಿರಂತರ ಪ್ರಕ್ರಿಯೆ, ಪ್ರೊಫೆಷನಲ್ ಕೋರ್ಸ್ ಗಳ ಅವಶ್ಯಕತೆಯ ಬಗ್ಗೆ ಮಾಹಿತಿ ನೀಡಿದರು.

ಸಭಾಧ್ಯಕ್ಷ ಸ್ಥಾನವನ್ನು ಸಮಿತಿಯ ಮಾಜಿ ಅಧ್ಯಕ್ಷರು ಹಾಲಿ ಸಂಚಾಲಕರಲ್ಲೋರ್ವರಾದ ಅಮ್ಜದ್ ಖಾನ್ ವಹಿಸಿಕೊಂಡಿದ್ದರು. ವೇದಿಕೆಯಲ್ಲಿ ಮೊಯೂದ್ದಿನ್ ಜುಮಾ ಮಸೀದಿ ಕಬಕ ಇದರ ಕೋಶಾಧಿಕಾರಿ ಹಂಝ ತಾಜ್ಮಹಲ್ ವೇದಿಕೆಯಲ್ಲಿದ್ದರು.

ಈ ಸಭೆಗೆ ಪ್ರಮುಖವಾಗಿ ಜಮಾತಿನ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ವಿದ್ಯಾರ್ಥಿಗಳ ಪೋಷಕರಿಗೆ ಆಮಂತ್ರಣ ನೀಡಲಾಗಿತ್ತು.

ಈ ಸಮಾರಂಭದಲ್ಲಿ ಜಮಾತಿಗೆ ಒಳಪಟ್ಟ 2022 ಸಾಲಿನ SSLC PUC ಪಬ್ಲಿಕ್ ಪರೀಕ್ಷೆಯಲ್ಲಿ 80% ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಲಾಯಿತು ಹಾಗೂ ಒರ್ವ ಕುರಾನ್ ಗ್ರಂಥ ಕಂಠ ಪಾಠ ಮಾಡಿದ (ಹಾಫಿಝ್)ವರನ್ನು ಗುರುತಿಸಿ ಸನ್ಮಾನಿಸಯಿತು.

ಕಲಂದರ್ ದುಬೈ ಅತಿಥಿಗಳನ್ನು ಸ್ವಾಗತಿಸಿ, ಸಿದ್ದೀಕ್ HKBK ಧನ್ಯವಾದ ಸಮರ್ಪಿಸಿದರು. ಫಾರೂಕ್ ತವಕ್ಕಲ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here